ದೇಶವನ್ನು ಅರಾಜಕತೆಯಿಂದ ತುರ್ತಾಗಿ ಬಚಾವ್ ಮಾಡಬೇಕಾಗಿದೆ - ಚಂದ್ರಬಾಬು ನಾಯ್ಡು

ಮುಂಬರುವ ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ದೇಶವನ್ನು ಅರಜಾಕತೆಯಿಂದ ಪಾರು ಮಾಡುವ ನಿಟ್ಟಿನಲ್ಲಿ ಬಿಜೆಪಿ ವಿರುದ್ದ ಎಲ್ಲ ಪಕ್ಷಗಳು ಒಂದಾಗಬೇಕಾಗಿದೆ ಎಂದು ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ತಿಳಿಸಿದರು.

Last Updated : Oct 28, 2018, 03:17 PM IST
ದೇಶವನ್ನು ಅರಾಜಕತೆಯಿಂದ ತುರ್ತಾಗಿ ಬಚಾವ್ ಮಾಡಬೇಕಾಗಿದೆ - ಚಂದ್ರಬಾಬು ನಾಯ್ಡು title=
Photo:DNA

ನವದೆಹಲಿ: ಮುಂಬರುವ ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ದೇಶವನ್ನು ಅರಾಜಕತೆಯಿಂದ ಪಾರು ಮಾಡುವ ನಿಟ್ಟಿನಲ್ಲಿ ಬಿಜೆಪಿ ವಿರುದ್ದ ಎಲ್ಲ ಪಕ್ಷಗಳು ಒಂದಾಗಬೇಕಾಗಿದೆ ಎಂದು ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ತಿಳಿಸಿದರು.

ಸರಣಿ ಟ್ವೀಟ್ ಮೂಲಕ ಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ನಾಯ್ಡು " ಬಿಜೆಪಿ ನಿಜ ಮುಖವನ್ನು ತಿಳಿಯಲು ಇನ್ನು ಎಷ್ಟು ವಂಚನೆ ಪ್ರಕರಣಗಳನ್ನು ನೋಡಬೇಕು.ಸುಳ್ಳು ಭರವಸೆಗಳ ಹಿಂದೆ ರೈತರ ಸಾಲದ ಸಮಸ್ಯೆ, ಹೆಚ್ಚುತ್ತಿರುವ ಭ್ರಷ್ಟಾಚಾರದ ಪ್ರಕರಣ, ಮಹಿಳೆಯರ ಮೇಲೆ ಹಲ್ಲೆ, ಕೋಮು ದಳ್ಳುರಿ, ಹೆಚ್ಚುತ್ತಿರುವ ಅಶಾಂತಿ ಇವೆಲ್ಲವುಗಳು ಕೂಡ ಪ್ರಜಾಪ್ರಭುತ್ವಕ್ಕೆ ಮಾರಕವಾಗಿವೆ ಎಂದು ತಿಳಿಸಿದ್ದಾರೆ.

ಇದೇ ವೇಳೆ ದೇಶವನ್ನು ಅರಾಜಕತೆಯಿಂದ ಪಾರುಮಾಡಬೇಕಾಗಿದೆ ಎಂದು ಅವರು ತಿಳಿಸಿದ್ದಾರೆ. ಇದು ದೇಶದ ಎಲ್ಲ ನಾಯಕರು ಒಗ್ಗಟ್ಟಾಗಿ ಅರಾಜಕತೆಯಿಂದ ದೇಶವನ್ನು ರಕ್ಷಿಸಲು ಎಲ್ಲರು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು.ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಧಕ್ಕೆ ಬಂದಾಗ ತೀವ್ರವಾದ ಪ್ರತಿರೋಧವನ್ನು ವ್ಯಕ್ತಪಡಿಸಬೇಕು ಮತ್ತು ಸರ್ಕಾರಗಳ ಮೇಲಿರುವ ಜನರ ನಂಬಿಕೆಗಳನ್ನು ಉಳಿಸಿಕೊಳ್ಳಬೇಕು ಎಂದು ಚಂದ್ರಬಾಬು ನಾಯ್ಡು ಟ್ವೀಟ್ ಮೂಲಕ ಹೇಳಿದ್ದಾರೆ. 

ಇದೆ ಸಂದರ್ಭದಲ್ಲಿ ಹೊಸದಾಗಿ ರಚನೆಯಾಗಿರುವ ಆಂಧ್ರಪ್ರದೇಶದ ಮೇಲೆ ಕೇಂದ್ರ ಸರ್ಕಾರವು ತಾರತಮ್ಯ ಮಾಡುತ್ತಿದೆ.ತಿತ್ಲಿ ಚಂಡಮಾರುತದಿಂದ ರಾಜ್ಯವು ತತ್ತರಿಸಿ ಹೋಗಿರುವಾಗ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಗುಂಟೂರು ನಲ್ಲಿ ಪಕ್ಷದ ಕಚೇರಿಯನ್ನು  ಉದ್ಘಾಟನೆ ಮಾಡಲು ಹೋಗುತ್ತಾರೆ.ಬಿಜೆಪಿ ಮೇಲಿನ ಜನರ  ನಂಬಿಕೆ ಕಳೆದುಹೋಗಿದೆ ಎಂದು ಟ್ವೀಟ್ ಮೂಲಕ ಕೇಂದ್ರ ಸರ್ಕಾರದ ಮೇಲೆ ಟೀಕಾ ಪ್ರಹಾರ ನಡೆಸಿದ್ದಾರೆ.

Trending News