ನವದೆಹಲಿ:ಟಾಟಾ ಸಮೂಹಕ್ಕೆ ಬುಧವಾರ ಭಾರಿ ಆಘಾತ ನೀಡಿರುವ ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿ(NCLAT), ಸೈರಸ್ ಮಿಸ್ತ್ರಿ ಅವರನ್ನು ಸಮೂಹದ ಕಾರ್ಯಕಾರಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿರುವ ಕ್ರಮವನ್ನು ಕಾನೂನುಬಾಹೀರ ಎಂದು ಹೇಳಿದೆ. ಅಷ್ಟೇ ಅಲ್ಲ ಸೈರಸ್ ಮಿಸ್ತ್ರಿ ಅವರನ್ನು ಟಾಟಾ ಸನ್ಸ್ ಸಂಸ್ಥೆಯಕಾರ್ಯನಿರ್ವಾಹಕ ಅಧ್ಯಕ್ಷರನ್ನಾಗಿ ಮರುನೇಮಕ ಮಾಡುವಂತೆ ಆದೇಶ ನೀಡಿದೆ.
ಈ ಪ್ರಕರಣದಲ್ಲಿ ಸೈರಸ್ ಮಿಸ್ತ್ರಿ ಅಪಿಲೆಟ್ ಟ್ರೀರ್ಬ್ಯೂನಲ್ ಕದ ತಟ್ಟಿದ್ದರು. ಈ ಕುರಿತು ಜುಲೈನಲ್ಲಿ ವಿಚಾರಣೆ ನಡೆಸಿದ್ದ ನ್ಯಾಯಾಧಿಕರಣ ತನ್ನ ತೀರ್ಪನ್ನು ಕಾಯ್ದಿರಿಸಿತ್ತು. ಸೈರಲ್ ಮಿಸ್ತ್ರಿ ಅವರನ್ನು 2016ರಲ್ಲಿ ಟಾಟಾ ಸನ್ಸ್ ಕಾರ್ಯನಿರ್ವಾಹಕ ಅಧ್ಯಕ್ಷ ಹುದ್ದೆಯಿಂದ ತೆಗೆದುಹಾಕಲಾಗಿತ್ತು. ಇದಾದ ಎರಡು ತಿಂಗಳ ಬಳಿಕ ಮಿಸ್ತ್ರಿ ವತಿಯಿಂದ ಅವರ ಎರಡು ಕಂಪನಿಗಳಾದ ಸೈರಸ್ ಇನ್ವೆಸ್ಟ್ಮೆಂಟ್ ಪ್ರೈವೇಟ್ ಲಿಮಿಟೆಡ್ ಹಾಗೂ ಸ್ತಾರ್ಲಿಂಗ್ ಇನ್ವೆಸ್ಟ್ಮೆಂಟ್ ಕಾರ್ಪ್, ಟಾಟಾ ಸನ್ಸ್ ಕೈಗೊಂಡ ಈ ಕ್ರಮವನ್ನು NCALTಯ ಮುಂಬೈ ಪೀಠದಲ್ಲಿ ಪ್ರಶ್ನಿಸಿತ್ತು. ಅಷ್ಟೇ ಅಲ್ಲ ಮಿಸ್ತ್ರಿ ಅವರನ್ನು ಹುದ್ದೆಯಿಂದ ಕೆಳಗಿಳಿಸಿರುವುದು ಕ್ರಮ ಕಂಪನೀಜ್ ಕಾಯ್ದೆಯಡಿ ಬರುವುದಿಲ್ಲ ಎಂದು ಎರಡೂ ಕಂಪನಿಗಳು ವಾದ ಮಂಡಿಸಿದ್ದವು.
ಜುಲೈ 9, 2018ಕ್ಕೆ ಈ ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಾಧಿಕರಣ, ಸೈರಲ್ ಮಿಸ್ತ್ರಿ ಅವರನ್ನು ಚೇರ್ಮನ್ ಹುದ್ದೆಯಿಂದ ಕೆಳಗಿಳಿಸಲು ಟಾಟಾ ಸನ್ಸ್ ಮಂಡಳಿ ಕ್ಷಮತೆ ಹೊಂದಿರುವ ಕಾರಣ ಈ ಕ್ರಮಕೈಗೊಂಡಿದೆ. ಅಷ್ಟೇ ಅಲ್ಲ ಮಿಸ್ತಿ ಅವರು ಮಂಡಳಿ ಹಾಗೂ ದೊಡ್ಡ ಹೆಚ್ಚಿನ ಷೇರುಗಳನ್ನು ಹೊಂದಿದವರ ಭರವಸೆ ಕಳೆದುಕೊಂಡಿದ್ದಾರೆ ಎಂದಿತ್ತು.
ಕೇವಲ ನಾಲ್ಕು ವರ್ಷಗಳಲ್ಲೇ ಅಧಿಕಾರ ಕಳೆದುಕೊಂಡ ಮಿಸ್ತ್ರಿ
ಸೈರಸ್ ಮಿಸ್ತ್ರಿ ಅವರನ್ನು ಮುಂದಿನ 30 ವರ್ಷಗಳ ಅವಧಿಗಾಗಿ ಟಾಟಾ ಸನ್ಸ್ ನ ಕಾರ್ಯನಿರ್ವಾಹಕ ಅಧ್ಯಕ್ಷರನಾಗಿ ನೇಮಿಸಲಾಗಿತ್ತು. ಆದರೆ, ಅವರನ್ನು ಕೇವಲ 4 ವರ್ಷಗಳಲ್ಲೇ ಅವರ ಹುದ್ದೆಯಿಂದ ಕೆಳಗಿಲಿಸಲಾಗಿತ್ತು. ಮಿಸ್ತ್ರಿ ಅವರ ಮೇಲೆ ಮಾಹಿತಿ ಸೋರಿಕೆ ಮಾಡಿದ ಆರೋಪವಿತ್ತು. ಜೊತೆಗೆ ಟಾಟಾ ಸಮೂಹದ ಲಾಭ ಕೂಡ ಅವರ ನಾಲ್ಕು ವರ್ಷಗಳ ಅವಧಿಯಲ್ಲಿ ನಿರಂತರ ಇಳಿಕೆ ಕಂಡಿತ್ತು. ಈ ಕುರಿತಂತೆ ಹಲವು ಬಾರಿ ಕಂಪನಿ ಅವರಿಗೆ ನೋಟಿಸ್ ಕೂಡ ನೀಡಿತ್ತು. ಅವರ ಕಾಲಾವಧಿಯಲ್ಲಿ ಟಿಸಿಎಸ್ ಹೊರತುಪಡಿಸಿ ಉಳಿದೆಲ್ಲ ಟಾಟಾ ಕಂಪನಿಗಳು ನಷ್ಟ ಎದುರಿಸಿವೆ. ಟಾಟಾ ಮೋಟರ್ಸ್ ಹಾಗೂ ಟಾಟಾ ಸ್ಟೀಲ್ಸ್ ಲಾಭ ಸತತವಾಗಿ ಮೂರು ತ್ರೈಮಾಸಿಕಗಳಲ್ಲಿ ನೆಲಕಚ್ಚಿತ್ತು.
ಹುದ್ದೆಯಿಂದ ಕೈಬಿಡಲು ಕಾರಣ ಇಲ್ಲಿದೆ
ವರದಿಗಳ ಪ್ರಕಾರ ಟಾಟಾ ಸನ್ಸ್ ನಲ್ಲಿ ಶೇ.66ರಷ್ಟು ಅಧಿಕ ಹೂಡಿಕೆ ಹೊಂದಿರುವ ಟಾಟಾ ಟ್ರಸ್ಟ್ ಗೆ ಸಂಸ್ಥೆಯ ಇತರ ಕಂಪನಿಗಳಿಂದ ಬರುವ ಲಾಭ ನಿರಂತರವಾಗಿ ಕುಸಿದಿತ್ತು. ಇದೇ ಕಾರಣವನ್ನು ಮುಂದಿಟ್ಟುಕೊಂಡು ಮಿಸ್ತ್ರೀ ಅವರನ್ನು ಹುದ್ದೆಯಿಂದ ತೆಗೆದುಹಾಕಲಾಗಿತ್ತು. ಮಿಸ್ತ್ರಿ ಅವರನ್ನು ಕೆಳಗಿಳಿಸಿದ ಬಳಿಯ ಮತ್ತೊಮ್ಮೆ ರತನ್ ಟಾಟಾ ಟಾಟಾ ಸಮೂಹದ ಹಂಗಾಮಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದರು. ಬಳಿಕ TCSನ ಮುಖ್ಯಸ್ಥರಾಗಿದ್ದ ಎನ್. ಚಂದ್ರಶೇಖರ್ ಅವರನ್ನು ಟಾಟಾ ಸಮೂಹದ ಜವಾಬ್ದಾರಿ ವಹಿಸಲಾಗಿತ್ತು.