ಛತ್ತೀಸಘಡ್ ದಲ್ಲಿ ಆರು ವಾಹನಗಳಿಗೆ ಬೆಂಕಿ ಹಚ್ಚಿದ ನಕ್ಸಲರು

   

Last Updated : Jan 6, 2018, 09:08 PM IST
ಛತ್ತೀಸಘಡ್ ದಲ್ಲಿ ಆರು ವಾಹನಗಳಿಗೆ ಬೆಂಕಿ ಹಚ್ಚಿದ ನಕ್ಸಲರು  title=
ಸಂಗ್ರಹ ಚಿತ್ರ

ಬಲರಾಮಪುರ:  ಜಾರ್ಖಂಡ್-ಛತ್ತೀಸ್ ಗಢದ ಗಡಿಯ ಸಮೀಪದ ಬಲರಾಮಪುರ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ  ಬಾಕ್ಸೈಟ್ ಗಣಿಗಳಲ್ಲಿ ನಕ್ಸಲರು ಆರು ವಾಹನಗಳಿಗೆ ಬೆಂಕಿ ಹಚ್ಚಿ ಮತ್ತೆ ತಮ್ಮ ಪ್ರಾಬಲ್ಯವನ್ನು ಮೆರೆದಿದ್ದಾರೆ.

ಛತ್ತೀಸ್ಗಢದ ಉತ್ತರ ಸರ್ಗುಜಾ ನಕ್ಸಲ ಸಮಸ್ಯೆಯಿಂದ ಕೂಡಿದ ಪ್ರದೇಶವಾಗಿತ್ತು, ಆದರೆ ಕಳೆದ ಕೆಲವು ವರ್ಷಗಳಿಂದ ನಕ್ಸಲರು ಘಟನೆಗಳು ಈ ಭಾಗದಲ್ಲಿ ಕಡಿಮೆಯಾಗಿದ್ದವು ಆದರೆ ಮತ್ತೆ ಈ ಬಲರಾಮಪುರ ಘಟನೆಯಿಂದಾಗಿ ನಕ್ಸಲರ ಅಸ್ತಿತ್ವ ಇನ್ನು ಈ ಭಾಗದಲ್ಲಿ ಜೀವಂತವಾಗಿರುವುದಕ್ಕೆ ನಿದರ್ಶನವಾಗಿದೆ ಎಂದು ಬಲ್ರಾಂಪುರ್ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಅಭಿಪ್ರಾಯಪಟ್ಟಿದ್ದಾರೆ 

ಕೆಲವು ತಿಂಗಳ ಹಿಂದೆ  ನಕ್ಸಲ್ ಉಪಸ್ಥಿತಿಯ ಬಗ್ಗೆ ಮಾಹಿತಿ ನೀಡಲಾಗಿತ್ತು,  ಈ ಕಾರಣದಿಂದ ಪೊಲೀಸರು ನಿರಂತರವಾಗಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದರು ಅಷ್ಟರಲ್ಲಿ ಈ ಘಟನೆ ನಡೆದಿದೆ ಎಂದು ತಿಳಿಸಿದರು. ಅಲ್ಲದೆ ಈ ಏಕೈಕ ಘಟನೆಯು ಈ ಭಾಗದಲ್ಲಿ ನಕ್ಸಲ ನಿರ್ಮೂಲನೆಗಾಗಿ ಇನ್ನು  ಹೆಚ್ಚಿನ ಕಾರ್ಯವನ್ನು  ಮಾಡಬೇಕಾಗಿರುವ ಅಗತ್ಯವನ್ನು ಅದು ತೋರಿಸುತ್ತದೆ ಎಂದು ಅವರು ಹೇಳಿದರು.

ಪೋಲಿಸ್ ಪ್ರಕಾರ, ಬಾಕ್ಸೈಟ್ ಗಣಿಗಳು, ಎರಡು ಟ್ರಕ್ಗಳು, ಮತ್ತು ಪೋಕ್ಲ್ಯಾಂಡ್ ಯಂತ್ರಗಳು ನಕ್ಸಲರ  ಬೆಂಕಿ ಆಹುತಿಗೆ ಒಳಪಟ್ಟಿವೆ ಎಂದು ಅವರು ತಿಳಿಸಿದ್ದಾರೆ. ಇದಕ್ಕಾಗಿ ಹೆಚ್ಚಿನ ತನಿಖೆಯನ್ನು ಪೊಲೀಸರು ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ. 

Trending News