ಮಹಾರಾಷ್ಟ್ರ: ಭಾರೀ ಮಳೆಯಿಂದಾಗಿ ಕುಸಿದ ನಾಸಿಕ್‌ನ ವಾಟರ್ ಟ್ಯಾಂಕ್, 3 ಸಾವು

ವಾಟರ್ ಟ್ಯಾಂಕ್ ಬೀಳುವ ಬಗ್ಗೆ ಮಾಹಿತಿ ಪಡೆದ ನಂತರ, ಸ್ಥಳಕ್ಕೆ ತಲುಪಿದ ಪೊಲೀಸ್ ಮತ್ತು ಅಗ್ನಿಶಾಮಕ ಇಲಾಖೆ ಅಧಿಕಾರಿಗಳು ತಮ್ಮ ಕೆಲಸವನ್ನು ಪ್ರಾರಂಭಿಸಿದರು.  

Last Updated : Jul 2, 2019, 12:29 PM IST
ಮಹಾರಾಷ್ಟ್ರ: ಭಾರೀ ಮಳೆಯಿಂದಾಗಿ ಕುಸಿದ ನಾಸಿಕ್‌ನ ವಾಟರ್ ಟ್ಯಾಂಕ್, 3 ಸಾವು title=

ನಾಸಿಕ್: ಮಹಾರಾಷ್ಟ್ರದ ರಾಜಧಾನಿ ಮುಂಬೈನಲ್ಲಿ ಈ ದಿನಗಳಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ಅದೇ ಸಮಯದಲ್ಲಿ, ನಾಸಿಕ್‌ನಲ್ಲಿ ನೀರಿನ ಟ್ಯಾಂಕ್ ಬಿದ್ದು ಮೂರು ಜನರು ಸಾವನ್ನಪ್ಪಿದ್ದಾರೆ. 

ಸತ್ಪುರದ ಧ್ರುವನಗರದಲ್ಲಿ ವಾಟರ್ ಟ್ಯಾಂಕ್ ಬಿದ್ದ ಪರಿಣಾಮ ಮೂವರು ಸಾವನ್ನಪ್ಪಿದ್ದಾರೆ. ಮಾಹಿತಿಯ ಪ್ರಕಾರ, ಧ್ರುವನಗರದಲ್ಲಿ ವಾಟರ್ ಟ್ಯಾಂಕ್ ಕೆಲಸ ಬಹಳ ಸಮಯದಿಂದ ನಡೆಯುತ್ತಿದೆ. ಪ್ರತಿದಿನದಂತೆ, ಎಲ್ಲಾ ಕಾರ್ಮಿಕರು ಮಂಗಳವಾರ ಬೆಳಿಗ್ಗೆ ವಾಟರ್ ಟ್ಯಾಂಕ್ ಕೆಲಸಕ್ಕಾಗಿ ತೆರಳಿದ್ದ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ.

ವಾಟರ್ ಟ್ಯಾಂಕ್ ಬೀಳುವ ಬಗ್ಗೆ ಮಾಹಿತಿ ಪಡೆದ ನಂತರ, ಸ್ಥಳಕ್ಕೆ ತಲುಪಿದ ಪೊಲೀಸ್ ಮತ್ತು ಅಗ್ನಿಶಾಮಕ ಇಲಾಖೆ ಅಧಿಕಾರಿಗಳು ರಕ್ಷಣಾ ಕೆಲಸವನ್ನು ಪ್ರಾರಂಭಿಸಿದರು. ವಾಟರ್ ಟ್ಯಾಂಕ್ ಬಿದ್ದು ಮೂವರು ಕಾರ್ಮಿಕರು ಸಾವನ್ನಪ್ಪಿದ್ದರೆ, ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಪ್ರಕರಣದ ವಿವರಗಳನ್ನು ತಿಳಿಸಿದ್ದಾರೆ. ಪ್ರಸ್ತುತ, ಅವಶೇಷಗಳನ್ನು ತೆಗೆದುಹಾಕುವ ಕಾರ್ಯ ಪ್ರಗತಿಯಲ್ಲಿದೆ.

Trending News