ನಮ್ಮ ನಾರದ ಮುನಿ ಈಗಿನ 'ಗೂಗಲ್' - ಉತ್ತರಪ್ರದೇಶದ ಉಪಮುಖ್ಯಮಂತ್ರಿ

   

Last Updated : May 31, 2018, 04:53 PM IST
ನಮ್ಮ ನಾರದ ಮುನಿ ಈಗಿನ 'ಗೂಗಲ್' - ಉತ್ತರಪ್ರದೇಶದ ಉಪಮುಖ್ಯಮಂತ್ರಿ   title=

ನವದೆಹಲಿ: ಇತಿಹಾಸವನ್ನು ನವೀನ ಮಾದರಿಯಲ್ಲಿ ಹೇಳುತ್ತಲೇ ವಿವಾದ ಸೃಷ್ಟಿಸುತ್ತಿರುವ ಬಿಜೆಪಿ ಮಂತ್ರಿಗಳ ಸಾಲಿಗೆ ಈಗ ಹೊಸಬರೊಬ್ಬರು ಸೇರ್ಪಡೆಯಾಗಿದ್ದಾರೆ.ಅವರ್ಯಾರೆಂದರೆ ಉತ್ತರ ಪ್ರದೇಶದ ಉಪ ಮುಖ್ಯಮಂತ್ರಿ  ದಿನೇಶ್ ಶರ್ಮಾ.

ಹಿಂದಿ ಪತ್ರಿಕಾ ದಿನಾಚರಣೆಯ ಪ್ರಯುಕ್ತ ಮಥುರಾದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು" ಪತ್ರಿಕೋದ್ಯಮವು ಮಹಾಭಾರತದ ಕಾಲದಲ್ಲೇ ಪ್ರಾರಂಭವಾಗಿತ್ತು ಎಂದರು.ಇನ್ನು ಸರ್ಚ್ ಇಂಜಿನ್ ಬಗ್ಗೆ ಮಾತನಾಡುತ್ತಾ " ನಿಮ್ಮ ಗೂಗಲ್ ಈಗ ಪ್ರಾರಂಭವಾಗಿದೆ ಆದ್ರೆ ನಮ್ಮ ಗೂಗಲ್ ಬಹಳ ಹಿಂದೆಯೇ ಪ್ರಾರಂಭವಾಗಿತ್ತು ಅದುವೇ ನಾರದ ಮುನಿ ಎಂದು ತಿಳಿಸಿದರು. ನಾರಾಯಣ ಎಂದು ಮೂರು ಬಾರಿ ಹೇಳುವ ಮೂಲಕ  ಅವರು ಸಂದೇಶವನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ತಲುಪಿಸುತ್ತಿದ್ದರು ಎಂದರು.

ಈ ಹಿಂದೆ ಹಲವು  ಬಿಜೆಪಿ ನಾಯಕರು ಹಲವಾರು ತಂತ್ರಜ್ಞಾನಗಳ ಕುರಿತಾಗಿ ವಿವಾದಾತ್ಮಕ ಹೇಳಿಕೆ ನೀಡಿ ಸುದ್ದಿಯಾಗಿದ್ದರು.ಅದರಲ್ಲಿ ಪ್ರಮುಖವಾಗಿ ತ್ರಿಪುರಾದ ಮುಖ್ಯಮಂತ್ರಿ ಬಿಪ್ಲಾವ್ ದೇವ್ ಅವರು ಇಂಟರ್ನೆಟ್ ಕುರಿತಾಗಿ ಹೇಳಿದ ಸುದ್ದಿಯಂತು ಬಾರಿ ವಿವಾದ ಹುಟ್ಟಿ ಹಾಕಿತ್ತು.

Trending News