ʼದೇವಾಲಯದಲ್ಲಿ ಉಪವಾಸ ಬಿಟ್ಟ ಮುಸಲ್ಮಾನರುʼ

ಅನೇಕ ವರ್ಷಗಳಿಂದಲೂ ಇಲ್ಲಿ ಎರಡೂ ಧರ್ಮಗಳ ಹಬ್ಬ-ಹರಿದಿನಗಳನ್ನು ಒಟ್ಟಿಗೆ ಆಚರಿಸಿಕೊಂಡು ಬರಲಾಗುತ್ತಿದೆ.   

Written by - Bhavishya Shetty | Last Updated : Apr 14, 2022, 06:13 PM IST
  • ಹಿಂದೂ ದೇವಸ್ಥಾನದಲ್ಲಿ ರೋಜಾ ಬಿಟ್ಟ ಮುಸ್ಲಿಮರು
  • ಗುಜರಾತ್‌ನ ಬನಸಕಾಂತ್​ ಜಿಲ್ಲೆಯಲ್ಲಿ ಘಟನೆ
  • ಹಿಂದೂ-ಮುಸ್ಲಿಂ ಸಾಮರಸ್ಯಕ್ಕೆ ಸಾಕ್ಷಿ
ʼದೇವಾಲಯದಲ್ಲಿ ಉಪವಾಸ ಬಿಟ್ಟ ಮುಸಲ್ಮಾನರುʼ title=
Ramzan

ಗುಜರಾತ್​: ಇತ್ತೀಚಿನ ದಿನಗಳಲ್ಲಿ ಧರ್ಮ-ಧರ್ಮಗಳ ನಡುವೆ ಸಾಮರಸ್ಯಕ್ಕಿಂತ ಹೆಚ್ಚಾಗಿ ಸಮಸ್ಯೆಗಳೇ ಕಂಡುಬರುತ್ತಿದೆ. ಆದರೆ ಗುಜರಾತ್‌ನ ಬನಸಕಾಂತ್​ ಜಿಲ್ಲೆಯ ವಡಗಾಮ್​ ತಾಲೂಕಿನ ಗ್ರಾಮವೊಂದರಲ್ಲಿ ದೇವಸ್ಥಾನದ ಟ್ರಸ್ಟ್​​ ಮತ್ತು ಗ್ರಾಮ ಪಂಚಾಯಿತಿಯು ಮುಸಲ್ಮಾನ ಬಾಂಧವರ ಉಪವಾಸ ಬಿಡುವ ಕಾರ್ಯಕ್ರಮವನ್ನು ಆಯೋಜಿಸಿತ್ತು. ಈ ಮೂಲಕ ಸೌಹಾರ್ದತೆ ಮೆರೆಯಲಾಗಿದೆ.

ಇದನ್ನು ಓದಿ: Kantara Teaser: ಕಾಂತಾರ ಟೀಸರ್‌ ರಿಲೀಸ್‌! ದೆವ್ವದ ಕಥೆ ಹೇಳಲು ಬರುತ್ತಿದ್ದರಾ ರಿಷಬ್ ಶೆಟ್ಟಿ?

ವಡಗಾಮ್​ ತಾಲೂಕಿನ ದಲ್ವಾನಾ ಗ್ರಾಮವು ಹಿಂದೂ-ಮುಸ್ಲಿಮರ ಸಾಮರಸ್ಯದಿಂದ ಕೂಡಿದೆ. ಇದಕ್ಕೆ ಸಾಕ್ಷಿ ಎಂಬಂತೆ ಅನೇಕ ವರ್ಷಗಳಿಂದಲೂ ಇಲ್ಲಿ ಎರಡೂ ಧರ್ಮಗಳ ಹಬ್ಬ-ಹರಿದಿನಗಳನ್ನು ಒಟ್ಟಿಗೆ ಆಚರಿಸಿಕೊಂಡು ಬರಲಾಗುತ್ತಿದೆ. ಇದೀಗ ರಂಜಾನ್​ ತಿಂಗಳಾದ್ದರಿಂದ ಇಲ್ಲಿನ ವೀರ ಮಹಾರಾಜ್ ದೇವಸ್ಥಾನದಲ್ಲಿ ಮುಸ್ಲಲ್ಮಾನ ಬಾಂಧವರಿಗೆ ಉಪವಾಸ ಬಿಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. 

ಇದನ್ನು ಓದಿ: ‘ಸಾವಿನ ಮನೆಯಲ್ಲಿ ರಾಜಕಾರಣ ನಡೆಸುವ ರಣಹದ್ದುಗಳು ಬೀದಿಗೆ ಇಳಿದಿವೆ!’

ಧರ್ಮ ಮತ್ತು ಆಚರಣೆಗಳು ಬೇರೆಯಾದರೂ ಈ ಗ್ರಾಮದಲ್ಲಿ ಸಾಮರಸ್ಯ ಮನೆ ಮಾಡಿದೆ. ಹಿಂದೂ-ಮುಸಲ್ಮಾನರು ಎಂಬ ಭೇದ-ಭಾವ ಮಾಡದೆ ಪ್ರತೀ ಹಬ್ಬವನ್ನು ಎಲ್ಲರೂ ಒಟ್ಟಾಗಿ ಆಚರಣೆ ಮಾಡುತ್ತಾರಂತೆ. ಇಂತಹ ಸಂಪ್ರದಾಯ ದೇಶದೆಲ್ಲೆಡೆ ಪಸರಿಸಲಿ ಎಂಬುದು ನಮ್ಮ ಆಶಯ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News