Section 144 in the Mumbai: ಮುಂಬೈನಲ್ಲಿ ಸೆಕ್ಷನ್ 144 ಜಾರಿ... ಹೊಸ ವರ್ಷದ ಆಚರಣೆಗಳಿಗೆ ನಿಷೇಧ

Section 144 in the Mumbai: ಈ ಆದೇಶವು 2021 ರ ಡಿಸೆಂಬರ್ 30 ರಿಂದ ಗ್ರೇಟರ್ ಮುಂಬೈನ ಪೊಲೀಸ್ ಆಯುಕ್ತರ ನಿಯಂತ್ರಣದಲ್ಲಿರುವ ಪ್ರದೇಶಗಳಲ್ಲಿ ಜಾರಿಗೆ ಬರಲಿದೆ.  7 ಜನವರಿ  2022 ರ ವರೆಗೆ ಜಾರಿಯಲ್ಲಿರುತ್ತದೆ.

Edited by - Zee Kannada News Desk | Last Updated : Dec 30, 2021, 04:08 PM IST
  • ಹೆಚ್ಚುತ್ತಿರುವ COVID-19 ಪ್ರಕರಣಗಳ ಹಿನ್ನೆಲೆ
  • ಮುಂಬೈನಲ್ಲಿ ಇಂದಿನಿಂದ ಜನವರಿ 7 ರವರೆಗೆ ಸೆಕ್ಷನ್ 144 ಜಾರಿ
  • ಹೊಸ ವರ್ಷದ ಆಚರಣೆಗಳಿಗೆ ನಿಷೇಧ
Section 144 in the Mumbai: ಮುಂಬೈನಲ್ಲಿ ಸೆಕ್ಷನ್ 144 ಜಾರಿ... ಹೊಸ ವರ್ಷದ ಆಚರಣೆಗಳಿಗೆ ನಿಷೇಧ  title=
ಹೊಸ ವರ್ಷ

ಮುಂಬೈ (ಮಹಾರಾಷ್ಟ್ರ): ಹೆಚ್ಚುತ್ತಿರುವ COVID-19 ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು, ಮುಂಬೈ ಪೊಲೀಸರು ನಗರದಲ್ಲಿ ಇಂದಿನಿಂದ ಜನವರಿ 7 ರವರೆಗೆ ಸೆಕ್ಷನ್ 144 (Section 144 in the Mumbai) ಅನ್ನು ವಿಧಿಸಿದ್ದಾರೆ.

ಹೊಸ COVID-19 ನಿರ್ಬಂಧಗಳ ಪ್ರಕಾರ, ಡಿಸೆಂಬರ್ 30 ರಿಂದ ಜನವರಿ 7 ರವರೆಗೆ ಹೊಸ ವರ್ಷದ ಆಚರಣೆಗಳು, ರೆಸ್ಟೋರೆಂಟ್‌ಗಳು, ಹೋಟೆಲ್‌ಗಳು, ಬಾರ್‌ಗಳು, ಪಬ್‌ಗಳು, ರೆಸಾರ್ಟ್‌ಗಳು ಮತ್ತು ಕ್ಲಬ್‌ಗಳು ಸೇರಿದಂತೆ ಯಾವುದೇ ಮುಚ್ಚಿದ ಅಥವಾ ತೆರೆದ ಜಾಗದಲ್ಲಿ ಪಾರ್ಟಿಗಳನ್ನು (New Year celebrations banned) ನಿಷೇಧಿಸಲಾಗಿದೆ.

ಈ ಆದೇಶವು 2021 ರ ಡಿಸೆಂಬರ್ 30 ರಿಂದ ಗ್ರೇಟರ್ ಮುಂಬೈನ ಪೊಲೀಸ್ ಆಯುಕ್ತರ ನಿಯಂತ್ರಣದಲ್ಲಿರುವ ಪ್ರದೇಶಗಳಲ್ಲಿ ಜಾರಿಗೆ ಬರಲಿದೆ.  7 ಜನವರಿ  2022 ರ ವರೆಗೆ ಜಾರಿಯಲ್ಲಿರುತ್ತದೆ.

ಈ ಆದೇಶವನ್ನು ಉಲ್ಲಂಘಿಸುವ ಯಾವುದೇ ವ್ಯಕ್ತಿಯು ಭಾರತೀಯ ದಂಡ ಸಂಹಿತೆ 1860 ರ ಸೆಕ್ಷನ್ 188 ರ ಅಡಿಯಲ್ಲಿ ಸಾಂಕ್ರಾಮಿಕ ರೋಗಗಳ ಕಾಯ್ದೆ 1897 ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯಿದೆ 2005 ಮತ್ತು ಇತರ ಕಾನೂನು ನಿಬಂಧನೆಗಳ ಅಡಿಯಲ್ಲಿ ದಂಡನೆಗೆ ಹೆಚ್ಚುವರಿಯಾಗಿ ಶಿಕ್ಷೆಗೆ ಗುರಿಯಾಗುತ್ತಾರೆ ಎಂದು ಪೊಲೀಸ್ ಉಪ ಆಯುಕ್ತ ಚೈತನ್ಯ ಎಸ್ ಹೇಳಿದರು.  

ಮುಂಬೈ ಬುಧವಾರ 2,510 ಹೊಸ COVID-19 ಪ್ರಕರಣಗಳನ್ನು ವರದಿ ಮಾಡಿದೆ. ಕಳೆದ 24 ಗಂಟೆಗಳಲ್ಲಿ ಒಂದು ಸಾವು ವರದಿಯಾಗಿದೆ ಎಂದು ರಾಜ್ಯ ಆರೋಗ್ಯ ಬುಲೆಟಿನ್ ತಿಳಿಸಿದೆ.

ಮುಂಬೈನಲ್ಲಿ 8,060 ಸಕ್ರಿಯ ಪ್ರಕರಣಗಳಿವೆ ಮತ್ತು ಚೇತರಿಕೆಯ ಪ್ರಮಾಣವು 97 ಪ್ರತಿಶತದಷ್ಟಿದೆ. ಪ್ರಸ್ತುತ ಮುಂಬೈನಲ್ಲಿ 45 ಕಟ್ಟಡಗಳನ್ನು ಸೀಲ್ ಮಾಡಲಾಗಿದೆ. 

ಇದನ್ನೂ ಓದಿ: Watch:ಪುಟ್ಟ ಮಗುವಿನಂತೆ ಹಾವಿಗೆ ಸ್ನಾನ ಮಾಡಿಸುವ ವ್ಯಕ್ತಿ, ವಿಡಿಯೋ ವೈರಲ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News