Vande Bharat Express Latest News Today : ಮುಂಬೈ-ಗಾಂಧಿನಗರ ಮಧ್ಯ ಓಡಾಡುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಎಮ್ಮೆಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಇಂಜಿನ್ಗೆ ಭಾರಿ ಹಾನಿಯಾಗಿರುವ ಘಟನೆ ಮಣಿನಗರ ನಡುವಿನ ಮಾರ್ಗದಲ್ಲಿ ಸಂಭವಿಸಿದೆ.
ಈ ಘಟನೆ ಇಂದು ಬೆಳಗ್ಗೆ 11.15 ರ ಸುಮಾರಿಗೆ ವತ್ವಾ ನಿಲ್ದಾಣದಿಂದ ಮಣಿನಗರ ಬಂದ ಮೇಲೆ ಅಪಘಾತಕ್ಕೀಡಾಗಿದೆ. ಈ ಅಪಘಾತದಿಂದ ಇಂಜಿನ್‌ನ ಮುಂಭಾಗದ ಭಾಗಕ್ಕೆ ಹಾನಿಯಾಗಿದೆ ಎಂದು ಪಶ್ಚಿಮ ರೈಲ್ವೆಯ ಎಸ್‌ಆರ್‌ಒ ಜೆಕೆ ಜಯಂತ್ ತಿಳಿಸಿದ್ದಾರೆ.
ಇದನ್ನೂ ಓದಿ : ಆಜಾನ್ ಕೇಳುತ್ತಿದ್ದಂತೆ ಭಾಷಣ ನಿಲ್ಲಿಸಿದ ಅಮಿತ್ ಶಾ: ಕಾಶ್ಮೀರದಲ್ಲಿ ಸೌಹಾರ್ದತೆ ಮೆರೆದ ಗೃಹ ಸಚಿವರಿಗೆ ಜನಮೆಚ್ಚುಗೆ
ವರದಿಗಳ ಪ್ರಕಾರ, ರೈಲು ಚಲಿಸುತ್ತಿರುವ ವೇಳೆ 3-4 ಎಮ್ಮೆಗಳು ಹಳಿಯ ಮೇಲೆ ಅಡ್ಡಲಾಗಿ ಬಂದ ಪರಿಣಾಮ ಈ ಘಟನೆ ಸಂಭವಿಸಿದೆ. ಘಟನೆಯಲ್ಲಿ ಮೃತ ಪ್ರಾಣಿಗಳ ದೇಹ ತೆಗೆದ ನಂತರ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ನಿಧಾನವಾಗಿ ಚಲಿಸಿ 8 ನಿಮಿಷ ಲೇಟ ಆಗಿ ಗಾಂಧಿನಗರ ನಿಲ್ದಾಣವನ್ನು ತಲುಪಿತು.ಭವಿಷ್ಯದಲ್ಲಿ ಇಂತಹ ಅವಘಡಗಳನ್ನು ತಪ್ಪಿಸಲು, ರೈಲ್ವೆ ಹಳಿಗಳ ಬಳಿ ಜಾನುವಾರುಗಳನ್ನು ಬಿಡದಂತೆ ಹತ್ತಿರದ ಗ್ರಾಮಸ್ಥರಿಗೆ ಸಲಹೆ ನೀಡಲು ಪ್ರಯತ್ನಿಸುತ್ತಿದೆ.
Vande Bharat Express running b/w Mumbai Central to Gurajat's Gandhinagar met with an accident after a herd of buffaloes came on the railway line at around 11.15am b/w Vatva station to Maninagar. The accident damaged the front part of the engine: Western Railway Sr PRO, JK Jayant pic.twitter.com/OLOMgEv10G
— ANI (@ANI) October 6, 2022
ಮುಂದಿನ ದಿನಗಲ್ಲಿ ಇಂತಹ ಅವಘಡಗಳನ್ನು ತಪ್ಪಿಸಲು, ರೈಲ್ವೆ ಹಳಿಗಳ ಬಳಿ ಜಾನುವಾರುಗಳನ್ನು ಬಿಡದಂತೆ ಹತ್ತಿರದ ಗ್ರಾಮಸ್ಥರಿಗೆ ರೈಲ್ವೆ ಇಲಾಖೆ ಸಲಹೆ ನೀಡಿದೆ.
ಇದನ್ನೂ ಓದಿ : ಕೆಎಸ್‌ಆರ್‌ಟಿಸಿ ಬಸ್‌ಗೆ ಟೂರಿಸ್ಟ್ ಬಸ್ ಡಿಕ್ಕಿ - ಒಂಭತ್ತು ಮಂದಿ ಸಾವು, 6 ಜನರ ಸ್ಥಿತಿ ಗಂಭೀರ
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.