ನರೇಂದ್ರ ಮೋದಿ ನನಗೆ ಶ್ರೀರಾಮಚಂದ್ರ ಇದ್ದಂತೆ- ಮೋದಿ ಪತ್ನಿ ಜಶೋದಾ ಬೆನ್

    

Last Updated : Jun 21, 2018, 06:57 PM IST
ನರೇಂದ್ರ ಮೋದಿ ನನಗೆ ಶ್ರೀರಾಮಚಂದ್ರ ಇದ್ದಂತೆ- ಮೋದಿ ಪತ್ನಿ ಜಶೋದಾ ಬೆನ್  title=

ನವದೆಹಲಿ: ಮಧ್ಯಪ್ರದೇಶದ ರಾಜ್ಯಪಾಲೆ ಹಾಗೂ ಗುಜರಾತ್ ನ ಮಾಜಿ ಮುಖ್ಯಮಂತ್ರಿ ಆನಂದಿ ಬೆನ್  ಪಟೇಲ್ ಮೋದಿ ಅವಿವಾಹಿತ ಎನ್ನುವ ಹೇಳಿಕೆಗೆ ಪ್ರಧಾನಿ ಮೋದಿ ಪತ್ನಿ ಜಶೋದಾ ಬೆನ್ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಈ ರೀತಿ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ  ಜೋಶೋದಾ ಬೆನ್ ಲೋಕಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸುವ  ಸಂದರ್ಭದಲ್ಲಿ ತಾವು ವಿವಾಹಿತ ಎಂದು ಪ್ರಸ್ತಾಪಿಸಿರುವ ಕುರಿತಾಗಿ ತಿಳಿಸಿದರು. ಇದನ್ನು ಸ್ವತಃ ತಮ್ಮ ಸಹೋಧರ ಮೊಬೈಲ್ ನಲ್ಲಿ ರೀಕಾರ್ಡ್ ಮಾಡಿದ್ದಾರೆ ಎಂದು ಅವರು ತಿಳಿಸಿದರು. 

ಅನಂದಿಬೇನ್ ಹೇಳಿಕೆಗೆ ಖಾರವಾಗಿ ಉತ್ತರಿಸಿರುವ ಜಶೋದಾ ಬೆನ್ "ವಿದ್ಯಾವಂತ ಮಹಿಳೆಯಾಗಿ ಆನಂದಿಬೆನ್ ಈ ರೀತಿ ಹೇಳಿಕೆ ನೀಡಿರುವುದು ಶಿಕ್ಷಕಿಯಾಗಿರುವ ನನಗೆ ನಿಜಕ್ಕೂ ಸರಿ ಎನಿಸುವುದಿಲ್ಲ ಎಂದರು. ಆನಂದಿಬೆನ್ ಅವರ ಹೇಳಿಕೆ  ಗೌರವಾನ್ವಿತರಾಗಿರುವ  ವ್ಯಕ್ತಿತ್ವಕ್ಕೆ ಧಕ್ಕೆ ತರುತ್ತದೆ, ಆವರು ತಮಗೆ ಶ್ರೀರಾಮಚಂದ್ರನಿದ್ದ ಹಾಗೆ ಎಂದು ಅವರು ತಿಳಿಸಿದ್ದಾರೆ.

Trending News