ನವದೆಹಲಿ: ದೇಶದಲ್ಲಿ ಅಗ್ಗದ ದರದಲ್ಲಿ ಮತ್ತು ಶುದ್ಧ ಇಂಧನವನ್ನು ಪೂರೈಸುವ ದೊಡ್ಡ ಯೋಜನೆಯೊಂದನ್ನು ಪೆಟ್ರೋಲಿಯಂ (Petroleum) ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಪ್ರಾರಂಭಿಸಿದೆ. ದೇಶದ ಒಟ್ಟು 5 ಸಾವಿರ ಸಂಕುಚಿತ ಜೈವಿಕ ಅನಿಲ (Compressed Biogas) ಸ್ಥಾವರಗಳಲ್ಲಿ ಎರಡು ಲಕ್ಷ ಕೋಟಿ ರೂಪಾಯಿ ಹೂಡಿಕೆ ಮಾಡಲು ಸರ್ಕಾರ ಸಿದ್ಧತೆ ನಡೆಸಿದೆ.
ಇದನ್ನು ಓದಿ- ನೀವು ನಿಮ್ಮ LPG ಸಬ್ಸಿಡಿ ಸ್ವೀಕರಿಸಿದ್ದೀರಾ? ಅದನ್ನು ಈ ರೀತಿ ಪರಿಶೀಲಿಸಿ
ಪೆಟ್ರೋನೆಟ್ LNG ಜೊತೆ ಕರಾರು (Petronet LNG MoU)
ಇಂಧನ ಕಂಪನಿಗಳಾದ ಜೆಬಿಎಂ ಗ್ರೂಪ್, ಅದಾನಿ ಗ್ಯಾಸ್, ಪೆಟ್ರೋನೆಟ್ ಎಲ್ಎನ್ಜಿ ಇತ್ಯಾದಿಗಳೊಂದಿಗೆ ಶುಕ್ರವಾರ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಈ ವಿಷಯ ಪ್ರಕಟಿಸಿದ್ದಾರೆ. ಜೈವಿಕ ಮತ್ತು ಬೆಳೆ ಅವಶೇಷಗಳಿಂದ ತಯಾರಿಸಲಾಗುವ ಈ ಇಂಧನದ ಅಪಾರ ಸಾಮರ್ಥ್ಯವನ್ನು ಗಮನದಲ್ಲಿಟ್ಟುಕೊಂಡು ಸಚಿವಾಲಯ ಈ ಕ್ರಮ ಕೈಗೊಂಡಿದೆ. ಇದರಿಂದ ರೈತರಿಗೂ ಹೆಚ್ಚಿನ ಲಾಭವಾಗಲಿದೆ.
ಅಗ್ಗವಾಗಲಿದೆ ನಿಮ್ಮ ಪ್ರಯಾಣ
ಈ ಕುರಿತು ಮಾತನಾಡಿರುವ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಇಂದು ನಾವು ಶುದ್ಧ, ಅಗ್ಗದ ಮತ್ತು ಸುಸ್ಥಿರ ಇಂಧನಕ್ಕಾಗಿ ನಿರಂತರ ಹುಡುಕಾಟದಲ್ಲಿ ಹೊಸ ಅಧ್ಯಾಯವನ್ನು ಬರೆಯುತ್ತಿದ್ದೇವೆ. ಸುಸ್ಥಿರ ಪರ್ಯಾಯ ಆರ್ಥಿಕ ಸಾರಿಗೆ (SATAT) ಗಾಗಿ ನಾವು ಸ್ಪಷ್ಟವಾದ ಮಾರ್ಗಸೂಚಿಯನ್ನು ರಚಿಸಿದ್ದೇವೆ ಎಂದು ಅವರು ಹೇಳಿದ್ದಾರೆ.
ಇದನ್ನು ಓದಿ- ಎಲ್ಪಿಜಿ ಗ್ರಾಹಕರೇ ನವೆಂಬರ್ 1ರಿಂದ ಕಡ್ಡಾಯವಾಗಲಿದೆ ಈ ನಿಯಮ, ಪಾಲಿಸದಿದ್ದರೆ ಸಿಗಲ್ಲ ಸಿಲಿಂಡರ್
ಇದಕ್ಕಾಗಿ 600 CBG ಪ್ಲಾಂಟ್ ಗಳು ಬೇಕಾಗಲಿವೆ
ಭಾರತೀಯ ಉದ್ಯಮಕ್ಕೆ ಕ್ಷೇತ್ರಕ್ಕೆ ಸಂಬಂಧಿಸಿದ ಜನರು ಸುಸ್ಥಿರ ಪರ್ಯಾಯ ಆರ್ಥಿಕ ಸಾರಿಗೆಯಲ್ಲಿ ಹೆಚ್ಚಿನ ಆಸಕ್ತಿ ತೋರಿಸಿದ್ದಾರೆ ಎಂಬುದು ಸಂತೋಷದ ವಿಷಯ ಎಂದು ಪ್ರಧಾನ ಹೇಳಿದ್ದಾರೆ. . ಈಗಾಗಲೇ 600 ಸಿಬಿಜಿ ಸ್ಥಾವರಗಳಿಗೆ ಉದ್ದೇಶಿತ ಪತ್ರಗಳನ್ನು ನೀಡಲಾಗಿದ್ದು, ಇಂದು 900 ಸ್ಥಾವರಗಳಿಗೆ ಒಪ್ಪಂದಕ್ಕೆ ಸಹಿ ಹಾಕಿದ ನಂತರ ಒಟ್ಟು 1500 ಸಿಬಿಜಿ ಸ್ಥಾವರಗಳಿಗಾಗಿ ಪ್ರಯತ್ನ ಕೆಲಸ ಪ್ರಗತಿಯಲ್ಲಿದೆ ಎಂದು ಅವರು ಹೇಳಿದ್ದಾರೆ.
ಇದನ್ನು ಓದಿ- LPG ಗ್ಯಾಸ್ ಸಿಲಿಂಡರ್ ಜೊತೆ ಈ ವೈಶಿಷ್ಟ್ಯ ಉಚಿತ
2023 ರವರೆಗೆ ಒಟ್ಟು 5000 ಪ್ಲಾಂಟ್ ಗಳ ಗುರಿ ಹೊಂದಲಾಗಿದೆ
ಸಾರಿಗೆ ಕ್ಷೇತ್ರಕ್ಕೆ ಪರ್ಯಾಯ ಮತ್ತು ಶುದ್ಧ ಇಂಧನವನ್ನು ಉತ್ಪಾದಿಸಲು ಮತ್ತು ಸಿಬಿಜಿಯ ಲಭ್ಯತೆಯನ್ನು ಹೆಚ್ಚಿಸಲು 1 ಅಕ್ಟೋಬರ್ 2018 ರಂದು ಭಾರತ ಸರ್ಕಾರವು SATAT ಉಪಕ್ರಮವನ್ನು ಆರಂಭಿಸಿತ್ತು. 2023-24ರ ವೇಳೆಗೆ 5 ಸಾವಿರ ಸಿಬಿಜಿ ಸ್ಥಾವರಗಳನ್ನು ಸ್ಥಾಪಿಸುವ ಗುರಿ ಹೊಂದಲಾಗಿದೆ. ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ಸರ್ಕಾರದ ಶುದ್ಧ ಇಂಧನ ಉಪಕ್ರಮಕ್ಕೆ ಮತ್ತಷ್ಟು ಬಲ ಬರಲಿದೆ.