ಜಗಳದ ವೇಳೆ ತಾಯಿಯನ್ನು ಬಾತರೂಮ್ ಗೆ ತಳ್ಳಿ ಕೊಂದ ಮಾಡೆಲ್!

23 ವರ್ಷದ ಮಾಡೆಲ್ ಒಬ್ಬನು  ಜಗಳದ ವೇಳೆ ತನ್ನ ತಾಯಿಯನ್ನು ಬಾತ್ ರೂಂ ಗೆ ತಳ್ಳಿ ಈಗ ಅವಳ ಸಾವಿಗೆ ಕಾರಣವಾಗಿದ್ದಾನೆ 

Last Updated : Oct 7, 2018, 11:16 AM IST
ಜಗಳದ ವೇಳೆ ತಾಯಿಯನ್ನು ಬಾತರೂಮ್ ಗೆ ತಳ್ಳಿ ಕೊಂದ ಮಾಡೆಲ್! title=

ಮುಂಬೈ: 23 ವರ್ಷದ ಮಾಡೆಲ್ ಒಬ್ಬನು  ಜಗಳದ ವೇಳೆ ತನ್ನ ತಾಯಿಯನ್ನು ಬಾತ್ ರೂಂ ಗೆ ತಳ್ಳಿ ಈಗ ಅವಳ ಸಾವಿಗೆ ಕಾರಣವಾಗಿದ್ದಾನೆ 

ಈಗ ಈ ಪ್ರಕರಣದ ವಿಚಾರವಾಗಿ ಒಶಿವಾರಾ ಪೊಲೀಸರು ಲಕ್ಷ್ಯಾ ಸಿಂಗ್ ರನ್ನು ಶುಕ್ರವಾರ ಬಂಧಿಸಿದ್ದಾರೆ.45 ವರ್ಷದ ತಾಯಿ ಸುನಿತಾ ಸಿಂಗ್ ನೊಂದಿಗೆ ಮುಂಬೈನ ಲೋಖಂಡ್ ವಾಲಾ ಪ್ರದೇಶದಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸಿಸುತ್ತಿದ್ದರು ಎಂದು ಹೇಳಲಾಗಿದೆ.  

ಈಗ ಆರೋಪಿಯನ್ನು ಪೊಲೀಸರು ಶನಿವಾರದಂದು ಕೋರ್ಟ್ ಗೆ ಹಾಜರುಮಾಡಿದ್ದು, ಅಕ್ಟೋಬರ್ 8 ರ ವರೆಗೆ ಪೋಲಿಸ್ ಕಸ್ಟಡಿಗೆ ಒಪ್ಪಿಸಲಾಗಿದೆ.ಪೋಲೀಸರ ಪ್ರಾಥಮಿಕ ತನಿಖೆಗಳು ಹೇಳುವಂತೆ ತಾಯಿ ಮತ್ತು  ಮಗನು ಡ್ರಗ್ ವ್ಯಸನಿಗಳಾಗಿದ್ದರು ಎಂದು ಒಶಿವಾರ ಪೋಲಿಸ್ ಠಾಣೆಯಲ್ಲಿ ನ ಶೈಲೇಶ್ ಪಾಸಲ್ವಾಡ ತಿಳಿಸಿದ್ದಾರೆ.

ಇಂದು ನಾವು ಈ ಘಟನೆಗೆ ಕಾರಣವಾದ ಸಂಪೂರ್ಣ ಸಂಗತಿಯ ಕುರಿತಾಗಿ ಇವತ್ತು ತನಿಖೆಗೆ ಒಳಪಡಿಸುತ್ತೇವೆ ಎಂದು ಅವರು ತಿಳಿಸಿದರು.ಇನ್ನೊಬ್ಬ ಅಧಿಕಾರಿ ಹೇಳುವಂತೆ ಡ್ರಗ್ಸ್ ತೆಗೆದುಕೊಂಡ ನಂತರ ಹಣಕಾಸಿನ ವಿಚಾರವಾಗಿ ಬಹುಶಃ ಮಹಿಳೆಯನ್ನು ತಳ್ಳಿರಬೇಕು ಎಂದು ತಿಳಿಸಿದ್ದಾರೆ 

Trending News