ಕಾಣೆಯಾಗಿದ್ದ ನೋಡಲ್ ಚುನಾವಣಾ ಅಧಿಕಾರಿ ಹೌರಾದಲ್ಲಿ ಪತ್ತೆ

ಎರಡನೇ ಹಂತದ ಲೋಕಸಭಾ ಚುನಾವಣೆಯ ಬಳಿಕ ರಾಯ್ ಕಾಣೆಯಾಗಿದ್ದರು. 

Last Updated : Apr 25, 2019, 02:31 PM IST
ಕಾಣೆಯಾಗಿದ್ದ ನೋಡಲ್ ಚುನಾವಣಾ ಅಧಿಕಾರಿ ಹೌರಾದಲ್ಲಿ ಪತ್ತೆ title=

ಕೋಲ್ಕತ್ತಾ: ಏಪ್ರಿಲ್ 19 ರಂದು ಕಾಣೆಯಾಗಿದ ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯ ನೋಡಲ್ ಚುನಾವಣಾಧಿಕಾರಿ ಗುರುವಾರ ಹೌರಾದಲ್ಲಿ ಪತ್ತೆಯಾಗಿದ್ದಾರೆ.

ನಾಡಿಯಾ ಜಿಲ್ಲೆಯ ರಣಘಾಟ್ ನಲ್ಲಿ  ಎಲೆಕ್ಟ್ರಾನಿಕ್ ಮತದಾನ ಯಂತ್ರಗಳ (ಇವಿಎಂ) ಉಸ್ತುವಾರಿ ವಹಿಸಿದ್ದ ಅರ್ನಬ್ ರಾಯ್ ಅವರು ಹೌರಾದಲ್ಲಿ ಸಿಕ್ಕಿದ್ದಾರೆ. ಅವರು ತಮ್ಮ ಅತ್ತೆ ಮನೆಯಲ್ಲಿ ತಂಗಿದ್ದರು ಎನ್ನಲಾಗಿದೆ. ರಾಯ್ ಅವರ ಮಾವ ಉಪ ಪೊಲೀಸ್ ಅಧೀಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಎರಡನೇ ಹಂತದ ಲೋಕಸಭಾ ಚುನಾವಣೆಯ ಬಳಿಕ ರಾಯ್ ಕಾಣೆಯಾಗಿದ್ದರು. 

"ಏಪ್ರಿಲ್ 18ರ ಮಧ್ಯಾಹ್ನದಿಂದ ಅರ್ನಬ್ ರಾಯ್(30) ಕಾಣೆಯಾಗಿದ್ದಾರೆ. ಅವರು ಇನ್ನೂ ಪತ್ತೆಯಾಗಿಲ್ಲ" ಎಂದು ನಾಡಿಯಾ ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿ ಹೇಳಿದ್ದರು. ಅಲ್ಲದೆ, ಈ ಬಗ್ಗೆ ಜಿಲಾ ಮುಖ್ಯಚುನಾವಣಾಧಿಕಾರಿಗಳು ವರದಿಯನ್ನು ಕೇಳಿದ್ದರು. 

Trending News