G-20: ಜಪಾನ್ ತಲುಪಿದ ಪ್ರಧಾನಿ ಮೋದಿಯವರನ್ನು ಹೇಗಿದ್ದೀರಿ ಎಂದು ಕೇಳಿದ ಮಕ್ಕಳು!

ಜೂನ್ 28-29ರಂದು ಜಪಾನ್‌ನ ಒಸಾಕಾ ನಗರದಲ್ಲಿ ಜಿ-20 ಶೃಂಗಸಭೆಯನ್ನು ಆಯೋಜಿಸಲಾಗಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ ಈ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಇದು ಪ್ರಧಾನಿ ನರೇಂದ್ರ ಮೋದಿಯವರ ಆರನೇ ಜಿ -20 ಶೃಂಗಸಭೆ ಆಗಿದೆ.

Last Updated : Jun 27, 2019, 12:00 PM IST
G-20: ಜಪಾನ್ ತಲುಪಿದ ಪ್ರಧಾನಿ ಮೋದಿಯವರನ್ನು ಹೇಗಿದ್ದೀರಿ ಎಂದು ಕೇಳಿದ ಮಕ್ಕಳು! title=
Pic Courtesy: Twitter@narendramodi

ಒಸಾಕಾ(ಜಪಾನ್): ಜಿ -20 ಶೃಂಗಸಭೆಯಲ್ಲಿ ಭಾಗವಹಿಸಲು ಜಪಾನ್‌ನ ಒಸಾಕಾ ತಲುಪಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭಾರತೀಯ ಸಮುದಾಯ ಸ್ವಾಗತಿಸಿತು. ಒಸಾಕಾದ ಸ್ವಿಸ್ಸೊಟೆಲ್ ನಂಕೈ ಹೋಟೆಲ್‌ನಲ್ಲಿ ಮೋದಿ-ಮೋದಿ ಘೋಷಣೆಯೊಂದಿಗೆ ಮೋದಿ ಅವರನ್ನು ಸ್ವಾಗತಿಸಲಾಯಿತು. ನಂತರ ಮಕ್ಕಳು ಕೈಜೋಡಿಸಿ ಪಿಎಂ ಮೋದಿಯವರನ್ನು HOW ARE YOU(ಹೇಗಿದ್ದೀರಿ) ಎಂದು ಕೇಳಿದರು! ಈ ವೇಳೆ ಮಕ್ಕಳನ್ನು ಕಂಡು ಸಂತಸಗೊಂಡ ಪ್ರಧಾನಿ ಮೋದಿಯವರು ನಸು ನಕ್ಕು, ನಾನು ಚೆನ್ನಾಗಿದ್ದೇನೆ ಎಂದು ಹೇಳಿದರು. ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ "ಜಿ -20 ಶೃಂಗಸಭೆಯಲ್ಲಿ ಭಾಗವಹಿಸಲು ಒಸಾಕಾ ತಲುಪಿದಾಗ ಭಾರತೀಯ ಸಮುದಾಯ ನೀಡಿದ ಆತ್ಮೀಯ ಸ್ವಾಗತಕ್ಕೆ ಧನ್ಯವಾದಗಳು" ಎಂದು ಬರೆದಿದ್ದಾರೆ.

ಜೂನ್ 28-29ರಂದು ಜಪಾನ್‌ನ ಒಸಾಕಾ ನಗರದಲ್ಲಿ ಜಿ-20 ಶೃಂಗಸಭೆಯನ್ನು ಆಯೋಜಿಸಲಾಗಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ ಈ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಇದು ಪ್ರಧಾನಿ ನರೇಂದ್ರ ಮೋದಿಯವರ ಆರನೇ ಜಿ -20 ಶೃಂಗಸಭೆ ಆಗಿದೆ.

"ಪ್ರಧಾನಿ ನರೇಂದ್ರ ಮೋದಿಯವರು ಒಸಾಕಾ ಹೋಟೆಲ್‌ಗೆ ಆಗಮಿಸಿದಾಗ ಭಾರತೀಯ ಸಮುದಾಯದ ಉತ್ಸಾಹಿ ಮತ್ತು ಹೆಮ್ಮೆಯ ಸದಸ್ಯರು ಪ್ರಧಾನಿ ನರೇಂದ್ರ ಮೋದಿಯವರನ್ನು ಸ್ವಾಗತಿಸಿದರು" ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಟ್ವೀಟ್ ಮಾಡಿದ್ದಾರೆ.

ಜಿ -20 ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಅವರು ಒಸಾಕಾ ತಲುಪಿದ್ದಾರೆ. ಮೋದಿಯವರು ಎರಡನೇ ಅವಧಿಗೆ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಕೈಗೊಂಡಿರುವ ಮೊದಲ ರಾಜತಾಂತ್ರಿಕ ಭೇಟಿ ಇದಾಗಿದೆ. ವಿಶ್ವದ ಅತ್ಯಂತ ಶಕ್ತಿಶಾಲಿ 20 ದೇಶಗಳ ಸಮ್ಮೇಳನವನ್ನು ಜಪಾನ್‌ನ ಒಸಾಕಾದಲ್ಲಿ ಶುಕ್ರವಾರ ಪ್ರಾರಂಭಿಸಲಾಗುತ್ತಿದೆ. ಪಿಎಂ ಮೋದಿ ಅವರು ಗುರುವಾರ ಪ್ರಧಾನಿ ಶಿಂಜೊ ಅಬೆ ಅವರನ್ನು ಭೇಟಿ ಮಾಡಲಿದ್ದಾರೆ. ಈ ವೇಳೆ ದ್ವಿಪಕ್ಷೀಯ ವ್ಯವಹಾರ ಸೇರಿದಂತೆ ಎಲ್ಲಾ ವಿಷಯಗಳ ಬಗ್ಗೆ ಮಾತನಾಡುವ ಸಾಧ್ಯತೆಯಿದೆ.

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಪ್ರಧಾನಿ ಶುಕ್ರವಾರ ಭೇಟಿಯಾಗಲಿದ್ದಾರೆ. ಇದಲ್ಲದೆ, ಬ್ರಿಕ್ಸ್ ದೇಶಗಳ ರಾಷ್ಟ್ರ ಮುಖ್ಯಸ್ಥರ ಸಭೆಯನ್ನೂ ನಿಗದಿಪಡಿಸಲಾಗಿದೆ. ಮಹಿಳಾ ಸಬಲೀಕರಣ, ಕೃತಕ ಬುದ್ಧಿಮತ್ತೆ ಮತ್ತು ಭಯೋತ್ಪಾದನೆ ವಿರುದ್ಧ ಹೋರಾಡುವ ಸವಾಲುಗಳಂತಹ ಪ್ರಮುಖ ವಿಷಯಗಳು ಹೆಚ್ಚು ಮಹತ್ವದ್ದಾಗಿರುತ್ತವೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಜಪಾನ್ ಭೇಟಿಗೆ ಮುನ್ನ ಹೇಳಿದರು.

Trending News