'ಇನ್ನು 6 ತಿಂಗಳು ಮಾಸ್ಕ್ ಕಡ್ಡಾಯ, ಲಾಕ್‌ಡೌನ್‌ ಇಲ್ಲ'

ಖಾಯಿಲೆ ಬರುವುದಕ್ಕಿಂತ ಮುನ್ನ ಅದನ್ನೂ ಬಾರದೇ ಇರುವಂತೆ ನೋಡಿಕೊಳ್ಳವುದು ನಮ್ಮ ಅದ್ಯತೆಯಾಗಿದ್ದು, ಈ ನಿಟ್ಟಿನಲ್ಲಿ ನಾವು ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದನ್ನು ಕನಿಷ್ಠ ಆರು ತಿಂಗಳಕಾಲ ಅಭ್ಯಾಸ ಮಾಡಿಕೊಳ್ಳಬೇಕಾಗಿದೆ

Last Updated : Dec 20, 2020, 04:52 PM IST
  • ಮುಂದಿನ ಆರು ತಿಂಗಳಕಾಲ ಮಾಸ್ಕ್ ಧರಿಸುವುದು ಕಡ್ಡಾಯವಾಗಿದ್ದು, ಕರೋನವೈರಸ್ ಹರಡುವಿಕೆಗೆ ಕಡಿವಾಣ ಹಾಕಲು ಕ್ರಮ ಕೈಗೊಳ್ಳಬೇಕು
  • ಖಾಯಿಲೆ ಬರುವುದಕ್ಕಿಂತ ಮುನ್ನ ಅದನ್ನೂ ಬಾರದೇ ಇರುವಂತೆ ನೋಡಿಕೊಳ್ಳವುದು ನಮ್ಮ ಅದ್ಯತೆಯಾಗಿದ್ದು, ಈ ನಿಟ್ಟಿನಲ್ಲಿ ನಾವು ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದನ್ನು ಕನಿಷ್ಠ ಆರು ತಿಂಗಳಕಾಲ ಅಭ್ಯಾಸ ಮಾಡಿಕೊಳ್ಳಬೇಕಾಗಿದೆ
  • ಆದರೆ ರಾಜ್ಯದಲ್ಲಿ ಕೋವಿಡ್-19 ಪರಿಸ್ಥಿತಿ ಸಂಪೂರ್ಣವಾಗಿ ನಿಯಂತ್ರಣದಲ್ಲಿರುವುದರಿಂದ ಈ ಕ್ರಮಗಳನ್ನು ಅವರು ಬೆಂಬಲಿಸುವುದಿಲ್ಲ
'ಇನ್ನು 6 ತಿಂಗಳು ಮಾಸ್ಕ್ ಕಡ್ಡಾಯ, ಲಾಕ್‌ಡೌನ್‌ ಇಲ್ಲ' title=

ಮುಂಬೈ: ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ರಾತ್ರಿ ಕರ್ಫ್ಯೂವನ್ನು ಹೇರೋದಿಲ್ಲ ಎಂದು ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಹೇಳಿದ್ದಾರೆ.

ವಿಡಿಯೋ ಕಾನ್ಫರೆನ್ಸ್ ಮೂಲಕ ರಾಜ್ಯವನ್ನು ಉದ್ದೇಶಿಸಿ ಮಾತನಾಡಿದ ಸಿಎಂ ಠಾಕ್ರೆ, ಮಾರ್ಗಸೂಚಿಯನ್ನು ಪಾಲಿಸುವಂತೆ ಜನರಲ್ಲಿ ಮನವಿ ಮಾಡಿಕೊಂಡರು. ಇದೇ ವೇಳೆ ಅವರು ಮಾತನಾಡುತ್ತ, ಮುಂದಿನ ಆರು ತಿಂಗಳಕಾಲ ಮಾಸ್ಕ್ ಧರಿಸುವುದು ಕಡ್ಡಾಯವಾಗಿದ್ದು, ಕರೋನವೈರಸ್(Coronavirus) ಹರಡುವಿಕೆಗೆ ಕಡಿವಾಣ ಹಾಕಲು ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

PM Narendra Modi: ಡಿ.25ರಂದು ರೈತರೊಂದಿಗೆ ಪ್ರಧಾನಿ ಮೋದಿ ಸಂವಾದ..!

ಖಾಯಿಲೆ ಬರುವುದಕ್ಕಿಂತ ಮುನ್ನ ಅದನ್ನೂ ಬಾರದೇ ಇರುವಂತೆ ನೋಡಿಕೊಳ್ಳವುದು ನಮ್ಮ ಅದ್ಯತೆಯಾಗಿದ್ದು, ಈ ನಿಟ್ಟಿನಲ್ಲಿ ನಾವು ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದನ್ನು ಕನಿಷ್ಠ ಆರು ತಿಂಗಳಕಾಲ ಅಭ್ಯಾಸ ಮಾಡಿಕೊಳ್ಳಬೇಕಾಗಿದೆ ಅಂತ ಅವರು ಹೇಳಿದರು. ಇನ್ನೂ ಇದೇ ವೇಳೆ ಅವರು ರಾಜ್ಯದಲ್ಲಿ ಕೊರೊನಾವೈರಸ್ ಪ್ರಕರಣಗಳು, ಮೆಟ್ರೋ ಕಾರ್ ಶೆಡ್ ಯೋಜನೆ ಸೇರಿದಂತೆ ಹಲವು ಸಮಸ್ಯೆಗಳ ಬಗ್ಗೆ ಠಾಕ್ರೆ ಮಾತನಾಡಿದರು.

Facebook Bug: ಹಲವು Instagram ಬಳಕೆದಾರರ ವೈಯಕ್ತಿಕ ಮಾಹಿತಿ ಸೋರಿಕೆ

ರಾತ್ರಿ ಕರ್ಫ್ಯೂ ಅಥವಾ ಲಾಕ್ ಡೌನ್ ಅನ್ನು ಹೇರುವುದಕ್ಕೆ ತಜ್ಞರು ಒಲವು ತೋರುತ್ತಿದ್ದಾರೆ ಎಂದು ಸಿಎಂ ಠಾಕ್ರೆ ಹೇಳಿದ್ದು, ಆದರೆ ರಾಜ್ಯದಲ್ಲಿ ಕೋವಿಡ್-19 ಪರಿಸ್ಥಿತಿ ಸಂಪೂರ್ಣವಾಗಿ ನಿಯಂತ್ರಣದಲ್ಲಿರುವುದರಿಂದ ಈ ಕ್ರಮಗಳನ್ನು ಅವರು ಬೆಂಬಲಿಸುವುದಿಲ್ಲ ಎಂದು ಠಾಕ್ರೆ ಹೇಳಿದ್ದಾರೆ.ಮಹಾರಾಷ್ಟ್ರದಲ್ಲಿ ಶನಿವಾರ 3,940 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿದ್ದು, ಒಟ್ಟು 18,92,707 ಮಂದಿ ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಈ ಸಾಂಕ್ರಾಮಿಕ ರೋಗ ದಿಂದಾಗಿ 74 ಮಂದಿ ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ 48,648ಕ್ಕೆ ಏರಿಕೆ ಕಂಡಿದೆ.

Maruti Celerio Offer: ಕೇವಲ 48 ಸಾವಿರ ಪಾವತಿಸಿ ಮನೆಗೆ ತನ್ನಿ ಈ ಹೊಚ್ಚ ಹೊಸ ಕಾರ್

Trending News