ಮಹಾರಾಷ್ಟ್ರದಲ್ಲಿ ಮತ್ತೆ ಭುಗಿಲೆದ್ದ ಮರಾಠಾ ಮೀಸಲಾತಿ ಹೋರಾಟ

    

Last Updated : Jul 27, 2018, 04:05 PM IST
ಮಹಾರಾಷ್ಟ್ರದಲ್ಲಿ ಮತ್ತೆ ಭುಗಿಲೆದ್ದ ಮರಾಠಾ ಮೀಸಲಾತಿ ಹೋರಾಟ  title=
Photo courtesy: PTI

ಮುಂಬೈ: ಮಹಾರಾಷ್ಟ್ರದಲ್ಲಿ ಮತ್ತೆ ಮೀಸಲಾತಿಯ ಹೋರಾಟ ಬುಗಿಲೆದ್ದಿದೆ. ಮರಾಠಾ ಸಮುದಾಯದ ಜನರು ಶಿಕ್ಷಣ ಹಾಗೂ ಸರ್ಕಾರಿ ಉದ್ಯೋಗಗಳಲ್ಲಿ ಮಿಸಲಾತಿ ಬೇಕೆಂದು ಈಗ  ಮತ್ತೆ ಬೀದಿಗೆ ಇಳಿದಿದ್ದಾರೆ.

ಮಹಿಳಾ ಹೋರಾಟಗಾರರು ಬೀಡ ಜಿಲ್ಲೆಯ ಪಾರ್ಲಿ ಪಟ್ಟಣದಲ್ಲಿ ಕೈಯಲ್ಲಿ ಲಾಟಿ ಹಿಡಿದು ಪ್ರತಿಭಟನೆಗೆ ನಿಂತಿದ್ದರು ಅಲ್ಲದೆ ಈಗಾಗಲೇ ಮರಾಠಾ ಕ್ರಾಂತಿ ಮೋರ್ಚಾ ಕಾರ್ಯಕರ್ತರ ಮೇಲಿರುವ ಕೇಸ್ ಗಳನ್ನು ಹಿಂತೆಗೆದುಕೊಳ್ಳಬೇಕೆಂದು ಆಗ್ರಹಿಸಿದರು.

ಇನ್ನೊಂದು ಘಟನೆಯಲ್ಲಿ ರಾಮೇಶ್ವರ್ ಮುರಳಿಧರ್ ಗಾಯಕವಾಡ್  ಎನ್ನುವ  ಯುವಕನೊಬ್ಬ ಪರ್ಭಾನಿಯಲ್ಲಿ ಮೀಸಲಾತಿ ಬೇಡಿಕೆಯ ವಿಚಾರವಾಗಿ ವಿಷವನ್ನು ಸೇವಿಸಿದ್ದಾನೆ. ತಕ್ಷಣ ಅವನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮರಾಠವಾಡಾ ಪ್ರದೇಶದಲ್ಲಿಯೂ ಪ್ರತಿಭಟನೆಗಳು ತೀವ್ರವಾಗಿ ನಡೆಯುತ್ತಿದ್ದು ಆಸ್ಪತ್ರೆಗೆ ಹೋಗುವ ಅಂಬುಲನ್ಸ್ ಗಳನ್ನು ತಡೆಹಿಡಿದು ಪ್ರತಿಭಟನೆಗೆ ಮುಂದಾಗಿದ್ದಾರೆ.ಇನ್ನು ಹಲವು ಪ್ರದೇಶಗಳಲ್ಲಿ ಕಲ್ಲು ತೂರಾಟಗಳು ಕಂಡುಬಂದಿವೆ.

ನವಿ ಮುಂಬೈಯಲ್ಲಿ ಮರಾಠ ಮಿಸಲಾತಿ ಹೋರಾಟದ ವಿಚಾರವಾಗಿ ಸುಮಾರು ೧೫೦ಕ್ಕೂ ಅಧಿಕ ವಾಹನಗಳು ಬೆಂಕಿಗೆ ಆಹುತಿಯಾಗಿವೆ ಎಂದು ಪಿಟಿಐ ವರದಿ ಮಾಡಿದೆ.

Trending News