ವೈದ್ಯಕೀಯ ಚಿಕಿತ್ಸೆ ನಂತರ ಭಾರತಕ್ಕೆ ವಾಪಸ್ಸಾಗಲಿರುವ ಪರಿಕ್ಕರ್

    

Last Updated : Jun 13, 2018, 06:17 PM IST
ವೈದ್ಯಕೀಯ ಚಿಕಿತ್ಸೆ ನಂತರ ಭಾರತಕ್ಕೆ ವಾಪಸ್ಸಾಗಲಿರುವ ಪರಿಕ್ಕರ್  title=

ನವದೆಹಲಿ: ಗೋವಾ ಮುಖ್ಯಮಂತ್ರಿ  ಮನೋಹರ್ ಪರಿಕ್ಕರ ಈಗ ವೈದ್ಯಕೀಯ ಚಿಕಿತ್ಸೆ ನಂತರ ಭಾರತಕ್ಕೆ ಆಗಮಿಸಲಿದ್ದಾರೆ ಎಂದು ತಿಳಿದುಬಂದಿದೆ.

ಮುಖ್ಯಮಂತ್ರಿ ಕಛೇರಿಗಳ ಪ್ರಕಾರ ಇದೇ ಶುಕ್ರವಾರದಂದು ಗೋವಾಕ್ಕೆ ಆಗಮಿಸಲಿದ್ದಾರೆ ಎಂದು ತಿಳಿದುಬಂದಿದೆ.ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್ಗೆ ಒಳಗಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಅವರು ಅಮೆರಿಕಾದಲ್ಲಿ ವೈದ್ಯಕೀಯ ಆರೈಕೆಯಲ್ಲಿದ್ದರು. ಕಳೆದ ತಿಂಗಳು, ವೀಡಿಯೊ ಸಂದೇಶವೊಂದರಲ್ಲಿ, ಪರಿಕ್ಕರ್ ಯಶಸ್ವಿ ಚಿಕಿತ್ಸೆಯ ಕುರಿತು  ಹೇಳಿದ್ದರು.

ವೈದ್ಯಕೀಯ ಚಿಕಿತ್ಸೆಗಾಗಿ ಅಮೆರಿಕಾಕ್ಕೆ ತೆರಳುವ ಮೊದಲು ತೆರಳುವ ಮೊದಲು, ಫೆಬ್ರವರಿ 15 ರಂದು ಮುಂಬೈಯ ಲೀಲಾವತಿ ಆಸ್ಪತ್ರೆಯಲ್ಲಿ ಗೋವಾ ಮುಖ್ಯಮಂತ್ರಿ ಆಸ್ಪತ್ರೆಗೆ ದಾಖಲಾಗಿದ್ದರು.ಫೆಬ್ರುವರಿ 22 ರಂದು ಅಲ್ಲಿದ್ದ ಅಮೆರಿಕಾಕ್ಕೆ ಹೆಚ್ಚಿನ ಚಿಕಿತ್ಸೆಗಾಗಿ ತೆರಳಿದ್ದರು. 

Trending News