ನವದೆಹಲಿ: ಕಾಂಗ್ರೆಸಿನಿಂದ ಅಮಾನತುಗೊಂಡಿರುವ ಮಣಿ ಶಂಕರ್ ಅಯ್ಯರ್, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಮತ್ತೊಮ್ಮೆ ಚರ್ಚೆಯಲ್ಲಿದ್ದಾರೆ. ಪ್ರಧಾನಿ ಮೋದಿ ವಿರುದ್ಧ ತಮ್ಮ ವಾಗ್ದಾಳಿ ಮುಂದುವರೆಸಿರುವ ಅವರು ಈ ಬಾರಿ 'ನಾಯಿ'ಯ ಬಗೆಗಿನ ಪ್ರತಿಕ್ರಿಯೆಯನ್ನು ನೆನೆಪಿಸಿಕೊಂಡಿದ್ದಾರೆ. "ಮುಸ್ಲಿಮರನ್ನು ನಾಯಿ ಮರಿ (puppies) ಗಳಿಗೆ ಹೋಲಿಸುವ ವ್ಯಕ್ತಿಯೊಬ್ಬ ದೇಶದ ಪ್ರಧಾನಿ ಆಗುವರು ಎಂದು ನಾನು 2014ಕ್ಕೆ ಮೊದಲು ಯೋಚಿಸಿಯೇ ಇರಲಿಲ್ಲ" ಎಂದು ಮಣಿ ಶಂಕರ್ ಅಯ್ಯರ್ ಹೇಳಿದ್ದಾರೆ.
ಪ್ರಧಾನ ಮಂತ್ರಿ ವಿರುದ್ಧ ನಿಂದನೀಯ ಹೇಳಿಕೆ ಕಾರಣಗಳಿಂದಾಗಿ ಕಾಂಗ್ರೆಸ್ ನಿಂದ ಅವರನ್ನು ಅಮಾನತ್ತುಗೊಳಿಸಲಾಗಿದೆ. ಪ್ರಧಾನಿ ವಿದೇಶಿ ಭೇಟಿ ಬಗ್ಗೆ ಹೇಳಿಕೆ ನೀಡಿದ್ದ ಮಣಿಶಂಕರ್ ಅಯ್ಯರ್, "ಇದು ಕೇವಲ ವ್ಯಂಗ್ಯಚಿತ್ರಗಳು(Cartoons), ಅವರು ಎಲ್ಲೆಡೆಯೂ ತಮ್ಮನ್ನು ತೋರಿಸಲು ಬಯಸುತ್ತಾರೆ. ಪ್ರಪಂಚದಾದ್ಯಂತ ಸುತ್ತಾಡಿಕೊಂಡು, ಏನಾಗುತ್ತಿದೆ? ಅವರ ಬೆಂಬಲಿಗರು ಮೋದಿ-ಮೋದಿ ಎಂದು ಹೇಳಿಕೊಂಡು ಇರುತ್ತಾರೆ. ಮೋದಿ-ಮೋದಿ ಎಂದು ಕೂಗಿಕೊಂಡು ಇರುವುದು ವಿದೇಶಿ ನೀತಿಯೇ? ಎಂದು ಪ್ರಶ್ನಿಸಿದ್ದರು.
ಮೋದಿ ಪ್ರಧಾನಿ ಬಗ್ಗೆ ಅಯ್ಯರ್ ವಿವಾದಾತ್ಮಕ ಹೇಳಿಕೆಗಳು
1. 2017 ರಲ್ಲಿ ಅಯ್ಯರ್ ಅವರು, "ಕಾಶ್ಮೀರಿ ಯುವಕರು ಶಸ್ತ್ರಾಸ್ತ್ರಗಳನ್ನು ತೆಗೆದುಕೊಳ್ಳುವ ಮೂಲಕ ತಪ್ಪು ಮಾಡಲಿಲ್ಲ. ಬಿಜೆಪಿಯ ಜನರು ಅವರನ್ನು ಒತ್ತಾಯಿಸುತ್ತಿದ್ದಾರೆ" ಎಂದಿದ್ದರು.
2. 2015 ರಲ್ಲಿ ಭಾರತ-ಪಾಕಿಸ್ತಾನದ ಸಂಬಂಧಗಳ ಬಗ್ಗೆ ಅಯ್ಯರ್ ಹೇಳಿದ್ದಾರೆ: "ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಬಂಧವನ್ನು ಬಲಪಡಿಸಲು, ಮೋದಿ ಅವರನ್ನು ತೆಗೆದುಹಾಕಬೇಕು(ಅಧಿಕಾರದಿಂದ ಕೆಳಗಿಳಿಸಬೇಕು), ಇಲ್ಲವಾದರೆ ಮಾತುಕತೆ ಮುಂದುವರಿಯುವುದಿಲ್ಲ."
3. 2014 ರ ಲೋಕಸಭಾ ಚುನಾವಣೆಯಲ್ಲಿ ಮಣಿಶಂಕರ್ ಅಯ್ಯರ್ ಅವರು, "21 ನೇ ಶತಮಾನದಲ್ಲಿ ನರೇಂದ್ರ ಮೋದಿ ಎಂದಿಗೂ ಈ ದೇಶದ ಪ್ರಧಾನಿಯಾಗುವುದಿಲ್ಲ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ. ಆದರೆ ಅವರು ಇಲ್ಲಿಗೆ ಬಂದು ಚಹಾವನ್ನು ಮಾರಾಟ ಮಾಡಲು ಬಯಸಿದರೆ, ನಾವು ಅವರಿಗೆ ಒಂದು ಸ್ಥಳವನ್ನು ನೀಡಬಹುದು" ಎಂದಿದ್ದರು.
4. 2013 ರಲ್ಲಿ ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಮೋದಿ ಅವರು ಕಾಂಗ್ರೆಸ್ ಅನ್ನು "ಗೆದ್ದಲು" ಎಂದಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಅಯ್ಯರ್, "ಮೋದಿ ನಮ್ಮನ್ನು 'ಗೆದ್ದಲು' ಎಂದು ಕರೆದಿದ್ದಾರೆ. ಹಾಗಾಗಿ ನಾನು ಅವರಿಗೆ ಹೇಳುತ್ತೇನೆ ಅವರು ಹಾವು, ಚೇಳುಗಳು ಮತ್ತು ಅಂತಹ ಕೊಳಕು ವ್ಯಕ್ತಿಯಿಂದ ಅಂತಹ ಟೀಕೆಗಳನ್ನು ಕೇಳಿದರೆ, ಅದು ಸ್ವತಃ ಹೊಗಳಿಕೆ" ಎಂದಿದ್ದರು.
5. 2013 ರಲ್ಲಿ, ಅಯ್ಯರ್ ಮೋದಿ ಅವರನ್ನು 'ಜೋಕರ್' ಎಂದು ಬಣ್ಣಿಸಿದ್ದಾರೆ. "4-5 ಭಾಷಣಗಳನ್ನು ನೀಡುವ ಮೂಲಕ, ತನ್ನ ಬಾಯಿಯಲ್ಲಿ ಎಷ್ಟು ಕೊಳಕು ಮಾತುಗಳಿವೆ ಎಂದು ಅವನು ಹೇಳಿದ್ದಾನೆ. ಅವರಿಗೆ ಇತಿಹಾಸ, ಅರ್ಥಶಾಸ್ತ್ರ ಅಥವಾ ಸಂವಿಧಾನದ ಮಾಹಿತಿಯೂ ತಿಳಿದಿಲ್ಲ. ಬಾಯಲ್ಲಿ ಏನ್ ಬರುತ್ತೋ ಅದನ್ನು ಮಾತನಾಡುತ್ತಾರೆ" ಎಂದಿದ್ದರು.