Viral Video: ಷರ್ಟ್-ಪ್ಯಾಂಟ್ ಬಿಚ್ಚಿ ಮೆಟ್ರೊ ರೈಲಿನಲ್ಲಿ ಆ ಕೆಲ್ಸಾನೂ ಮಾಡೇಬಿಟ್ಟ ಈ ಭೂಪ!

Viral Metro Video: ಸಾಮಾಜಿಕ ಮಾಧ್ಯಮದಲ್ಲಿ ಮೆಟ್ರೊ ರೈಲಿನಲ್ಲಿ ಷೂಟ್ ಮಾಡಲಾದ ಮತ್ತೊಂದು ವಿಚಿತ್ರ ವೀಡಿಯೋ ಇದೀಗ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಶರ್ಟ್-ಪ್ಯಾಂಟ್ ಕಳಚಿ ಮಾಡುತ್ತಿರುವುದನ್ನು ನೋಡಿದ ಜನರು ಗಲಿಬಿಲಿಗೊಂಡಿದ್ದಾರೆ.  

Written by - Nitin Tabib | Last Updated : Apr 11, 2023, 03:06 PM IST
  • ಇತ್ತೀಚಿನ ದಿನಗಳಲ್ಲಿ ಜನರು ಸಾಮಾಜಿಕ ಮಾಧ್ಯಮದಲ್ಲಿ ವೀವ್ಸ್, ಲೈಕ್ಸ್ ಮತ್ತು ಜನಪ್ರಿಯತೆಗಾಗಿ
  • ಜನರು ಏನು ಬೇಕಾದರೂ ಮಾಡಲು ಸಿದ್ಧರಾಗುತ್ತಿದ್ದಾರೆ.
  • ಆದರೆ, ಕೆಲವರು ಮಾಡುವ ಕೆಲಸಗಳನ್ನು ನೋಡಿದರೆ, ಅದನ್ನು ನಂಬುವುದು ಸ್ವಲ್ಪ ಕಷ್ಟಕರವಾಗುತ್ತದೆ.
Viral Video: ಷರ್ಟ್-ಪ್ಯಾಂಟ್ ಬಿಚ್ಚಿ ಮೆಟ್ರೊ ರೈಲಿನಲ್ಲಿ ಆ ಕೆಲ್ಸಾನೂ ಮಾಡೇಬಿಟ್ಟ ಈ ಭೂಪ! title=
ಮೆಟ್ರೊ ರೈಲಿನ ವೈರಲ್ ವೀಡಿಯೋ!

Viral Metro Video: ಇತ್ತೀಚಿನ ದಿನಗಳಲ್ಲಿ ಮೆಟ್ರೋ ರೈಲುಗಳಲ್ಲಿ ಚಿತ್ರೀಕರಿಸಲಾದ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಇವುಗಳಲ್ಲಿನ ಕೆಲವು ತಮಾಷೆಯ ವಿಡಿಯೋಗಳನ್ನು ನೋಡಿ ಜನರು ಹೊಟ್ಟೆ ಹಿಡಿದುಕೊಂಡು ನಕ್ಕರೆ, ಕೆಲವು ವೈರಲ್ ವೀಡಿಯೊಗಳನ್ನು ನೋಡಿದ ಜನರು ಭಾರಿ ಬೆಚ್ಚಿಬೀಳುತ್ತಾರೆ. ಇತ್ತೀಚೆಗಷ್ಟೇ ಮೆಟ್ರೋದಲ್ಲಿ ಚಿತ್ರೀಕರಿಸಲಾಗಿದ್ದ ಇಂತಹ ವಿಡಿಯೋವೊಂದು ವೈರಲ್ ಆಗಿದ್ದು, ನೋಡಿದವರೆಲ್ಲರೂ ಭಾರಿ ಅಸಹ್ಯ ಪಟ್ಟುಕೊಂಡಿದ್ದರು. ಈ ಘಟನೆಗೆ ಎಲ್ಲೆಡೆ ಟೀಕೆ ವ್ಯಕ್ತವಾಗಿತ್ತು. ಇದೇ ವೇಳೆ ಇದೀಗ ಅಂತಹುದ್ದೇ ಒಂದು ವಿಚಿತ್ರ ವಿಡಿಯೋ ಮತ್ತೆ ವೈರಲ್ ಆಗುತ್ತಿದೆ. ಇದರಲ್ಲಿ ವ್ಯಕ್ತಿಯೊಬ್ಬರು ಮೆಟ್ರೋ ಒಳಗೆ ಸ್ನಾನ ಮಾಡುತ್ತಿರುವ ದೃಶ್ಯ ಕಂಡು ಬಂದಿದೆ. ಆ ವ್ಯಕ್ತಿಯ ಸ್ಟೈಲ್ ನೋಡಿ ಸಹ ಪ್ರಯಾಣಿಕರೂ ಕೂಡ ಬೆರಗಾಗಿದ್ದಾರೆ. 

ಇದನ್ನೂ ಓದಿ-Viral Video: 'ನಾವು ಸಲಿಂಗಕಾಮಿಗಳನ್ನು ತಯಾರಿಸುವ ಉದ್ಯಮ ಸ್ಥಾಪಿಸಿದ್ದೇವೆ' ಮದರಸಾಗಳ ಕುರಿತು ಪಾಕ್ ಮೌಲ್ವಿ ಹೇಳಿಕೆ ಭಾರಿ ವೈರಲ್!

ಇತ್ತೀಚಿನ ದಿನಗಳಲ್ಲಿ ಜನರು ಸಾಮಾಜಿಕ ಮಾಧ್ಯಮದಲ್ಲಿ ವೀವ್ಸ್, ಲೈಕ್ಸ್ ಮತ್ತು ಜನಪ್ರಿಯತೆಗಾಗಿ ಜನರು ಏನು ಬೇಕಾದರೂ ಮಾಡಲು ಸಿದ್ಧರಾಗುತ್ತಿದ್ದಾರೆ. ಆದರೆ, ಕೆಲವರು ಮಾಡುವ ಕೆಲಸಗಳನ್ನು ನೋಡಿದರೆ, ಅದನ್ನು ನಂಬುವುದು ಸ್ವಲ್ಪ ಕಷ್ಟಕರವಾಗುತ್ತದೆ. ಈಗ ಹೇಳಿ, ಯಾರಾದರೂ ಮೆಟ್ರೋ ರೈಲಿನಲ್ಲಿ ಸ್ನಾನ ಮಾಡುತ್ತಾರೆಯೇ? ಆದರೆ ಭೂಪನೊಬ್ಬ ತನಗೆ ನೀಡಲಾದ ಎಲ್ಲಾ ಮಿತಿಗಳನ್ನು ಧ್ವಂಸಗೊಳಿಸಿ ಮೆಟ್ರೊ ರೈಲನ್ನು ಸ್ನಾನಗೃಹವನ್ನಾಗಿಸಿದ್ದಾನೆ. ಮೆಟ್ರೋದೊಳಗೆ ಈ ವ್ಯಕ್ತಿ ತನ್ನ ಬ್ಯಾಗ್ ನಲ್ಲಿ ನೀರು ತಂದಿರುವುದನ್ನು ನೀವು ವಿಡಿಯೋದಲ್ಲಿ ಕಾಣಬಹುದು. ಮೊದಲು ಬಟ್ಟೆ ಕಳಚಿ, ಕ್ಯಾನ್ ನಿಂದ ಬ್ಯಾಗ್ ಗೆ ನೀರನ್ನು ಹಾಕುತ್ತಾನೆ ನಂತರ ಆತ ಅದರಲ್ಲಿ ಕುಳಿತು ಸ್ನಾನ ಮಾಡುತ್ತಾನೆ. ವ್ಯಕ್ತಿಯ ಈ ಕೃತ್ಯವನ್ನು ಕಂಡು ಜನ ರೊಚ್ಚಿಗೆದ್ದಿದ್ದಾರೆ. ಅನೇಕ ಜನರು ಅಲ್ಲಿಂದ ಎದ್ದು ಬೇರೆ ಸ್ಥಳಗಳಿಗೆ ಹೋಗಿದ್ದಾರೆ. ಆದರೆ, ಇದು ವ್ಯಕ್ತಿಯ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ ಮತ್ತು ಅವರು ಸಂತೋಷದಿಂದ ಸ್ನಾನವನ್ನು ಮುಂದುವರೆಸಿದ್ದಾನೆ. ವೀಡಿಯೋ ನೋಡಿ...

ಇದನ್ನೂ ಓದಿ-Viral Video: ಎಪ್ಪೋ... ! 3 ಕೆಜಿ ತೂಕದ ಒಂದು ಬಾಳೆಹಣ್ಣು, ನೀವೆಂದಾದರೂ ನೋಡಿದ್ದೀರಾ ಅಥವಾ ಕೇಳಿದ್ದೀರಾ? ವಿಡಿಯೋ ನೋಡಿ..

ಎಲ್ಲಿಂದ ಬರ್ತಾರೆ ಇಂತಹ ಜನ?
ಈ ಪ್ರಪಂಚದಲ್ಲಿ ಇಂತಹ ಜನರೂ ಇದ್ದಾರೆ ಅಂತ ವೀಡಿಯೋ ನೋಡಿದ ಮೇಲೆ ನಿಮಗೂ ಆಶ್ಚರ್ಯವಾಗಿರಬಹುದು. ಪರಿಸ್ಥಿತಿ ಹೇಗಿದೆ ಎಂದರೆ ವ್ಯಕ್ತಿಯ ಈ ವಿಡಿಯೋ ಮತ್ತೊಮ್ಮೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ಈ ವೀಡಿಯೊವನ್ನು 'princezee' ಹೆಸರಿನ ಖಾತೆಯಿಂದ ಫೇಸ್‌ಬುಕ್‌ನಲ್ಲಿ ಹಂಚಿಕೊಳ್ಳಲಾಗಿದೆ. ಈ ವೀಡಿಯೋವನ್ನು ಇದುವರೆಗೆ 15 ಮಿಲಿಯನ್‌ಗಿಂತಲೂ ಹೆಚ್ಚು ಜನರು ವೀಕ್ಷಿಸಿದ್ದಾರೆ.  59 ಸಾವಿರಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ. 12 ಸಾವಿರಕ್ಕೂ ಹೆಚ್ಚು ಮಂದಿ ಕಾಮೆಂಟ್ ಮಾಡಿದ್ದಾರೆ. ಇಷ್ಟೇ ಅಲ್ಲ, ಈ ವಿಡಿಯೋ ಬಳಕೆದಾರರ ನಡುವೆ ಭಾರಿ ಚರ್ಚೆಗೆ ಕಾರಣವಾಗಿದೆ.

ಇದನ್ನೂ ನೋಡಿ -

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News