ಬಿಹಾರ್ ದಲ್ಲಿ ವೃತ್ತವೊಂದಕ್ಕೆ ಪ್ರಧಾನಿ ಮೋದಿ ಹೆಸರಿಟ್ಟಿದ್ದ ವ್ಯಕ್ತಿಗೆ ಶಿರಚ್ಛೇದನ!

    

Last Updated : Mar 16, 2018, 08:51 PM IST
ಬಿಹಾರ್ ದಲ್ಲಿ ವೃತ್ತವೊಂದಕ್ಕೆ ಪ್ರಧಾನಿ ಮೋದಿ ಹೆಸರಿಟ್ಟಿದ್ದ ವ್ಯಕ್ತಿಗೆ ಶಿರಚ್ಛೇದನ!  title=

ನವದೆಹಲಿ: ಬಿಹಾರದ ದರ್ಭಾಂಗ ಜಿಲ್ಲೆಯಲ್ಲಿ ವೃತ್ತವೊಂದಕ್ಕೆ ನರೇಂದ್ರ ಮೋದಿ ಹೆಸರು ಇಟ್ಟಿರುವುದಕ್ಕೆ ಪ್ರತಿಯಾಗಿ ಬಿಜೆಪಿ ನಾಯಕ ತೇಜ್ ನಾರಾಯವರ ತಂದೆಯವರನ್ನು ಹತ್ಯೆಗೈಯಲಾಗಿದೆ. ಇವರು  2016 ರ ಡಿಸೆಂಬರ್ ನಲ್ಲಿ  ವೃತ್ತಕ್ಕೆ ಮೋದಿ ಚೌಕ ಎಂದು ಹೆಸರಿಟ್ಟಿದ್ದರು.

ಬೆಹಲ ಪಂಚಾಯತ್ ಯ ಬಿಜೆಪಿ ಮುಖಂಡ ನಾರಾಯ ತಮ್ಮ ತಂದೆಯನ್ನು ದುಷ್ಕರ್ಮಿಗಳು ಬೈಕ್ ಮೂಲಕ ಬೆನ್ನಟ್ಟಿ ಸದರ್ ಪೊಲೀಸ್ ಠಾಣೆ ಪ್ರದೇಶದ ಬಳಿ ಮೋದಿ ಚೌಕ ಎಂದು ಹೆಸರಿಸಲು ವಿವರಣೆ ನೀಡುತ್ತಿದ್ದ ಸಂದರ್ಭದಲ್ಲಿ ಸುಮಾರು 40 ರಿಂದ 50 ಜನರು ಬೈಕ್ ನಲ್ಲಿ ಬಂದು ಅವರನ್ನು ಶಿರಚ್ಛೇದನ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

ಏತನ್ಮಧ್ಯೆ, ಪೊಲೀಸರು ಅವರು ಅಪರಾಧಿಯನ್ನು ಬಂಧಿಸಿ ಎಲ್ಲ ಸಾಕ್ಷಿಗಳ ಹೇಳಿಕೆಗಳನ್ನು ಪಡೆದಿದ್ದಾರೆ ಎಂದು ತಿಳಿದುಬಂದಿದೆ. ಅಲ್ಲದೆ ಪೊಲೀಸರು ಇನ್ನು ಹೆಚ್ಚಿನ ರೀತಿಯ ತನಿಖೆಯನ್ನು ಕೈಕೊಂಡಿದ್ದಾರೆ.

Trending News