ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವುದಾಗಿ ಘೋಷಿಸಿದ ಒಂದು ದಿನದ ನಂತರ, ಇಂದು ದಿಗ್ವಿಜಯ ಸಿಂಗ್ ಅವರು ತಮ್ಮ ಸ್ಥಾನವನ್ನು ತ್ಯಜಿಸುವುದಾಗಿ ಘೋಷಿಸಿದರು. ಗಾಂಧಿ ಕುಟುಂಬ ಬೆಂಬಲಿತ ಅಭ್ಯರ್ಥಿಯಾಗಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಮುಂದಿಟ್ಟುಕೊಂಡು ಆ ನಿರ್ಧಾರ ಕೈಗೊಳ್ಳಲಾಗಿದೆ ಎನ್ನಲಾಗುತ್ತಿದೆ.
"ಖರ್ಗೆ ಜೀ ಅವರು ನನ್ನ ನಾಯಕರು ಮತ್ತು ನನ್ನ ಹಿರಿಯರು, ನಾನು ನಿನ್ನೆ ಅವರನ್ನು ಸ್ಪರ್ಧಿಸಲು ಬಯಸಿದ್ದೇನೆ ಎಂದು ಕೇಳಿದ್ದೆ. ಅವರು ಇಲ್ಲ ಎಂದು ಹೇಳಿದರು. ನಾನು ಇಂದು ಅವರನ್ನು ಮತ್ತೆ ಭೇಟಿ ಮಾಡಿದ್ದೇನೆ. ನೀವು ಸ್ಪರ್ಧಿಸಿದರೆ ನಾನು ಸಂಪೂರ್ಣವಾಗಿ ನಿಮ್ಮೊಂದಿಗಿದ್ದೇನೆ ಎಂದು ನಾನು ಅವರಿಗೆ ಹೇಳಿದೆ.ನಾನು ಅವರ ವಿರುದ್ಧ ಸ್ಪರ್ಧಿಸುವ ಯೋಚನೆ ಇಲ್ಲ, ಅವರು ನಾಮಪತ್ರ ಸಲ್ಲಿಸುತ್ತಿದ್ದಾರೆ ಹಾಗಾಗಿ ನಾನು ಅವರ ಪ್ರತಿಪಾದಕನಾಗುತ್ತೇನೆ ಎಂದು ದಿಗ್ವಿಜಯ್ ಸಿಂಗ್ ಹೇಳಿದ್ದಾರೆ.
ದಿಗ್ವಿಜಯ ಸಿಂಗ್ ಅವರು ತಮ್ಮ ಹುದ್ದೆಗೆ ಸ್ಪರ್ಧಿಸುವ ನಿರ್ಧಾರವನ್ನು ಪ್ರಕಟಿಸುವ ಮೊದಲು ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿರಲಿಲ್ಲ. ಇದು ಅಶೋಕ್ ಗೆಹ್ಲೋಟ್ ಅವರನ್ನು ಧಿಕ್ಕರಿಸುವ ಕ್ರಮವಾಗಿರಲಿಲ್ಲ. ಬದಲಾಗಿ, ಗಾಂಧಿಗಳು ತಮ್ಮ ಆಯ್ಕೆಯನ್ನು ನಿರ್ಧರಿಸುವವರೆಗೂ 'ಡಮ್ಮಿ ಅಭ್ಯರ್ಥಿ'ಯಾಗಿ ಕಾರ್ಯನಿರ್ವಹಿಸುವುದು ಅವರ ಪಾತ್ರವಾಗಿದೆ ಎಂದು ದಿಗ್ವಿಜಯ ಸಿಂಗ್ ಅವರಿಗೆ ತಿಳಿದಿತ್ತು ಎಂದು ಮೂಲಗಳು ವಿವರಿಸಿವೆ.
ಇದನ್ನೂ ಓದಿ: ಸಿನಿಮಾರಂಗದಲ್ಲಿ ಹೆಸರು ಮಾಡ್ಬೇಕು ಅಂತಾ ಬಂದ : ಪಿಜಿ ಬಾತ್ ರೂಮಲ್ಲಿ ಶವವಾದ.!
ಆರಂಭದಿಂದಲೂ ಕೂಡ ಅಶೋಕ್ ಗೆಹಲೋಟ್ ಅವರಿಗೆ ಸ್ಪರ್ಧಿಸುವಂತೆ ಒತ್ತಾಯಿಸಲಾಗಿತ್ತು, ಆದರೆ ಒಂದು ವೇಳೆ ಅವರು ಪಕ್ಷದ ಉನ್ನತ ಪದವಿಯನ್ನು ಅಲಂಕರಿಸಿದಲ್ಲಿ ಅವರು ಮುಖ್ಯಮಂತ್ರಿ ಸ್ಥಾನವನ್ನು ತ್ಯಜಿಸಬೇಕಾಗುತ್ತದೆ ಎಂದು ಅವರಿಗೆ ತಿಳಿಸಲಾಗಿತ್ತು. ಹೀಗಾಗಿ ಅವರು ಕೊನೆ ಹಂತದಲ್ಲಿ ಅಧ್ಯಕ್ಷ ಹುದ್ದೆಗೆ ಸ್ಪರ್ಧಿಸಲು ನಿರಾಕರಿಸಿದರು. 2018 ರಲ್ಲಿ ಪಕ್ಷ ಅಧಿಕಾರಕ್ಕೆ ಬಂದಾಗಿನಿಂದಲೂ ಗೆಹಲೋಟ್ ಸರ್ಕಾರದ ನೇತೃತ್ವವನ್ನು ವಹಿಸಿರುವುದಲ್ಲದೆ ಪಕ್ಷವನ್ನು ಸಹ ಮುನ್ನಡೆಸುತ್ತಿದ್ದಾರೆ, ಹಾಗಾಗಿ ಮುಖ್ಯಮಂತ್ರಿ ಹುದ್ದೆ ಮೇಲೆ ಕಣ್ಣಿಟ್ಟಿರುವ ಸಚಿನ್ ಪೈಲೆಟ್ ಗೆ ತೀವ್ರ ಅಸಮಾಧಾನ ತಂದಿದೆ.
ಇದಕ್ಕೆಲ್ಲಾ ಪರಿಹಾರ ನೀಡುವ ನಿಟ್ಟಿನಲ್ಲಿ ಗಾಂಧಿ ಕುಟುಂಬವು ಗೆಹಲೋಟ್ ಅವರಿಗೆ ಕಾಂಗ್ರೆಸ್ ಪಕ್ಷದ ಹುದ್ದೆಯನ್ನು ನೀಡುವುದರ ಜೊತೆಗೆ ಸಚಿನ್ ಪೈಲೆಟ್ ಗೆ ರಾಜಸ್ಥಾನದ ಸಿಎಂ ಪಟ್ಟದಲ್ಲಿ ಅಲಂಕರಿಸುವ ಮೂಲಕ ಒಂದೇ ಕಲ್ಲಿಗೆ ಎರಡು ಹಕ್ಕಿಯನ್ನು ಹೊಡೆಯುವ ಉದ್ದೇಶ ಕಾಂಗ್ರೆಸ್ ಪಕ್ಷದ್ದಾಗಿತ್ತು. ಆದರೆ ಇದನ್ನು ಚೆನ್ನಾಗಿ ಅರಿತಿದ್ದ ಅಶೋಕ್ ಗೆಹಲೋಟ್ ಏನೇ ಆಗಲಿ ಸಚಿನ್ ಪೈಲೆಟ್ ಮುಖ್ಯಮಂತ್ರಿಯಾಗ ಕೂಡದು ಎನ್ನುವ ನಿಲುವಿನಲ್ಲಿದ್ದರು.ಈಗ ಅಶೋಕ್ ಗೆಹಲೋಟ್ ಬೆಂಬಲಿಗರು ಬಂಡಾಯ ಏಳುವ ಮೂಲಕ ಗಾಂಧಿ ಕುಟುಂಬದ ಲೆಕ್ಕಾಚಾರಕ್ಕೆ ತಣ್ಣೀರೆರಚಿದ್ದಾರೆ.
The G-23 leaders are the main proposers for #MallikarjunKharge along with Rajasthan Chief Minister #AshokGehlot for the #Congress presidential poll.#CongressPresidentPolls @INCIndia @kharge pic.twitter.com/h3qgdVTdhK
— IANS (@ians_india) September 30, 2022
ಇದೆ ವೇಳೆ ಅಶೋಕ್ ಗೆಹಲೋಟ್ ಈಗ ಮಲ್ಲಿಕಾರ್ಜುನ್ ಖರ್ಗೆ ಅವರಿಗೆ ಬೆಂಬಲ ನೀಡುವುದಾಗಿ ಹೇಳಿದ್ದಾರೆ.ಅಷ್ಟೇ ಅಲ್ಲದೆ ನಿನ್ನೆ ಸಂಜೆ ಅಶೋಕ್ ಗೆಹ್ಲೋಟ್ ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಿ ಪಶ್ಚಾತ್ತಾಪಪಟ್ಟಿದ್ದಾರೆ.ರಾಜಸ್ಥಾನದ ಕಾಂಗ್ರೆಸ್ ಶಾಸಕರ ಅಶಿಸ್ತಿನ ಬಗ್ಗೆ ನೈತಿಕ ಹೊಣೆ ಹೊತ್ತು ಅವರಲ್ಲಿ ಕ್ಷಮೆಯಾಚಿಸಿದ್ದೇನೆ ಎಂದ ಅವರು, ತಾವು ಅಧ್ಯಕ್ಷರಾಗಿ ಸ್ಪರ್ಧಿಸುವುದಿಲ್ಲ, ಮುಖ್ಯಮಂತ್ರಿಯಾಗಿ ಮುಂದುವರಿಯುವ ಬಗ್ಗೆ ಸೋನಿಯಾ ಗಾಂಧಿ ಮಾತ್ರ ನಿರ್ಧರಿಸುತ್ತಾರೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ನಾಗರ ಹಾವಿಗೆ ಮುತ್ತಿಕ್ಕಲು ಹೋಗಿ ಕಚ್ಚಿಸಿಕೊಂಡ ಉರಗ ರಕ್ಷಕ..!
ಮೂಲಗಳ ಪ್ರಕಾರ ಗಾಂಧಿ ಕುಟುಂಬದ ಬೆಂಬಲವಿರುವುದರಿಂದ ಮಲ್ಲಿಕಾರ್ಜುನ್ ಖರ್ಗೆ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ.ಆದರೆ ಇದು ಪಕ್ಷದ ಮಟ್ಟಿಗೆ ಯಾವ ರೀತಿ ಲಾಭವನ್ನು ತರುತ್ತದೆ ಎನ್ನುವುದಕ್ಕೆ ಕಾಲವೇ ಉತ್ತರ ಹೇಳಲಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.