ಜಮ್ಮು-ಕಾಶ್ಮೀರದಲ್ಲಿ ಹತ್ಯೆಯಾದ ಭಯೋತ್ಪಾದಕರಲ್ಲಿ ಪಾಕಿಸ್ತಾನದಿಂದ ಬಂದವರೇ ಹೆಚ್ಚು!

ಭಯೋತ್ಪಾದನೆ ಭಾರತದ ಸಮಸ್ಯೆ ಮಾತ್ರವಲ್ಲ, ಅಂತರಾಷ್ಟ್ರೀಯ ಸಮಸ್ಯೆಯಾಗಿದೆ. ಭಯೋತ್ಪಾದನೆ ವಿರುದ್ಧ ಹೋರಾಡಲು ನಾವು ಭಾರತಕ್ಕೆ ಬೆಂಬಲಿಸುತ್ತೇವೆ. ಭಯೋತ್ಪಾದನೆ ಫ್ರಾನ್ಸ್ ಮತ್ತು ಯುರೋಪಿನ ಸಮಸ್ಯೆಯಾಗಿದೆ. ಹಾಗಾಗಿ ಕಾಶ್ಮೀರವು ಮತ್ತೊಂದು ಅಫ್ಘಾನಿಸ್ತಾನವಾಗುವುದನ್ನು ನಾವು ಬಯಸುವುದಿಲ್ಲ ಎಂದು ಯುರೋಪಿಯನ್ ಯೂನಿಯನ್ ನಿಯೋಗ ಹೇಳಿದೆ.

Last Updated : Oct 30, 2019, 03:54 PM IST
ಜಮ್ಮು-ಕಾಶ್ಮೀರದಲ್ಲಿ ಹತ್ಯೆಯಾದ ಭಯೋತ್ಪಾದಕರಲ್ಲಿ ಪಾಕಿಸ್ತಾನದಿಂದ ಬಂದವರೇ ಹೆಚ್ಚು! title=

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಕೊಲ್ಲಲ್ಪಟ್ಟ ಭಯೋತ್ಪಾದಕರಲ್ಲಿ ಹೆಚ್ಚಿನವರು ಪಾಕಿಸ್ತಾನದಿಂದ ಬಂದವರು ಎಂದು ಯುರೋಪಿಯನ್ ಯೂನಿಯನ್ (ಇಯು) ನಿಯೋಗ ಹೇಳಿಕೆ ನಿಡುವ ಮೂಲಕ ಪಾಕಿಸ್ತಾನಕ್ಕೆ ತೀವ್ರ ಮುಜುಗರವುಂಟುಮಾಡಿದೆ.

ಭಯೋತ್ಪಾದನೆ ಜಾಗತಿಕ ಸಮಸ್ಯೆಯಾಗಿದ್ದು, ಯುರೋಪಿಯನ್ ಯೂನಿಯನ್ ಈ ವಿಷಯದ ಬಗ್ಗೆ ಕಾಳಜಿ ವಹಿಸಿದೆ ಎಂದು ಜಮ್ಮು-ಕಾಶ್ಮೀರ ಕೇಂದ್ರಾಡಳಿತ ಪ್ರದೇಶಕ್ಕೆ ಭೇಟಿ ನೀಡಿದ 23 ಯುರೋಪಿಯನ್ ಯೂನಿಯನ್ ಸಂಸದರ ತಂಡ ಬುಧವಾರ ಶ್ರೀನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು. 

ಭಯೋತ್ಪಾದನೆ ಆಂತರಿಕ ಸಮಸ್ಯೆಯಲ್ಲ ಎಂದ ಯುರೋಪಿಯನ್ ಯೂನಿಯನ್ ಸಂಸದರೊಬ್ಬರು, "ಭಯೋತ್ಪಾದನೆ ಭಾರತದ ಸಮಸ್ಯೆ ಮಾತ್ರವಲ್ಲ, ಅಂತರಾಷ್ಟ್ರೀಯ ಸಮಸ್ಯೆಯಾಗಿದೆ. ಭಯೋತ್ಪಾದನೆ ವಿರುದ್ಧ ಹೋರಾಡಲು ನಾವು ಭಾರತಕ್ಕೆ ಬೆಂಬಲಿಸುತ್ತೇವೆ. ಭಯೋತ್ಪಾದನೆ ಫ್ರಾನ್ಸ್ ಮತ್ತು ಯುರೋಪಿನ ಸಮಸ್ಯೆಯಾಗಿದೆ. ಹಾಗಾಗಿ ಕಾಶ್ಮೀರವು ಮತ್ತೊಂದು ಅಫ್ಘಾನಿಸ್ತಾನವಾಗುವುದನ್ನು ನಾವು ಬಯಸುವುದಿಲ್ಲ" ಎಂದು ಹೇಳಿದರು. 

"ಈ ಪ್ರದೇಶದ ಜನರು ಶಾಂತಿ ಮತ್ತು ಅಭಿವೃದ್ಧಿಯನ್ನು ಬಯಸುತ್ತಾರೆ ಎಂದು ಅವರು ಜಮ್ಮು-ಕಾಶ್ಮೀರದಲ್ಲಿ ಅಭಿವೃದ್ಧಿಯ ವಾತಾವರಣವಿದೆ. ಜನರು ಸರ್ಕಾರದಿಂದ ಅನೇಕ ನಿರೀಕ್ಷೆಗಳನ್ನು ಹೊಂದಿದ್ದಾರೆ. ನಮಗೆ ಭಾರತೀಯ ರಾಜಕೀಯದಲ್ಲಿ ಆಸಕ್ತಿ ಇಲ್ಲ. ಸ್ಥಳೀಯ ಜನರನ್ನು ಭೇಟಿ ಮಾಡುವುದು ನಮ್ಮ ಉದ್ದೇಶವಾಗಿತ್ತು. ಇದು ಕಾಶ್ಮೀರದಲ್ಲಿ ಉತ್ತಮ ಅನುಭವವಾಗಿತ್ತು. ಇಲ್ಲಿ ಸರಿಯಾದ ದಿಕ್ಕಿನಲ್ಲಿ ಕೆಲಸ ನಡೆಯುತ್ತಿದೆ. ಕಾಶ್ಮೀರದ ಜನರು ಶಾಂತಿ ಮತ್ತು ಅಭಿವೃದ್ಧಿಯನ್ನು ಬಯಸುತ್ತಾರೆ. ಅವರಿಗೆ ಶಾಲೆ ಮತ್ತು ಆಸ್ಪತ್ರೆಗಳು ಬೇಕು. ಉತ್ತಮ ಪರಿಹಾರವನ್ನು ಕಂಡುಹಿಡಿಯಲು ನಮಗೆ ಭಾರತದ ಬೆಂಬಲ ಬೇಕು" ಎಂದು ಇಯು ಸಂಸದರು ಹೇಳಿದರು.

ಇದೇ ವೇಳೆ, ಜಮ್ಮು ಮತ್ತು ಕಾಶ್ಮೀರ ದೇಶದ ಆಂತರಿಕ ವಿಷಯ ಎಂಬ ಭಾರತದ ನಿಲುವು ನಿಯೋಗದಿಂದ ನಿಸ್ಸಂದಿಗ್ಧವಾದ ಅನುಮೋದನೆಯನ್ನು ಪಡೆಯಿತು. ಜಮ್ಮು ಮತ್ತು ಕಾಶ್ಮೀರದಿಂದ 370 ನೇ ವಿಧಿಯನ್ನು ರದ್ದುಪಡಿಸುವುದು ದೇಶದ ಆಂತರಿಕ ನಿರ್ಧಾರ ಎಂದು ಘೋಷಿಸುವಾಗ ಸಂಸದರು ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಭಾರತಕ್ಕೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದರು.
 

Trending News