ಮಹಾರಾಷ್ಟ್ರದಲ್ಲಿ ಬಿಜೆಪಿ-ಶಿವಸೇನಾ ನೇತೃತ್ವದ ಮಹಾಯುತಿ ಸರ್ಕಾರ - ಬಿಜೆಪಿ ಸ್ಪಷ್ಟನೆ

ಶಿವಸೇನಾ ಈಗ ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಗೆ ಅಂತಿಮ ಗಡುವು ನೀಡಿರುವ ಬೆನ್ನಲ್ಲೇ ಬಿಜೆಪಿ ಗುರುವಾರದಂದು ರಾಜ್ಯಪಾಲರನ್ನು ಭೇಟಿ ಮಾಡುವುದಾಗಿ ತಿಳಿಸಿದೆ.

Last Updated : Nov 6, 2019, 07:13 PM IST
ಮಹಾರಾಷ್ಟ್ರದಲ್ಲಿ ಬಿಜೆಪಿ-ಶಿವಸೇನಾ ನೇತೃತ್ವದ ಮಹಾಯುತಿ ಸರ್ಕಾರ - ಬಿಜೆಪಿ ಸ್ಪಷ್ಟನೆ  title=
file photo

ನವದೆಹಲಿ: ಶಿವಸೇನಾ ಈಗ ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಗೆ ಅಂತಿಮ ಗಡುವು ನೀಡಿರುವ ಬೆನ್ನಲ್ಲೇ ಬಿಜೆಪಿ ಗುರುವಾರದಂದು ರಾಜ್ಯಪಾಲರನ್ನು ಭೇಟಿ ಮಾಡುವುದಾಗಿ ತಿಳಿಸಿದೆ.

ಈ ವಿಚಾರವಾಗಿ ಮಾತನಾಡಿರುವ ಬಿಜೆಪಿ ನಾಯಕರು ಯಾವುದೇ ಸಮಯದಲ್ಲಿ ಒಳ್ಳೆಯ ಸುದ್ದಿ ಬರಬಹುದು ಎಂದು ಹೇಳಿದ್ದಾರೆ. ಇಂದು ಆರು ಶಿವಸೇನೆ ಸಚಿವರು ಮತ್ತು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಮಳೆಯ ನಂತರ ರಾಜ್ಯದಲ್ಲಿ ಕೃಷಿ ಬಿಕ್ಕಟ್ಟು ಕುರಿತು ಕರೆದ ಸಭೆಯಲ್ಲಿ ಭಾಗವಹಿಸಿದ್ದರು. ಈ ಸಭೆಯಲ್ಲಿ ಸರ್ಕಾರ ರಚನೆಗೆ ಸಂಬಂಧಪಟ್ಟ ಸೂತ್ರವನ್ನು ಚರ್ಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

'ನೀವು ಎಷ್ಟೇ ಪ್ರಯತ್ನಿಸಿದರೂ ನೀರನ್ನು ಬೇರ್ಪಡಿಸಲು ಸಾಧ್ಯವಿಲ್ಲ. ಶಿವಸೇನೆ ಮತ್ತು ಬಿಜೆಪಿ ಒಟ್ಟಾಗಿವೆ...ನಾವು ಸುದ್ದಿಗಾಗಿ ಕಾಯಬೇಕು, ಒಳ್ಳೆಯ ಸುದ್ದಿ ಯಾವಾಗ ಬೇಕಾದರೂ ಬರಬಹುದು' ಎಂದು ಬಿಜೆಪಿ ಮುಖಂಡ ಸುಧೀರ್ ಮುಂಗಂತಿವಾರ್ ಸಭೆಯ ನಂತರ ಹೇಳಿದರು. ಇನ್ನು ಮುಂದುವರೆದು' ಯಾರು ಏನೇ ಹೇಳಿದರೂ ಅಥವಾ ಯೋಚಿಸಿದರೂ ಮಹಾರಾಷ್ಟ್ರದಲ್ಲಿ ಮಹಾಯುತಿ ಮೈತ್ರಿ ಸರ್ಕಾರ ರಚನೆಯಾಗಲಿದೆ' ಎಂದು ಬಿಜೆಪಿ ನಾಯಕ ಮುಂಗತಿವಾರ್ ಹೇಳಿದರು.

ಇದರ ಬೆನ್ನಲ್ಲೇ ಬಿಜೆಪಿ ವಕ್ತಾರ ಆಸಿಫ್ ಭಮ್ಲಾ ಅವರು ಫಡ್ನವೀಸ್ ಅವರು ನಾಳೆ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯರಿ ಅವರನ್ನು ಭೇಟಿ ಮಾಡಲಿದ್ದಾರೆ ಎಂದು ಹೇಳಿದ್ದಾರೆ. 

Trending News