ಮಹಾರಾಷ್ಟ್ರದಲ್ಲಿ ಇಂದಿನಿಂದ ಹೋಟೆಲ್, ಲಾಡ್ಜ್, ಗೆಸ್ಟ್ ಹೌಸ್​ಗಳ ಕಾರ್ಯಾಚರಣೆ ಆರಂಭ

ಇಂದಿನಿಂದ ಹೋಟೆಲ್, ಅತಿಥಿ ಗೃಹ ಮತ್ತು ವಸತಿಗೃಹಗಳನ್ನು ತೆರೆಯಲು ಮಹಾರಾಷ್ಟ್ರ ಸರ್ಕಾರ ಅನುಮತಿ ನೀಡಿದೆ.

Last Updated : Jul 8, 2020, 02:55 PM IST
ಮಹಾರಾಷ್ಟ್ರದಲ್ಲಿ ಇಂದಿನಿಂದ ಹೋಟೆಲ್, ಲಾಡ್ಜ್, ಗೆಸ್ಟ್ ಹೌಸ್​ಗಳ ಕಾರ್ಯಾಚರಣೆ ಆರಂಭ title=

ಮುಂಬೈ: ಲಾಕ್‌ಡೌನ್‌ ಹಿನ್ನೆಲೆಯಲ್ಲಿ ವಿಧಿಸಲಾದ ನಿರ್ಬಂಧಗಳನ್ನು ಸಡಿಲಗೊಳಿಸಿ ಕಠಿಣ ಷರತ್ತುಗಳೊಂದಿಗೆ ಹೋಟೆಲ್, ಅತಿಥಿಗೃಹ ಮತ್ತು ವಸತಿಗೃಹವನ್ನು ಮತ್ತೆ ತೆರೆಯಲು ಮಹಾರಾಷ್ಟ್ರ (Maharashtra) ಸರ್ಕಾರ ಅನುಮತಿ ನೀಡಿದೆ. ಆದರೆ ಈ ಸಮಯದಲ್ಲಿ ಹೋಟೆಲ್‌ನಲ್ಲಿ ಉಳಿಯಲು ಸರ್ಕಾರ ಯಾವುದೇ ಅನುಮತಿ ನೀಡಿಲ್ಲ. ಕೆಲವು ದಿನಗಳ ಹಿಂದೆ ನಡೆದ ವಿಡಿಯೋ ಕಾನ್ಫರೆನ್ಸಿಂಗ್‌ನಲ್ಲಿ ಶೀಘ್ರದಲ್ಲೇ ಹೋಟೆಲ್ ಪ್ರಾರಂಭಿಸುವುದಾಗಿ ಸರ್ಕಾರ ವ್ಯಾಪಾರಿಗಳಿಗೆ ಭರವಸೆ ನೀಡಿತ್ತು. ಜುಲೈ 8 ರಿಂದ ಅವುಗಳನ್ನು ತೆರೆಯಲು ಅನುಮತಿ ನೀಡಲಾಗಿದೆ.

ಅದಾಗ್ಯೂ ರೆಸ್ಟೋರೆಂಟ್ ತೆರೆಯಲು ಇನ್ನೂ ಯಾವುದೇ ಆದೇಶ ಸರ್ಕಾರದಿಂದ ಹೊರಬಿದ್ದಿಲ್ಲ. ಸುತ್ತೋಲೆಯ ಪ್ರಕಾರ ಕಂಟೈನ್‌ಮೆಂಟ್ ವಲಯದ ಹೊರಗಿನ ಹೋಟೆಲ್‌ಗಳು, ಅತಿಥಿ ಗೃಹಗಳು ಮತ್ತು ವಸತಿಗೃಹಗಳನ್ನು ಜುಲೈ 8 ರಿಂದ ತೆರೆಯಬಹುದಾಗಿದೆ. ಆದರೆ ಈ ಸಮಯದಲ್ಲಿ ಕೆಲವು ಕಠಿಣ ಷರತ್ತುಗಳನ್ನು ಪಾಲಿಸುವುದು ಕಡ್ಡಾಯವಾಗಿರುತ್ತದೆ. 

ಗಣೇಶ ಹಬ್ಬದ ಮೇಲೆ ಕರೋನಾ ಪ್ರಭಾವ: ಪ್ರತಿಮೆ ಉದ್ದದ ಬಗ್ಗೆ ಸಿಎಂ ಉದ್ಧವ್ ಠಾಕ್ರೆ ಹೇಳಿದ್ದೇನು?

ಯಾವ ಷರತ್ತುಗಳನ್ನು ಅನುಸರಿಸಬೇಕು ಎಂದು ತಿಳಿಯಿರಿ ...

- ಕೇವಲ 33 ಪ್ರತಿಶತದಷ್ಟು ಜನರಿಗೆ ಮಾತ್ರ ಉಳಿಯಲು ಅವಕಾಶವಿರುತ್ತದೆ.
- ಎಲ್ಲಾ ಗ್ರಾಹಕರಿಗೆ ಥರ್ಮಲ್ ಸ್ಕ್ರೀನಿಂಗ್ ಮತ್ತು ಸ್ಯಾನಿಟೈಜರ್ ವ್ಯವಸ್ಥೆಯನ್ನು ಕಡ್ಡಾಯಗೊಳಿಸಬೇಕು.
- ಕರೋನಾದ ಲಕ್ಷಣಗಳನ್ನು ಹೊಂದಿರುವ ಗ್ರಾಹಕರನ್ನು ಹೋಟೆಲ್ ಅಥವಾ ಲಾಡ್ಜ್ ಒಳಗೆ ಅನುಮತಿಸಲಾಗುವುದಿಲ್ಲ.
- ಅತಿಥಿಗಳು ಮತ್ತು ಉದ್ಯೋಗಿ ಇಬ್ಬರೂ ಮಾಸ್ಕ್ ಧರಿಸುವುದು ಕಡ್ಡಾಯ.
-ಎಸಿ ಅನ್ನು 24 ರಿಂದ 30 ಡಿಗ್ರಿ ತಾಪಮಾನದ ನಡುವೆ ಬಳಸಬೇಕು.
- ಹೆಚ್ಚಿನ ಡಿಜಿಟಲ್ ಪಾವತಿಗಳನ್ನು ಮಾಡಲು ಸರ್ಕಾರ ಸಲಹೆ ನೀಡಿದೆ.
-ಕುಳಿತುಕೊಳ್ಳುವ ಸ್ಥಳದಲ್ಲಿ ಸಾಮಾಜಿಕ ದೂರವನ್ನು ಅನುಸರಿಸಬೇಕಾಗಿದೆ.
ಇದರೊಂದಿಗೆ ಅತಿಥಿಗಳಿಗೆ ಆರೋಗ್ಯ ಸೇತು ಆ್ಯಪ್ ಕೂಡ ಕಡ್ಡಾಯವಾಗಿರುತ್ತದೆ.

Trending News