Eknath Shinde : ಸಚಿವ ಸಂಪುಟ ವಿಸ್ತರಣೆ : ಅಧಿಕಾರಿಗಳಿಗೆ ‘ಸೂಪರ್ ಪವರ್’ ನೀಡಿದ ಸಿಎಂ ಶಿಂಧೆ

ಅಜಿತ್ ಪವಾರ್, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಬಾಳಾಸಾಹೇಬ್ ಥೋರಟ್ ಮತ್ತು ಕಾಂಗ್ರೆಸ್ ವಕ್ತಾರ ಅತುಲ್ ಲೋಂಧೆ ಅವರು ಸಿಎಂ ಶಿಂಧೆ ನಿರ್ಧಾರವನ್ನು ಪ್ರಜಾಪ್ರಭುತ್ವ ವಿರೋಧಿ ಎಂದು ಹೇಳಿದ್ದಾರೆ.

Written by - Channabasava A Kashinakunti | Last Updated : Aug 7, 2022, 05:45 PM IST
  • ಮಹಾರಾಷ್ಟ್ರದಲ್ಲಿ ಸಚಿವ ಸಂಪುಟ ವಿಸ್ತರಣೆ ಯಾವಾಗ?
  • ದೆಹಲಿಯಲ್ಲಿ ಶಿಂಧೆ ಮತ್ತು ಫಡ್ನವಿಸ್
  • ಶಿಂಧೆಯನ್ನು ಗುರಿಯಾಗಿಸಿಕೊಂಡ ಅಜಿತ್ ಪವಾರ್
Eknath Shinde : ಸಚಿವ ಸಂಪುಟ ವಿಸ್ತರಣೆ : ಅಧಿಕಾರಿಗಳಿಗೆ ‘ಸೂಪರ್ ಪವರ್’ ನೀಡಿದ ಸಿಎಂ ಶಿಂಧೆ title=

Maharashtra Cabinet Expansion : ಮಹಾರಾಷ್ಟ್ರದಲ್ಲಿ ಏಕನಾಥ್ ಶಿಂಧೆ ಅಧಿಕಾರ ಸ್ವೀಕರಿಸಿದ ನಂತರ ಸಚಿವ ಸಂಪುಟ ವಿಸ್ತರಣೆಯ ಚರ್ಚೆಗಳು ಭರದಿಂದ ಸಾಗಿವೆ. ನಿಗದಿತ ಸಚಿವ ಸಂಪುಟ ವಿಸ್ತರಣೆ ವಿಳಂಬದ ನಡುವೆಯೇ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಅಧಿಕಾರಶಾಹಿಗಳಿಗೆ ಅರೆ ನ್ಯಾಯಾಂಗ ಅಧಿಕಾರವನ್ನು ನೀಡಿದ್ದಾರೆ. ಸಿಎಂ ಈ ನಡೆಗೆ ಪ್ರತಿಪಕ್ಷಗಳು ಅಸಮಾಧಾನ ವ್ಯಕ್ತಪಡಿಸಿವೆ. ಅಜಿತ್ ಪವಾರ್, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಬಾಳಾಸಾಹೇಬ್ ಥೋರಟ್ ಮತ್ತು ಕಾಂಗ್ರೆಸ್ ವಕ್ತಾರ ಅತುಲ್ ಲೋಂಧೆ ಅವರು ಸಿಎಂ ಶಿಂಧೆ ನಿರ್ಧಾರವನ್ನು ಪ್ರಜಾಪ್ರಭುತ್ವ ವಿರೋಧಿ ಎಂದು ಹೇಳಿದ್ದಾರೆ.

ಮಹಾರಾಷ್ಟ್ರದಲ್ಲಿ ಸಚಿವ ಸಂಪುಟ ವಿಸ್ತರಣೆ ಯಾವಾಗ?

ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಭಾನುವಾರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಹೇಳಿಕೆಯನ್ನು ಪುನರುಚ್ಚರಿಸಿದರು ಮತ್ತು ಶೀಘ್ರದಲ್ಲೇ ಸಂಪುಟ ವಿಸ್ತರಣೆ ನಡೆಯಲಿದೆ ಎಂದು ಹೇಳಿದರು. ಸಚಿವ ಸಂಪುಟ ವಿಸ್ತರಣೆ ಕುರಿತು ಅವರು ಯಾವುದೇ ದಿನಾಂಕವನ್ನು ನೀಡಿಲ್ಲ. ಭಾನುವಾರದ ಮೊದಲು ಸಚಿವ ಸಂಪುಟ ವಿಸ್ತರಣೆ ನಡೆಯಲಿದೆ ಎಂದು ಶಿಂಧೆ ಬಣದ ನಾಯಕ ದೀಪಕ್ ಕೇಸರ್ಕರ್ ಹೇಳಿದ್ದರು. ಬಿಜೆಪಿ ನಾಯಕ ಸುಧೀರ್ ಮುಂಗಂತಿವಾರ್ ಅವರು ಆಗಸ್ಟ್ 15 ರ ಮೊದಲು ಸಂಪುಟ ವಿಸ್ತರಣೆಯಾಗಲಿದ್ದು, ಆ ಮೂಲಕ ಆಯಾ ಜಿಲ್ಲೆಗಳಲ್ಲಿ ಆಯಾ ಸಚಿವರು ರಾಷ್ಟ್ರಧ್ವಜಾರೋಹಣ ಮಾಡಬಹುದಾಗಿದೆ ಎಂದು ಗುರುವಾರ ಘೋಷಿಸಿದ್ದಾರೆ.

ಇದನ್ನೂ ಓದಿ : Shiv Sena Crisis : ರಾಜಕೀಯಕ್ಕೆ ಎಂಟ್ರಿ ನೀಡಲು ರೆಡಿಯಾದ ಉದ್ಧವ್ ಠಾಕ್ರೆ ಕಿರಿಯ ಪುತ್ರ!

ದೆಹಲಿಯಲ್ಲಿ ಶಿಂಧೆ ಮತ್ತು ಫಡ್ನವಿಸ್

ಏಕನಾಥ್ ಶಿಂಧೆ ಮತ್ತು ಫಡ್ನವಿಸ್ ಎರಡು ದಿನಗಳ ದೆಹಲಿ ಪ್ರವಾಸದಲ್ಲಿದ್ದಾರೆ. ಶನಿವಾರ ನಡೆದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಭೆಯಲ್ಲಿ ಇಬ್ಬರೂ ನಾಯಕರು ಭಾಗವಹಿಸಿದ್ದರು. ಶಿಂಧೆ ಭಾನುವಾರ ನೀತಿ ಆಯೋಗದ ಆಡಳಿತ ಮಂಡಳಿ ಸಭೆಯಲ್ಲಿ ಭಾಗವಹಿಸಿದ್ದರು.

ಶಿಂಧೆಯನ್ನು ಗುರಿಯಾಗಿಸಿಕೊಂಡ ಅಜಿತ್ ಪವಾರ್ 

ಏಕನಾಥ್ ಶಿಂಧೆ ಅವರ ನಿರ್ಧಾರದ ವಿರುದ್ಧ ಅಜಿತ್ ಪವಾರ್ ಕಿಡಿಕಾರಿದ್ದಾರೆ, ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ ಒಂದು ತಿಂಗಳ ನಂತರ ಶಿಂಧೆ ಅವರು ತಮ್ಮ ಸಂಪುಟವನ್ನು ವಿಸ್ತರಿಸಲು ವಿಫಲರಾಗಿದ್ದಾರೆ. ಅಧಿಕಾರಶಾಹಿಗಳ ಬದಲಿಗೆ ಎಲ್ಲ ಅಧಿಕಾರಗಳನ್ನು ಮುಖ್ಯ ಕಾರ್ಯದರ್ಶಿಗೆ ವಹಿಸಬೇಕಿತ್ತು. ನಾವು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿದ್ದೇವೆ. ಶಾಸಕರಿಗೆ ಯಾವುದೇ ಅಧಿಕಾರವಿಲ್ಲ ಮತ್ತು ಯಾವುದೇ ಕ್ಯಾಬಿನೆಟ್ ಸದಸ್ಯರೂ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ಅಧಿಕಾರಶಾಹಿಗಳು ಚುನಾಯಿತ ಪ್ರತಿನಿಧಿಗಳಿಗಿಂತ ಹೆಚ್ಚು ಶಕ್ತಿಶಾಲಿಯಾಗಿದ್ದಾರೆ ಎಂದರು.

ಪ್ರತಿದಾಳಿ ನಡೆಸಿದ ಏಕನಾಥ್ ಶಿಂಧೆ 

ಪ್ರತಿಪಕ್ಷಗಳ ಟೀಕೆಗಳ ನಡುವೆ, ಅರೆ ನ್ಯಾಯಾಂಗ ವಿಷಯಗಳನ್ನು ಹೊರತುಪಡಿಸಿ ಕಾರ್ಯದರ್ಶಿಗಳಿಗೆ ಯಾವುದೇ ಸಚಿವ ಅಧಿಕಾರವನ್ನು ನೀಡಲಾಗಿಲ್ಲ ಎಂದು ಶಿಂಧೆ ಹೇಳಿದರು. ಮೊದಲಿನಂತೆ ಎಲ್ಲಾ ಅಧಿಕಾರಗಳು ಸಚಿವರು, ಮುಖ್ಯಮಂತ್ರಿಗಳು ಮತ್ತು ಮಂತ್ರಿ ಪರಿಷತ್ತಿಗೆ ನೀಡಲಾಗಿದೆ. ಎಲ್ಲಾ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯನ್ನು ಕಾರ್ಯದರ್ಶಿಗಳಿಗೆ ವಹಿಸಲಾಗಿದೆ ಎಂದು ಹೇಳುವುದು ಸಂಪೂರ್ಣ ತಪ್ಪು. ಆಗಸ್ಟ್ 4ರ ಆದೇಶದ ಪ್ರಕಾರ ಸಚಿವರ ಕೆಲವು ಅಧಿಕಾರಗಳನ್ನು ಕಾರ್ಯದರ್ಶಿಗಳಿಗೆ ನೀಡಲಾಗಿದೆ, ಆದರೆ ಇವುಗಳು ಅರೆ ನ್ಯಾಯಾಂಗ ವಿಷಯಗಳ ಸಲ್ಲಿಕೆ ಮತ್ತು ವಿಚಾರಣೆಗೆ ಮಾತ್ರ ಎಂದು ಅವರು ಹೇಳಿದರು.

ಇದನ್ನೂ ಓದಿ : ಇಸ್ರೋದ SSLV 'Azadi ಉಪಗ್ರಹ' ಉಡಾವಣೆ ಯಶಸ್ವಿ: ಆದರೆ ಎದುರಾಗಿದೆ ಸಣ್ಣ ಸಮಸ್ಯೆ!

ಶೀಘ್ರದಲ್ಲೇ ಸಚಿವ ಸಂಪುಟ ವಿಸ್ತರಣೆ 

ಶಿಂಧೆ ಮತ್ತು ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಪ್ರಮಾಣ ವಚನ ಸ್ವೀಕರಿಸಿ 35 ದಿನಗಳು ಕಳೆದರೂ ಇನ್ನೂ ಸಂಪುಟ ವಿಸ್ತರಣೆ ಆಗಿಲ್ಲ. ಆದಾಗ್ಯೂ, ಮೂಲಗಳ ಪ್ರಕಾರ, ಶಿಂಧೆ ಮತ್ತು ಫಡ್ನವಿಸ್ ಅವರು ಈಗಾಗಲೇ ರಾಜಧಾನಿಯಲ್ಲಿದ್ದಾರೆ ಮತ್ತು ಬಿಜೆಪಿಯ ಉನ್ನತ ನಾಯಕರೊಂದಿಗೆ ಸಂಪುಟ ವಿಸ್ತರಣೆ ಬಗ್ಗೆ ಚರ್ಚಿಸಬಹುದು. ಸಚಿವರ ಪಟ್ಟಿ ಸಿದ್ಧವಾಗಿದ್ದು, ಖಾತೆ ಹಂಚಿಕೆಗೆ ಬಿಜೆಪಿ ಹೈಕಮಾಂಡ್ ಒಪ್ಪಿಗೆಗೆ ಕಾಯಲಾಗುತ್ತಿದೆ ಎಂದು ಹೇಳಲಾಗುತ್ತಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News