ಉಮರಿಯಾ (ಮಧ್ಯಪ್ರದೇಶ): ಬಾಂಧವ್‌ಗರ್ ರಾಷ್ಟ್ರೀಯ ಉದ್ಯಾನವನದ ಪಕ್ಕದ ಕಾಡಿನಲ್ಲಿ ಹುಲಿ ಮರಿ ಶವವಾಗಿ ಪತ್ತೆಯಾಗಿದೆ ಎಂದು ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.
ಒಂದೂವರೆ ವರ್ಷದ ಮರಿಯ ಮೃತದೇಹ ಮಂಗಳವಾರ ಸಂಜೆ ಉಮರಿಯಾ ಜಿಲ್ಲೆಯ ಅಭಯಾರಣ್ಯದ ಪಕ್ಕದಲ್ಲಿರುವ ಪಹರಿಯಾ ಗ್ರಾಮದ ಬಳಿ ಸಿಕ್ಕಿದೆ ಎಂದು ಶಹಡೋಲ್ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಸಿಸಿಎಫ್) ಎ.ಕೆ.ಜೋಶಿ ತಿಳಿಸಿದ್ದಾರೆ.
ಈ ವರ್ಷ ಈ ಪ್ರದೇಶದಿಂದ ವರದಿಯಾದ ಮೂರನೇ ಹುಲಿ ಮರಿ ಸಾವು ಇದಾಗಿದೆ.
"ಹುಲಿಗಳ ನಡುವಿನ ಆಂತರಿಕ ಹೋರಾಟದಿಂದಾಗಿ ಈ ಸಾವು ಸಂಭವಿಸಿರಬಹುದು. ಮರಣೋತ್ತರ ಪರೀಕ್ಷೆಯನ್ನು ಬುಧವಾರ ನಡೆಸಲಾಯಿತು ಮತ್ತು ಅದೇ ದಿನ ಮೃತದೇಹವನ್ನು ವಿಲೇವಾರಿ ಮಾಡಲಾಗಿದೆ" ಎಂದು ಜೋಶಿ ಹೇಳಿದರು.
ಜುಲೈ 28 ರಂದು ಬಾಂಧವಗರ್ ಉದ್ಯಾನದ ಕಲ್ವಾ ಶ್ರೇಣಿಯಲ್ಲಿ ಹುಲಿ ಮತ್ತು ಹುಲಿಯ ಮರಿ ಶವವಾಗಿ ಪತ್ತೆಯಾಗಿತ್ತು.