86 ಲಕ್ಷ ಗ್ರಾಹಕರ ವಿದ್ಯುತ್ ಶುಲ್ಕವನ್ನು ಅರ್ಧಕ್ಕೆ ಇಳಿಕೆ ಮಾಡಲು ನಿರ್ಧರಿಸಿದ ಸರ್ಕಾರ

ಮಧ್ಯಪ್ರದೇಶದ ಸರ್ಕಾರ ತನ್ನ ವಿದ್ಯುತ್ ಗ್ರಾಹಕರಿಗೆ ಭಾರಿ ನೆಮ್ಮದಿಯ ಸುದ್ದಿಯೊಂದನ್ನು ಪ್ರಕಟಿಸಿದೆ. ಹೌದು, ರಾಜ್ಯದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್ ಹಿಂದುಳಿದ ವರ್ಗದ ಗ್ರಾಹಕರಿಗೆ ಭಾರಿ ರಿಯಾಯ್ತಿ ನೀಡುವುದಾಗಿ ಘೋಷಣೆ ಮಾಡಿದ್ದಾರೆ.

Last Updated : Jun 23, 2020, 07:21 PM IST
86 ಲಕ್ಷ ಗ್ರಾಹಕರ ವಿದ್ಯುತ್ ಶುಲ್ಕವನ್ನು ಅರ್ಧಕ್ಕೆ ಇಳಿಕೆ ಮಾಡಲು ನಿರ್ಧರಿಸಿದ ಸರ್ಕಾರ title=

ಸರ್ಕಾರದ ಘೋಷಣೆ
ಇದಕ್ಕೆ ಸಂಬಂಧಿಸಿದಂತೆ ಸಿಎಂ ಚೌಹಾನ್ ಇಂದು ಕೆಲವು ಗ್ರಾಹಕರೊಂದಿಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಸಂವಹನ ನಡೆಸಿದ್ದಾರೆ. ಈ ವೇಳೆ ಮಾರ್ಚ್ 2020 ರಿಂದ ಸಂಬಲ್ ಯೋಜನೆಯೊಂದಿಗೆ ಭಾಗಿಯಾಗಿರುವ  ಗ್ರಾಹಕರು ಮತ್ತು ಯಾರ ಬಿಲ್  ಏಪ್ರಿಲ್‌ನಲ್ಲಿ 100 ರೂ.ಗಳವರೆಗೆ ಬಂದಿವೆಯೋ, ಆ ಗ್ರಾಹಕರ ಮುಂದಿನ ಮೂರು ತಿಂಗಳುಗಳವರೆಗೆ ಮಾಸಿಕವಾಗಿ 100 ರೂ.ಬಿಲ್ ಬಂದರೆ ಅವರು ಕೇವಲ ರೂ.50ನ್ನು ಪಾವತಿಸಬೇಕಾಗಲಿದೆ ಎಂದು ಹೇಳಿದ್ದಾರೆ. ಸರ್ಕಾರದ ಈ ವ್ಯವಸ್ಥೆಯಿಂದ ಸುಮಾರು 30 ಲಕ್ಷ 68ಸಾವಿರ ಗ್ರಾಹಕರಿಗೆ ಪ್ರಯೋಜನವಾಗಲಿದೆ. ಅಷ್ಟೇ ಅಲ್ಲ ಇದರಿಂದ ಎಲ್ಲ ಗ್ರಾಹಕರು ಸೇರಿದಂತೆ 46 ಲಕ್ಷ ರೂ.ಗಳ ಪಡೆಯಬಹುದಾಗಿದೆ.

56 ಲಕ್ಷ ಗ್ರಾಹಕರಿಗೆ ಲಾಭ
ಯಾವ ಗ್ರಾಹಕರ ಕರೆಂಟ್ ಬಿಲ್ ಏಪ್ರಿಲ್ ತಿಂಗಳಿನಲ್ಲಿ ರೂ.100 ಬಂದಿದ್ದು, ಅವರ ಮೇ, ಜೂನ್ ಮತ್ತು ಜುಲೈ ತಿಂಗಳ ಬಿಲ್ 100ರಿಂದ 400 ರೂ ಬಂದಿದ್ದರೆ, ಅವರು ಕೇವಲ ರೂ. 100ನ್ನು ಮಾತ್ರ ಪಾವತಿಸಬೇಕು ಎಂದು ಸಿಎಂ ಚೌಹಾನ್ ಹೇಳಿದ್ದಾರೆ. ಈ ರೀತಿ ಒಟ್ಟು 56 ಲಕ್ಷ ಗ್ರಾಹಕರಿಗೆ ಒಟ್ಟು 255 ಕೋಟಿ ರೂ.ಗಳ ನೆಮ್ಮದಿ ಸಿಗಲಿದೆ ಎಂದು ಅವರು ಹೇಳಿದ್ದಾರೆ. 

ಬಿಲ್ ಪಾವತಿಯಲ್ಲಿ ಭಾರಿ ನೆಮ್ಮದಿ
ಸರ್ಕಾರ ನೀಡಿರುವ ಈ ರಿಯಾಯ್ತಿ ಪ್ರಕಾರ, ಏಪ್ರಿಲ್‌ನಲ್ಲಿ 100 ರಿಂದ 400 ರೂಪಾಯಿಗಳವರೆಗೆ ಮತ್ತು ಮೇ, ಜೂನ್ ಮತ್ತು ಜುಲೈನಲ್ಲಿ 400 ಕ್ಕೂ ಹೆಚ್ಚು ರೂಪಾಯಿಗಳ ಬಿಲ್ ಬಂದ ಗ್ರಾಹಕರು ಕೇವಲ ಅರ್ಧದಷ್ಟು ಬಿಲ್ ಮೊತ್ತವನ್ನು ಮಾತ್ರ ಪಾವತಿಸಬೇಕಾಗುತ್ತದೆ. ಬಿಲ್‌ಗಳನ್ನು ಪರಿಶೀಲಿಸಿದ ನಂತರ ಉಳಿದ ಮೊತ್ತವನ್ನು ಪಾವತಿಸುವ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಸರ್ಕಾರ ಹೇಳಿದೆ. ಇದರಿಂದ ಗ್ರಾಹಕರಿಗೆ ಸುಮಾರು 183 ಕೋಟಿ ರೂ.ಲಾಭ ಸಿಕ್ಕಂತಾಗಲಿದೆ.

24ಗಂಟೆಗಳ ಕಾಲ ಕರೆಂಟ್ 
ಈ ಕುರಿತು ಹೇಳಿಕೆ ನೀಡಿರುವ ಸಿಎಂ ಚೌಹಾನ್, ರಾಜ್ಯದಲ್ಲಿ ಕೃಷಿ ಕೆಲಸಗಳಿಗೆ 10 ಗಂಟೆ ಮತ್ತು ಸ್ಥಳೀಯ ಗ್ರಾಹಕರಿಗೆ 24 ಗಂಟೆಗಳ ಕಾಲ ಸರ್ಕಾರ ವಿದ್ಯುತ್ ಸರಬರಾಜು ಮಾಡಲಿದೆ ಎಂದು ಹೇಳಿದ್ದಾರೆ.

ಒಟ್ಟು ಮೂರು ತಿಂಗಳುಗಳ ಕಾಲ ಈ ನೆಮ್ಮದಿ ಸಿಗಲಿದೆ
ಏಪ್ರಿಲ್ ತಿಂಗಳಲ್ಲಿ 100 ರೂಪಾಯಿ ವಿದ್ಯುತ್ ಬಿಲ್ ಬಂದ ಗ್ರಾಹಕರು, 3 ತಿಂಗಳವರೆಗೆ 50 ರೂಪಾಯಿ ದರದಲ್ಲಿ ಬಿಲ್ ಪಾವತಿಸಲಿದ್ದಾರೆ. ಇದೇ ವೇಳೆ  100 ರಿಂದ 400 ರೂಪಾಯಿ ಬಿಲ್ ಬಂದ್ ಗ್ರಾಹಕರಿಗೂ ಕೂಡ ಪರಿಹಾರ ನೀಡುವುದಾಗಿ ಘೋಷಿಸಲಾಗಿದೆ.

Trending News