Viral Video: ಪ್ರೀತಿ ಬೇಕಾ! ಹಣ ಬೇಕಾ..! ಹುಡುಗಿಯ ಆಯ್ಕೆಗೆ ಶಾಕ್ ಆದ ಹುಡುಗ; ಅಂತಹದ್ದೇನಂದ್ಳು ನೀವೇ ಕೇಳಿ

Girl Answer on Lover or Money Viral Video: ಇಂದು ನಾವು ನಿಮಗೆ ತೋರಿಸಲಿರುವ ವಿಡಿಯೋ ಪ್ರೀತಿಯ ವಿಚಾರಕ್ಕೆ ಸಂಬಂಧಿಸಿದೆ. ಇದರಲ್ಲಿ ಒಬ್ಬಳು ಹುಡುಗಿ ದುಡ್ಡಿಗಾಗಿ ತನ್ನ ಪ್ರೀತಿಯನ್ನೇ ತ್ಯಜಿಸಲು ಮುಂದಾಗುತ್ತಾಳೆ. ಈ ವಿಡಿಯೋ ನೋಡಿದ್ರೆ ನೀವೂ ಕೂಡ ಶಾಕ್ ಆಗೋದು ಗ್ಯಾರಂಟಿ,

Written by - Bhavishya Shetty | Last Updated : Mar 20, 2023, 03:31 PM IST
    • ಒಂದು ಕಾಲದಲ್ಲಿ ಪ್ರೀತಿ ಮಾತ್ರ ಕಾಣುತ್ತಿತ್ತು, ಹೊರತು ಸಂಗಾತಿ ಆಸ್ತಿ-ಪಾಸ್ತಿಗೆ ಬೆಲೆ ಕೊಡುತ್ತಿರಲಿಲ್ಲ.
    • ಆದರೆ ಇಂದಿನ ಕಾಲಘಟ್ಟದಲ್ಲಿ ಅಂತಹ ಪ್ರೀತಿ ಕಾಣ ಸಿಗೋದು ಬಹಳ ಕಡಿಮೆ.
    • ಇದಕ್ಕೆ ಉದಾಹರಣೆಯಂತಿರುವ ವಿಡಿಯೋ ಒಂದನ್ನು ನಾವಿಂದು ನಿಮಗೆ ತೋರಿಸಲಿದ್ದೇವೆ
Viral Video: ಪ್ರೀತಿ ಬೇಕಾ! ಹಣ ಬೇಕಾ..! ಹುಡುಗಿಯ ಆಯ್ಕೆಗೆ ಶಾಕ್ ಆದ ಹುಡುಗ; ಅಂತಹದ್ದೇನಂದ್ಳು ನೀವೇ ಕೇಳಿ title=
Girl Boy Video

Girl Answer on Lover or Money Viral Video: ಹಣದಿಂದ ಎಂಥಹದ್ದೇ ಐಷಾರಾಮಿ ವಸ್ತುಗಳನ್ನು ಕೊಂಡುಕೊಳ್ಳಬಹುದು. ಆದರೆ ಖರೀದಿಸಲಾಗದಂತಹ ಅಮೂಲ್ಯವಾದದ್ದು ಏನಾದರು ಇದೆ ಎಂದರೆ ಅದು ಸಂಬಂಧ, ಪ್ರೀತಿ. ಎಲ್ಲಕ್ಕಿಂತ ಹೆಚ್ಚಾಗಿ ಜೊತೆಯಾಗೇ ಇರುವ ಈ ಸಂಬಂಧ-ಪ್ರೀತಿಯ ಬೆಲೆ ಅನೇಕರಿ ತಿಳಿದಿಲ್ಲ. ದುಡ್ಡಿನ ದಾಹದ ಮುಂದೆ ಇವುಗಳಿಗೆ ಬೆಲೆಯೇ ಇಲ್ಲದಂತಾಗಿದೆ.

ಇದನ್ನೂ ಓದಿ: Recruitment 2023: ಭಾರತೀಯ ಸೇನೆಯ ಫೈರ್‌ಮ್ಯಾನ್ ಹುದ್ದೆಗೆ ಅರ್ಜಿ ಆಹ್ವಾನ

ಒಂದು ಕಾಲದಲ್ಲಿ ಪ್ರೀತಿ ಮಾತ್ರ ಕಾಣುತ್ತಿತ್ತು, ಹೊರತು ಸಂಗಾತಿ ಆಸ್ತಿ-ಪಾಸ್ತಿಗೆ ಬೆಲೆ ಕೊಡುತ್ತಿರಲಿಲ್ಲ, ಅಲ್ಲಿ ಇದ್ದದ್ದು ಪರಿಶುದ್ಧ ಪ್ರೀತಿ. ಆದರೆ ಇಂದಿನ ಕಾಲಘಟ್ಟದಲ್ಲಿ ಅಂತಹ ಪ್ರೀತಿ ಕಾಣ ಸಿಗೋದು ಬಹಳ ಕಡಿಮೆ. ಇದಕ್ಕೆ ಉದಾಹರಣೆಯಂತಿರುವ ವಿಡಿಯೋ ಒಂದನ್ನು ನಾವಿಂದು ನಿಮಗೆ ತೋರಿಸಲಿದ್ದೇವೆ.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ವಿಡಿಯೋವೊಂದು ವ್ಯಕ್ತಿಯೊಬ್ಬ ಹಣದ ವ್ಯಾಮೋಹಕ್ಕೆ ಹುಡುಗಿ ತನ್ನ ಪ್ರೀತಿಯನ್ನು ತ್ಯಜಿಸುತ್ತಾಳೆಯೇ ಎಂದು ಪರೀಕ್ಷೆ ಮಾಡುತ್ತಿದ್ದಾನೆ. ಆದರೆ ಆ ಹುಡುಗಿ ಕಡೆಗೆ ಮಾಡಿದ ಕೆಲಸಕ್ಕೆ ಆತ ಕಂಗಾಲಾಗಿದ್ದಾನೆ.

ಹುಡುಗಿಯೊಬ್ಬಳು ಪಾರ್ಕ್’ನಲ್ಲಿ ಕುಳಿತುಕೊಂಡಿರುತ್ತಾಳೆ. ಅದೇ ಸಂದರ್ಭದಲ್ಲಿ ಒಬ್ಬ ಹುಡುಗ ಬಂದು, ನಿನಗೆ ಪ್ರೀತಿ ಬೇಕಾ? ಅಥವಾ ಹಣ ದುಡ್ಡು ಬೇಕಾ? ಎಂದು ಪ್ರಶ್ನೆ ಮಾಡುತ್ತಾನೆ. ಮೊದಲಿಗೆ, “ ನಾನೊಂದು ಹುಡುಗನನ್ನು ಐದು ವರ್ಷಗಳಿಂದ ಪ್ರೀತಿಸುತ್ತಿದ್ದೇನೆ. ಹಣಕ್ಕಾಗಿ ಪ್ರಿಯಕರನನ್ನು ಬಿಟ್ಟು ಹೋಗುವುದು ಅಸಾಧ್ಯ” ಎಂದು ಹುಡುಗಿ ಹೇಳುತ್ತಾಳೆ. ಆಮೇಲೆ ಹುಡುಗನ ಕೈಯಲ್ಲಿರುವ ಹಣದ ಕಂತೆಯನ್ನು ನೋಡಿ ಪ್ರೀತಿಗಿಂತ ಹಣವೇ ಮುಖ್ಯ ಎನ್ನುತ್ತಾಳೆ.

 

ಆಕೆಯ ಪ್ರೀತಿ ನಿಜವಾಗಿದೆ. ಈ ಸತ್ಯವನ್ನು ಅಲ್ಲಗಳೆಯುವಂತಿಲ್ಲ. ಆದರೆ ಇನ್ನೂ ಹೆಚ್ಚು ವಾಸ್ತವವೆಂದರೆ ಜೀವನವನ್ನು ಉಳಿಸಿಕೊಳ್ಳಲು ಮತ್ತು ಕನಿಷ್ಠ ಮೂಲಭೂತ ಅವಶ್ಯಕತೆಗಳೊಂದಿಗೆ ಆರಾಮದಾಯಕ ಜೀವನವನ್ನು ನಡೆಸಲು ಹಣದ ಅಗತ್ಯವಿದೆ ಎಂಬುದು ಆಕೆಯ ಅಭಿಪ್ರಾಯ ಆಗಿರಬಹುದು.

ಇದನ್ನೂ ಓದಿ: ದೆಹಲಿ ತಲುಪಿದ ಲಕ್ಷಾಂತರ ರೈತರು! ರಾಮಲೀಲಾ ಮೈದಾನದಲ್ಲಿ ಇಂದು 'ಮಹಾಪಂಚಾಯತ್'

ಒಬ್ಬರು ಐಷಾರಾಮಿ ಜೀವನಶೈಲಿಯನ್ನು ಬಯಸಿದರೆ ಅದರಲ್ಲಿ ಯಾವುದೇ ತಪ್ಪಿಲ್ಲ. ಏಕೆಂದರೆ ಅದು ಪ್ರತಿಯೊಬ್ಬರ ಹಕ್ಕು. ಆದರೆ ಅತ್ಯಂತ ಮುಖ್ಯವಾದ ವಿಷಯವೆಂದರೆ ಹಣವು ನ್ಯಾಯಯುತ ವಿಧಾನದಿಂದ ಬರಬೇಕು. ಪ್ರತಿಯೊಬ್ಬರು ಸಹ ಕಷ್ಟಪಟ್ಟು ಕೆಲಸ ಮಾಡಬೇಕು. ಎಂದಿಗೂ ಅಪ್ರಾಮಾಣಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬಾರದು.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News