ನವದೆಹಲಿ: ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಗುರುವಾರ ರಾಯ್ಬರೇಲಿ ಲೋಕಸಭಾ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸಿದ್ದಾರೆ. ಕಳೆದ ಲೋಕಸಭೆ ಚುನಾವಣೆಗಳಲ್ಲಿ ಇದೇ ಕ್ಷೇತ್ರದಿಂದ ಸತತ ನಾಲ್ಕು ಬಾರಿ ಗೆಲುವು ಸಾಧಿಸಿರುವ ಸೋನಿಯಾ ಇಂದು ಐದನೇ ಬಾರಿಗೆ ಗೆಲುವಿವನ್ನು ಅರಸಿ ನಾಮಪತ್ರ ಸಲ್ಲಿಸಿದ್ದಾರೆ.
ನಾಮಪತ್ರ ಸಲ್ಲಿಕೆಗೂ ಮುನ್ನ ಪುತ್ರ ರಾಹುಲ್ ಗಾಂಧಿ ಹಾಗೂ ಪುತ್ರಿ ಪ್ರಿಯಾಂಕಾ ಗಾಂಧಿ ಜೊತೆಗೂಡಿ ಕಾಂಗ್ರೆಸ್ ಕಚೇರಿಯಲ್ಲಿ ಹೋಮ ಹವನದಲ್ಲಿ ಪಾಲ್ಗೊಂಡ ಸೋನಿಯಾ ಗಾಂಧಿ ಗೆಲುವಿಗಾಗಿ ಆ ದೇವರಲ್ಲಿ ಪ್ರಾರ್ಥಿಸಿದರು.
Sonia Gandhi performs 'havan' ahead of filing nomination from Raebareli. Rahul Gandhi and Priyanka Gandhi Vadra also present #LokSabhaElections2019 pic.twitter.com/5QFXDiYILS
— ANI UP (@ANINewsUP) April 11, 2019
ಬಳಿಕ ರಾಯ್ಬರೇಲಿಯ ಪ್ರಮುಖ ರಸ್ತೆಗಳಲ್ಲಿ ರೋಡ್ ಶೋ ನಡೆಸಿದ ಸೋನಿಯಾ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲಿ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಮತ್ತು ಅಳಿಯ ರಾಬರ್ಟ್ ವಾದ್ರಾ ಸಾಥ್ ನೀಡಿದರು.
Raebareli: Sonia Gandhi holds a roadshow ahead of filing nomination from Raebareli. #IndiaElections2019 pic.twitter.com/nIg1Ym2Gri
— ANI UP (@ANINewsUP) April 11, 2019
ಬಳಿಕ ಈ ಚುನಾವಣೆಯಲ್ಲಿಯೂ ಮೋದಿ ಅಜೆಯರಾಗಲಿದ್ದಾರೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸೋನಿಯಾ ಗಾಂಧಿ, "ಖಂಡಿತಾ ಇಲ್ಲ. 2004ರ ಚುನಾವಣೆಯನ್ನು ಮರೆಯಬೇಡಿ. ವಾಜಪೇಯಿ ಕೂಡ ಅಜೆಯರಾಗಿದ್ದರು. ಆದರೆ ಚುನಾವಣೆಯಲ್ಲಿ ನಾವು ಗೆಲುವು ಸಾಧಿಸಿದ್ದೆವು" ಎಂದು ಹೇಳಿದರು.