ಲೋಕಸಭಾ ಚುನಾವಣೆ 2019: ಇಂದು ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಸಾಧ್ಯತೆ! ಯಾರಿಗೆ ಸಿಗಬಹುದು ಟಿಕೆಟ್?

ಈ ಬಾರಿ ಪಾಟ್ನಾ ಸಾಹಿಬ್ ನಿಂದ ಬಿಜೆಪಿ ನಾಯಕ ಶತ್ರುಘ್ನ ಸಿನ್ಹಾ ಬದಲಿಗೆ ರವಿಶಂಕರ್ ಪ್ರಸಾದ್ ಅವರನ್ನು ಕಣಕ್ಕಿಳಿಸಲು ನಿರ್ಧರಿಸಿದ್ದು, ಬಿಹಾರದ ಭಾಗಲ್ಪುರ ಕ್ಷೇತ್ರವನ್ನು ಜೆಡಿಯು ಗೆ ಬಿಟ್ಟುಕೊಡಲು ಬಿಜೆಪಿ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.

Last Updated : Mar 19, 2019, 11:13 AM IST
ಲೋಕಸಭಾ ಚುನಾವಣೆ 2019:  ಇಂದು ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಸಾಧ್ಯತೆ! ಯಾರಿಗೆ ಸಿಗಬಹುದು ಟಿಕೆಟ್? title=

ನವದೆಹಲಿ: ಲೋಕಸಭಾ ಚುನಾವಣೆಗೆ ಹಲವು ದಿನಗಳಿಂದ ಅಭ್ಯರ್ಥಿಗಳ ಆಯ್ಕೆಗೆ ಸಾಕಷ್ಟು ಕಸರತ್ತು ನಡೆಸಿರುವ ಬಿಜೆಪಿ, ಇಂದು ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡುವ ಸಾಧ್ಯತೆಯಿದೆ. 

ಮೂಲಗಳ ಪ್ರಕಾರ, ಬಿಹಾರ, ಜಮ್ಮು ಮತ್ತು ಕಾಶ್ಮೀರ, ಮಹಾರಾಷ್ಟ್ರ, ತೆಲಂಗಾಣ, ಉತ್ತರಾಖಂಡ್ ಮತ್ತು ಈಶಾನ್ಯದ ಏಳು ರಾಜ್ಯಗಳ ಲೋಕಸಭಾ ಸ್ಥಾನಗಳ ಬಗ್ಗೆ ಚರ್ಚೆಗಳು ನಡೆದು ಮಾರ್ಚ್ 16 ರಂದೇ ಅಭ್ಯರ್ಥಿಗಳ ಅಂತಿಮ ಆಯ್ಕೆ ಪೂರ್ಣಗೊಂಡಿದ್ದು, ಗೋವಾ ಸಿಎಂ ಆಗಿದ್ದ ಮನೋಹರ್ ಪರಿಕ್ಕರ್ ನಿಧನದ ಹಿನ್ನೆಲೆಯಲ್ಲಿ ಅಭ್ಯರ್ಥಿಗಳ ಘೋಷಣೆಯನ್ನು ಬಿಜೆಪಿ ಮುಂದೂಡಿತ್ತು ಎನ್ನಲಾಗಿದೆ. 

ಶನಿವಾರ ನಡೆದ ಬಿಜೆಪಿಯ ಕೇಂದ್ರ ಚುನಾವಣಾ ಸಮಿತಿಯ ಸಭೆಯಲ್ಲಿ ಲೋಕಸಭೆ ಚುನಾವಣೆಗೆ ದೊಡ್ಡ ನಾಯಕರ ಹೆಸರುಗಳನ್ನು ಚರ್ಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಇವುಗಳಲ್ಲಿ ರವಿ ಶಂಕರ್ ಪ್ರಸಾದ್ ಹೆಸರಿನಿಂದ ಸ್ಮೃತಿ ಇರಾನಿ ವರೆಗೂ ಹೆಸರುಗಳನ್ನೂ ಚರ್ಚಿಸಲಾಗಿದೆ ಎನ್ನಲಾಗಿದೆ. ಅಷ್ಟೇ ಅಲ್ಲದೆ, ಈ ಬಾರಿ ಪಾಟ್ನಾ ಸಾಹಿಬ್ ನಿಂದ ಬಿಜೆಪಿ ನಾಯಕ ಶತ್ರುಘ್ನ ಸಿನ್ಹಾ ಬದಲಿಗೆ ರವಿಶಂಕರ್ ಪ್ರಸಾದ್ ಅವರನ್ನು ಕಣಕ್ಕಿಳಿಸಲು ನಿರ್ಧರಿಸಿದ್ದು, ಬಿಹಾರದ ಭಾಗಲ್ಪುರ ಕ್ಷೇತ್ರವನ್ನು ಜೆಡಿಯು ಗೆ ಬಿಟ್ಟುಕೊಡಲು ಬಿಜೆಪಿ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.

ಬಿಜೆಪಿಯಿಂದ ಸ್ಪರ್ಧಿಸಲಿರುವ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ:
1. ರವಿಶಂಕರ್ ಪ್ರಸಾದ್- ಪಾಟ್ನಾ ಸಾಹೀಬ್
2. ರಾಧಾಮೋಹನ್ ಸಿಂಗ್- ಪೂರ್ವಿ ಚಂಪಾರಣ್(ಬಿಹಾರ್)
3. ನಿತಿನ್ ಗಡ್ಕರಿ- ನಾಗಪುರ(ಮಹಾರಾಷ್ಟ್ರ)
4. ಪೂನಂ ಮಹಾಜನ್- ಮುಂಬೈ ನಾರ್ತ್ ಸೆಂಟ್ರಲ್
5. ಕಿರೀಟ್ ಸೋಮಯ್ಯ- ಮುಂಬೈ ನಾರ್ತ್ ಈಸ್ಟ್
6. ರಾಜೀವ್ ಪ್ರತಾಪ್ ರೂಡಿ - ಸಾರಣ್(ಬಿಹಾರ್)
7. ಅಶ್ವಿನಿ ಚೌಬೆ- ಬಕ್ಸರ್(ಬಿಹಾರ್)
8. ಗಿರಿರಾಜ್ ಸಿಂಗ್- ಬೆಗೂಸರಾಯ್(ಬಿಹಾರ್)
9. ಮನೋಜ್ ಸಿನ್ಹಾ- ಗಾಜಿಪುರ್(ಉತ್ತರಪ್ರದೇಶ)
10. ಮಹೇಂದ್ರ ನಾಥ್ ಪಾಂಡೆ- ಚಂದೌಲಿ(ಉತ್ತರಪ್ರದೇಶ)
11. ಸ್ಮೃತಿ ಇರಾನಿ- ಅಮೇಥಿ (ಉತ್ತರಪ್ರದೇಶ)
12. ಅನುರಾಗ್ ಠಾಕೂರ್- ಹಮೀರ್ ಪುರ(ಹಿಮಾಚಲಪ್ರದೇಶ)
13. ಜಯಂತ್ ಸಿನ್ಹಾ- ಹಜಾರಿಬಾಗ್ (ಜಾರ್ಖಂಡ್)
14. ನರೇಂದ್ರ ಸಿಂಹ್ ತೋಮರ್- ಗ್ವಾಲಿಯರ್(ಮಧ್ಯಪ್ರದೇಶ್)
15. ಹಂಸರಾಜ್ ಅಹೀರ್- ಚಂದ್ರಾಪುರ್(ಮಹಾರಾಷ್ಟ್ರ)

Trending News