ಲೋಕಸಭಾ ಚುನಾವಣೆ 2019ರ ಫಲಿತಾಂಶ: ಬೆಳಿಗ್ಗೆ 9:30 ರಿಂದಲೇ ಟ್ರೆಂಡ್‌ ಲಭ್ಯ

ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 5 VVPAT ಯಂತ್ರಗಳನ್ನು ಅಳವಡಿಸಲಾಗಿದೆ. ಒಂದು ಮಿಷನ್ ನಲ್ಲಿ ಸುಮಾರು 1400 ಸ್ಲಿಪ್ ಗಳಿವೆ. ಒಂದು VVPAT ಯಂತ್ರದ ಎಣಿಕೆಗೆ ಸುಮಾರು 1 ಗಂಟೆ ತೆಗೆದುಕೊಳ್ಳುತ್ತದೆ.

Last Updated : May 23, 2019, 07:19 AM IST
ಲೋಕಸಭಾ ಚುನಾವಣೆ 2019ರ ಫಲಿತಾಂಶ: ಬೆಳಿಗ್ಗೆ  9:30 ರಿಂದಲೇ ಟ್ರೆಂಡ್‌ ಲಭ್ಯ title=

ನವದೆಹಲಿ: ಇಂದು ಲೋಕಸಭಾ ಚುನಾವಣೆ 2019ರ ಫಲಿತಾಂಶ ಹೊರಬೀಳಲಿದೆ. ಚುನಾವಣಾ ಆಯೋಗದಿಂದ ಬೆಳಿಗ್ಗೆ 8 ಗಂಟೆಯಿಂದ ಮತಎಣಿಕೆ ಆರಂಭಿಸಲು ಸಿದ್ಧತೆಗಳನ್ನು ಪೂರ್ಣಗೊಳಿಸಲಾಗಿದೆ. ಆದರೆ ಈ ಬಾರಿ ಆರಂಭಿಕ ಟ್ರೆಂಡ್ ಗಾಗಿ ಸ್ವಲ್ಪ ಸಮಯ ತೆಗೆದುಕೊಳ್ಳಬಹುದು ಎನ್ನಲಾಗಿದೆ.  ನಿಯಮಗಳ ಪ್ರಕಾರ, ಮೊದಲಿಗೆ ಬ್ಯಾಲೆಟ್ ಪೇಪರ್ ಎಣಿಕೆ ಮಾಡಬೇಕು. ನಂತರ ಇವಿಎಂ ಎಣಿಕೆ ಪ್ರಾರಂಭವಾಗುತ್ತದೆ.

ಆದರೆ ಈ ಬಾರಿ ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲಿ 5 VVPAT ಯಂತ್ರಗಳನ್ನು ಅಳವಡಿಸಲಾಗಿದೆ. ಒಂದು ಮಿಷನ್ ನಲ್ಲಿ ಸುಮಾರು 1400 ಸ್ಲಿಪ್ ಗಳಿವೆ. ಒಂದು VVPAT ಯಂತ್ರದ ಎಣಿಕೆಗೆ ಸುಮಾರು 1 ಗಂಟೆ ತೆಗೆದುಕೊಳ್ಳುತ್ತದೆ. ಆದ್ದರಿಂದ, ಐದು ಯಂತ್ರಗಳ ಲೆಕ್ಕ ಐದು ಗಂಟೆಗಳ ತೆಗೆದುಕೊಳ್ಳುತ್ತದೆ. ಬ್ಯಾಲೆಟ್ ಪೇಪರ್ ನ ಮೂರು ಸುತ್ತುಗಳ ನಂತರ ಇವಿಎಂ ಎಣಿಕೆ ಪ್ರಾರಂಭವಾಗಿದೆ. ಬೆಳಿಗ್ಗೆ  9:30ರಿಂದಲೇ ಮೊದಲ ಟ್ರೆಂಡಿಂಗ್ ಲಭ್ಯವಾಗುವ ನಿರೀಕ್ಷೆಯಿದೆ. ಮಧ್ಯಾಹ್ನ 3 ಗಂಟೆ ಹೊತ್ತಿಗೆ ಒಂದು ಸ್ಪಷ್ಟ ಚಿತ್ರಣ ಹೊರಬರುವ ನಿರೀಕ್ಷೆಯಿದೆ. ಅದಾಗ್ಯೂ, ಅಂತಿಮ ಫಲಿತಾಂಶ ಘೋಷಣೆಗೆ ತಡವಾಗಬಹುದು ಎನ್ನಲಾಗುತ್ತಿದೆ.

ಅಂತಿಮ ಫಲಿತಾಂಶದ ಬಗ್ಗೆ ಮಾತನಾಡುವುದಾದರೆ, ಎಣಿಕೆ ಪೂರ್ಣಗೊಂಡ ನಂತರ ವಿವಿಪ್ಯಾಟ್ ಮತ್ತು ಇವಿಎಂ ಫಲಿತಾಂಶಗಳನ್ನು ತಾಳೆ ನೋಡಿ ಹೊಂದಾಣಿಕೆಯಾಗಿರುವುದನ್ನು ಖಚಿತಪಡಿಸಿದ ನಂತರವೇ ಫಲಿತಾಂಶ ಪ್ರಕಟಿಸಲಾಗುವುದು. ಎಣಿಕೆಯ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು, ಪ್ರತಿ ಸಭೆಯಲ್ಲಿ ಹತ್ತು ಹತ್ತು ಎಣಿಕೆಯ ಸಭಾಂಗಣಗಳನ್ನು ನಿರ್ಮಿಸಲಾಗಿದೆ.
 

Trending News