Land Unique Code - ಇನ್ಮುಂದೆ ನಿಮ್ಮ ಜಮೀನಿಗೂ ಸಿಗಲಿದೆ 'Aadhaar Card' ಮಾದರಿಯ ವಿಶಿಷ್ಟ ಸಂಖ್ಯೆ

Land Unique Code - ನಿಮ್ಮ ಜಮೀನಿನ ಯುನಿಕ್ ಕೋಡ್ (Unique Code) 16 ಅಂಕಗಳದ್ದಾಗಿರಲಿದೆ. ಮೊದಲಿನ 6 ಅಂಕಿಗಳು ಊರಿನ ಜನಗಣತಿಯನ್ನು ಆಧರಿಸಿ ಇರಲಿದೆ.

Written by - Nitin Tabib | Last Updated : Feb 8, 2021, 08:11 PM IST
  • ಶೀಘ್ರವೇ ಭೂಮಿಗಳಿಗೂ ಸಿಗಲಿದೆ ಆಧಾರ್ ಮಾದರಿಯ ವಿಶಿಷ್ಟ ಗುರುತು.
  • ಭೂಮಿಗಳಿಗೆ ಯುನಿಕ್ ಕೋಡ್ ನೀಡಲು ಮುಂದಾದ ಸರ್ಕಾರ.
  • ಭೂ ವಂಚನೆ ಪ್ರಕರಣಗಳಿಗೆ ಬ್ರೇಕ್ ಹಾಕುವುದು ಸರ್ಕಾರದ ಉದ್ದೇಶ.
Land Unique Code - ಇನ್ಮುಂದೆ ನಿಮ್ಮ ಜಮೀನಿಗೂ ಸಿಗಲಿದೆ 'Aadhaar Card' ಮಾದರಿಯ ವಿಶಿಷ್ಟ ಸಂಖ್ಯೆ title=
Land Unique Code (File Photo)

ನವದೆಹಲಿ: Land Unique Code - ದೇಶದ ಎಲ್ಲ ಅಂಕಿಗಳನ್ನು ಹಾಗೂ ಸಿಸ್ಟಂ ಅನ್ನು ಸರಿಪಡಿಸಲು ವಿಶಿಷ್ಟ ಗುರುತು ಸಂಖ್ಯೆ ಮಹತ್ವದ ಪಾತ್ರ ನಿರ್ವಹಿಸುತ್ತಿದೆ. ಜನಸಾಮಾನ್ಯರಿಗಾಗಿ ವಿಶಿಷ್ಟ ಗುರುತುಪತ್ರದ ರೂಪದಲ್ಲಿ ಆಧಾರ್ ಕಾರ್ಡ್ ಬಂದಾಗಿನಿಂದ ವಿಭಿನ್ನ ಯೋಜನೆಗಳ ಲಾಭ ನೇರವಾಗಿ ಅಗತ್ಯವಿರುವವರಿಗೆ ತಲುಪುತ್ತಿದೆ.

ಇದನ್ನೇ ಮಾದರಿಯಾಗಿಟ್ಟುಕೊಂಡು ಉತ್ತರ ಪ್ರದೇಶದ ಯೋಗಿ ಸರ್ಕಾರ (Uttar Pradesh Government) ಪ್ರತಿಯೊಬ್ಬರ ಭೂಮಿಗೂ ಕೂಡ 16 ಅಂಕಗಳ (16 Digit Unicode) ಯುನಿಕ್ ಕೋಡ್ ಜಾರಿಗೊಳಿಸಲು ಯೋಜನೆ ಸಿದ್ಧಪಡಿಸುತ್ತಿದೆ. ಸರ್ಕಾರದ ಈ ಪ್ರಯತ್ನದಿಂದ ಜಮೀನುಗಳ ಖರೀದಿ ಹಾಗೂ ಮಾರಾಟಗಳಲ್ಲಾಗುತ್ತಿರುವ ವಂಚನೆಯಿಂದ (Land Dispute) ಪಾರಾಗಬಹುದು.

ಜಮೀನು ಖರೀದಿದಾರರಿಗೆ ಆಗುತ್ತಿರುವ ವಂಚನೆಯಿಂದ ರಕ್ಷಿಸಲು ಯುಪಿ ಸರ್ಕಾರ ಯುನಿಕ್ ಕೋಡ್ (Unique Code)ಜಾರಿಗೊಳಿಸಲಿದೆ.

ಒಂದೇ ಕ್ಲಿಕ್ ನಲ್ಲಿ ಸಿಗಲಿದೆ ಸಂಪೂರ್ಣ ಮಾಹಿತಿ (computerised land records)
ಕೃಷಿ ಪ್ರದೇಶ, ವಸತಿ ಮತ್ತು ವಾಣಿಜ್ಯ ಭೂಮಿಯನ್ನು ಗುರುತಿಸುವ ಮೂಲಕ ಉತ್ತರ ಪ್ರದೇಶ ಸರ್ಕಾರದ ಕಂದಾಯ ಇಲಾಖೆ ವಿಶಿಷ್ಟ ಕೋಡ್ ಅನ್ನು ಹೊರಡಿಸುತ್ತಿದೆ. ಅನನ್ಯ ಕೋಡ್‌ ಬಳಸಿ ಖರೀದಿದಾರರು ತಮ್ಮ ಮನೆಯಿಂದಲೇ  ಒಂದು ಕ್ಲಿಕ್‌ನಲ್ಲಿ ಮಾರಾಟಮಾಡುವವರ ಭೂಮಿಯ ಸಂಪೂರ್ಣ ವಿವರಗಳನ್ನು ತಿಳಿದುಕೊಳ್ಳಬಹುದು. ಅನನ್ಯ ಕೋಡ್ ಮೂಲಕ, ವಿವಾದಿತ ಪ್ಲಾಟ್‌ಗಳ ನಕಲಿ ವಂಚನೆಯನ್ನು ತಡೆಯಬಹುದಾಗಿದೆ.

ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಯುನಿಕ್ ಕೋಡ್ ಸಿದ್ಧಪಡಿಸುವ ಕೆಲಸ ಆರಂಭಗೊಂಡಿದೆ. ಎಲ್ಲಾ ಹಳ್ಳಿಗಳಲ್ಲಿ, ಭೂಮಿಗೆ ವಿಶಿಷ್ಟವಾದ ಕೋಡ್ ಅನ್ನು ಅಳವಡಿಸುವ ಮೂಲಕ ಅವರ ದಾಖಲೆಗಳನ್ನು ಗಣಕೀಕರಿಸುವ ಕೆಲಸ ನಡೆಯುತ್ತಿದೆ. ಈ ಯೋಜನೆಯಲ್ಲಿ, ಭೂಮಿಯ ಹಳೆಯ ಮಾಲೀಕರಿಂದ ಹಿಡಿದು ಹೊಸ ಮಾಲೀಕರ ವಿವರಗಳನ್ನು ಸಹ ದಾಖಲಿಸಲಾಗುತ್ತಿದೆ.

ಇದನ್ನು ಓದಿ- EPFO Latest News: PFಗೆ ಸಂಬಂಧಿಸಿದ ಈ ದೊಡ್ಡ ಅಡಚಣೆ ಇದೀಗ ನಿವಾರಣೆಯಾಗಿದೆ

16 ಅಂಕಗಳದ್ದಾಗಿರಲಿದೆ ಈ ಯುನಿಕ್ ಕೋಡ್  (unique 16-digit Unicode)
ಬೇರೆ ಬೇರೆ ಭೂಮಿಗಳಿಗೆ ನೀಡಲಾಗುತ್ತಿರುವ ಈ ಯುನಿಕ್ ಕೋಡ್ ಒಟ್ಟು16 ಅಂಕಿಗಳನ್ನು ಒಳಗೊಂಡಿರಲಿದೆ. ಮೊದಲಿನ ಆರು ಅಂಕಗಳು ಗ್ರಾಮದ ಜನಗಣತಿಯನ್ನು ಆಧರಿಸಿ ಇರಲಿವೆ. 7-10 ರವರೆಗಿನ ಅಂಕಿಗಳು ಭೂಖಂಡದ ಸಂಖ್ಯೆಯ ಮೇಲೆ ಆಧಾರಿತವಾಗಿರಲಿವೆ. 11-14 ರವರೆಗಿನ ಅಂಕಗಳು ಜಮೀನಿನ ವಿಭಜನೆಯ ಸಂಖ್ಯೆಯಾಗಿರಲಿವೆ, 15-16ರವರೆಗಿನ ನಂಬರ್ ಭೂಮಿಯ ಶ್ರೇಣಿ ಸೂಚಿಸಲಿವೆ. ಶ್ರೇಣಿಯಲ್ಲಿ ಕೃಷಿ, ವಸತಿ ಹಾಗೂ ವ್ಯಾಣಿಜ್ಯ ಎಂಬ ಮೂರು ವಿವಿಧ ಶ್ರೇಣಿಗಳಲ್ಲಿ ಭೂಮಿಗಳನ್ನು ಗುರುತಿಸಲಾಗುತ್ತಿದೆ.

ಇದನ್ನು ಓದಿ- Latest FD Interest Rate - FD ಮೇಲೆ ಇಂದಿನಿಂದ ಸಿಗುತ್ತಿದೆ ಹೆಚ್ಚುವರಿ ಬಡ್ಡಿ, 1 ವರ್ಷಕ್ಕಿಂತ ಕಡಿಮೆ ಅವಧಿಯ ಹೂಡಿಕೆ ಲಾಭದಾಯಕ

ಇದೊಂದು ಗೇಮ್ ಚೆಂಜರ್ ಯೋಜನೆಯಾಗಿರಲಿದೆ (Game Changer Scheme)
ಜಮೀನು ಖರೀದಿಯಲ್ಲಾಗುತ್ತಿರುವ ಹೇರಾಫೇರಿ ಹಾಗೂ ವಂಚನೆಯನ್ನು ತಡೆಯುವ ದೃಷ್ಠಿಯಿಂದ ಯೋಗಿ ಆದಿತ್ಯನಾಥ್ (Yogi Adityanath)ಸರ್ಕಾರದ ಈ ಯೋಜನೆಯನ್ನು ಗೇಂ ಚೆಂಜರ್ ಎಂದೇ ಭಾವಿಸಲಾಗುತ್ತಿದೆ. ಈ ಯುನಿಕ್ ಕೋಡ್ ಸಿಸ್ಟಂ ಜಾರಿಯಾದ ಬಳಿಕ ಯಾರೂ ಕೂಡ ಭೂಮಿಯ ವಿಷಯದಲ್ಲಿ ವಂಚನೆ ಎಸಗಲು ಸಾಧ್ಯವಿಲ್ಲ.

ಇದನ್ನು ಓದಿ - WhatsApp ಕಥೆ ಮುಗಿತು, ಬಂತು Modi ಸರ್ಕಾರದ 'Sandes App'

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News