Lakhimpur Kheri Case: ಮೃತ ರೈತರ ಕುಟುಂಬಗಳಿಗೆ 50-50 ಲಕ್ಷ ನೆರವು ಘೋಷಿಸಿದ ಪಂಜಾಬ್-ಛತ್ತೀಸ್‌ಗಢ ಸರ್ಕಾರಗಳು

ಭಾನುವಾರದ ಘಟನೆಯಿಂದ, ಲಖಿಂಪುರ್ ಖೇರಿಯಲ್ಲಿ ರೈತ ಮುಖಂಡರು ಮತ್ತು ಆಡಳಿತದ ನಡುವೆ ಘರ್ಷಣೆ  ಸಂಭವಿಸಿತ್ತು. ಈ ಸಂದರ್ಭದಲ್ಲಿ ಪರಿಸ್ಥಿತಿ ಸಾಕಷ್ಟು ಉದ್ವಿಘ್ನಗೊಂಡಿತ್ತು. 

Written by - Ranjitha R K | Last Updated : Oct 6, 2021, 04:37 PM IST
  • ಮೃತ ರೈತರ ಕುಟುಂಬಗಳಿಗೆ ತಲಾ 50 - 50 ಲಕ್ಷ ಪರಿಹಾರ
  • ನೆರವು ಘೋಷಿಸಿದ ಪಂಜಾಬ್ ಮತ್ತು ಛತ್ತೀಸಗಡ ಸರ್ಕಾರಗಳು
  • ಬಿಜೆಪಿ ವಿರುದ್ಧ ಪಂಜಾಬ್ ಮುಖ್ಯಮಂತ್ರಿ ಆಕ್ರೋಶ
Lakhimpur Kheri Case:  ಮೃತ ರೈತರ ಕುಟುಂಬಗಳಿಗೆ 50-50 ಲಕ್ಷ ನೆರವು ಘೋಷಿಸಿದ ಪಂಜಾಬ್-ಛತ್ತೀಸ್‌ಗಢ  ಸರ್ಕಾರಗಳು title=
ಮೃತ ರೈತರ ಕುಟುಂಬಗಳಿಗೆ ತಲಾ 50 - 50 ಲಕ್ಷ ಪರಿಹಾರ (photo india.com)

ಲಕ್ನೋ : ಉತ್ತರ ಪ್ರದೇಶದ ಲಖಿಂಪುರ್ ಖೇರಿ (Lakhimpur Kheri) ಜಿಲ್ಲೆಯಲ್ಲಿ ಅಕ್ಟೋಬರ್ 3 ರ ಭಾನುವಾರ ನಡೆದ ಹಿಂಸಾಚಾರದಲ್ಲಿ ಸಾವನ್ನಪ್ಪಿದ ರೈತರ ಕುಟುಂಬಗಳಿಗೆ ಪಂಜಾಬ್ (Punjab) ಮತ್ತು ಛತ್ತೀಸಗಡ ಸರ್ಕಾರಗಳು ತಲಾ  50 - 50 ಲಕ್ಷ ರೂಪಾಯಿಗಳ ನೆರವನ್ನು ಘೋಷಿಸಿವೆ. ಎರಡೂ ರಾಜ್ಯಗಳು ರೈತರ ಕುಟುಂಬಗಳಿಗೆ ಮತ್ತು ಹತ್ಯೆಯಾದ ಪತ್ರಕರ್ತರ ಕುಟುಂಬಕ್ಕೆ ತಲಾ 50 ಲಕ್ಷ ರೂ.ಗಳ ಸಹಾಯವನ್ನು ಘೋಷಿಸಿವೆ. ಅಂದರೆ ಎರಡು ಸರ್ಕಾರಗಳು ಸೇರಿ ಒಟ್ಟು 1 ಕೋಟಿ ರೂ. ಪರಿಹಾರ ನೀಡಲಿವೆ.  

ಭಾನುವಾರದ ಘಟನೆಯಿಂದ, ಲಖಿಂಪುರ್ ಖೇರಿಯಲ್ಲಿ (Lakhimpur Kheri) ರೈತ ಮುಖಂಡರು ಮತ್ತು ಆಡಳಿತದ ನಡುವೆ ಘರ್ಷಣೆ (Lakhimpur Kheri voilence) ಸಂಭವಿಸಿತ್ತು. ಈ ಸಂದರ್ಭದಲ್ಲಿ ಪರಿಸ್ಥಿತಿ ಸಾಕಷ್ಟು ಉದ್ವಿಘ್ನಗೊಂಡಿತ್ತು. ಅಂತಿಮವಾಗಿ, ಸೋಮವಾರ ಸಂಜೆ, ಮೃತರಕುಟುಂಬಕ್ಕೆ 45 ಲಕ್ಷ ಪರಿಹಾರ ಮತ್ತು ಸ್ಥಳೀಯ ಮಟ್ಟದಲ್ಲಿ ಒಬ್ಬರಿಗೆ ಸರ್ಕಾರಿ ಕೆಲಸ ನೀಡುವುದಾಗಿ ಭರವಸೆ ನೀಡಿತು. ಇದಲ್ಲದೇ, ಘಟನೆಯಲ್ಲಿ ಗಾಯಗೊಂಡವರಿಗೆ ಉತ್ತರ ಪ್ರದೇಶ ಸರ್ಕಾರವು (UP Government) ತಲಾ 10 ಲಕ್ಷ ಪರಿಹಾರವನ್ನು ಕೂಡಾ ಘೋಷಿಸಿದೆ. 

ಇದನ್ನೂ ಓದಿ : PM Kisan: Good News - ಯಾವ ದಿನಾಂಕದಂದು ರೈತರ ಖಾತೆ ಸೇರಲಿದೆ PM Kisan ಯೋಜನೆಯ 10ನೇ ಕಂತು?

ಪಂಜಾಬ್ ಮುಖ್ಯಮಂತ್ರಿ ಚರಣ್ ಜಿತ್ ಚನ್ನಿ (Charanjeet Singh Channi) ಅವರು ಬುಧವಾರ ಲಖನೌಗೆ ಆಗಮಿಸಿದ್ದು, ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರೊಂದಿಗೆ ಲಖಿಂಪುರ್ ಖೇರಿಗೆ ಭೇಟಿ ನೀಡಿದ್ದಾರೆ. ಪಂಜಾಬ್ ಸರ್ಕಾರವು (Punjab government) ಮೃತ ರೈತರ ಕುಟುಂಬದ ಜೊತೆಗಿದೆ ಎಂದು ತಿಳಿಸಿದ್ದಾರೆ. ಅಲ್ಲದೆ, ತಮ್ಮ ಸರ್ಕಾರ ಲಖಿಂಪುರದಲ್ಲಿ ಹುತಾತ್ಮರಾದ ನಾಲ್ವರು ರೈತರು ಮತ್ತು ಪತ್ರಕರ್ತರ ಕುಟುಂಬಕ್ಕೆ ತಲಾ 50 ಲಕ್ಷ ಸಹಾಯವನ್ನು ನೀಡುವುದಾಗಿ ಘೋಷಿಸಿದ್ದಾರೆ.  

ಈ ಮಧ್ಯೆ, ಚರಣ್ ಜಿತ್ ಚನ್ನಿ  ಅವರೊಂದಿಗೆ ಲಖನೌಗೆ ಆಗಮಿಸಿದ ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ (Bhupesh Baghel), ಕೂಡಾ ಲಖಿಂಪುರ್ ಖೇರಿ ಹಿಂಸಾಚಾರದಲ್ಲಿ ಮೃತಪಟ್ಟ ನಾಲ್ವರು ರೈತರು ಮತ್ತು ಪತ್ರಕರ್ತರ ಕುಟುಂಬಕ್ಕೆ ತಲಾ 50 ಲಕ್ಷ ರೂ. ಪರಿಹಾರ ಪ್ರಕಟಿಸಿದ್ದಾರೆ. 

ಇದನ್ನೂ ಓದಿ : Big Verdict:ಅನುಕಂಪದ ಆಧಾರದ ಮೇಲಿನ ನೇಮಕಾತಿಯ ಕುರಿತು ಸುಪ್ರೀಂ ಮಹತ್ವದ ತೀರ್ಪು

ಈ ಸಂದರ್ಭದಲ್ಲಿ ಮಾತನಾಡಿದ, ಪಂಜಾಬ್ ಮುಖ್ಯಮಂತ್ರಿ ಚನ್ನಿ, ಜಲಿಯನ್ ವಾಲಾಬಾಗ್ ನಲ್ಲಿ ಗುಂಡಿನ ದಾಳಿ ನಡೆಸಿ ಅಮಾಯಕರನ್ನು ಕೊಂದ ರೀತಿಯಲ್ಲಿಯೇ, ಆಡಳಿತಾರೂಢ BJP ಬಿಜೆಪಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗೇಲಿ ಮಾಡಿದೆ ಎಂದು ಆರೋಪಿಸಿದ್ದಾರೆ. ಈ ಸರ್ವಾಧಿಕಾರ ಹೆಚ್ಚು ದಿನ ಉಳಿಯುವುದಿಲ್ಲ ಎಂದವರು ಹೇಳಿದ್ದಾರೆ. 

ಲಖಿಂಪುರದಲ್ಲಿ ಸಂಭವಿಸಿದ ಹೃದಯ ವಿದ್ರಾವಕ ಘಟನೆಯಿಂದ ಇಡೀ ದೇಶ ತತ್ತರಿಸಿದೆ ಎಂದು ಬಘೇಲ್ ಹೇಳಿದ್ದಾರೆ. ಇಡೀ ದೇಶವು ಆ ಸಂತ್ರಸ್ತರ ಕುಟುಂಬದೊಂದಿಗೆ ನಿಂತಿದೆ. ಕಳೆದ ಭಾನುವಾರ, ಲಖಿಂಪುರ್ ಖೇರಿ ಜಿಲ್ಲೆಯ ಟಿಕೋನಿಯಾ ಪ್ರದೇಶದಲ್ಲಿ ನಡೆದ ಹಿಂಸಾಚಾರದಲ್ಲಿ ನಾಲ್ವರು ರೈತರು ಸೇರಿದಂತೆ ಎಂಟು ಜನರು ಸಾವನ್ನಪ್ಪಿದ್ದು ಗಮನಾರ್ಹವಾಗಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News