VIDEO: ವಿದ್ಯಾರ್ಥಿನಿಯರನ್ನು ಛೇಡಿಸಿದ ಕಿಡಿಗೇಡಿ! ಮುಂದೇನಾಯ್ತು?

ಮೂಲಗಳ ಪ್ರಕಾರ ಕಿಡಿಗೇಡಿಯಿಂದ ಬೇಸತ್ತು ಹೋದ ಶಾಲಾ ಬಾಲಕಿಯರು ಆತನ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ ಎನ್ನಲಾಗಿದೆ. ದೂರು ದಾಖಲಿಸಿಕೊಂಡ ಆಂಟಿ-ರೋಮಿಯೋ ತಂಡದ ಮಹಿಳಾ ಪೇದೆ ಚಂಚಲ್ ಚೌರಾಸಿಯಾ ಕೂಡಲೇ ಕಾರ್ಯಪ್ರವೃತ್ತರಾಗಿದ್ದಾರೆ.

Last Updated : Dec 10, 2019, 10:58 PM IST
VIDEO: ವಿದ್ಯಾರ್ಥಿನಿಯರನ್ನು ಛೇಡಿಸಿದ ಕಿಡಿಗೇಡಿ! ಮುಂದೇನಾಯ್ತು? title=

ಕಾನ್ಪುರ್: ಕಾನ್ಪುರ್ ನಲ್ಲಿ ಯುವತಿಯೋರ್ವಳ ತಂಟೆಗೆ ಹೋದ ಕಿಡಿಗೇಡಿಗೆ ಧರ್ಮದೇಟು ಬಿದ್ದಿದ್ದು, ಈ ಕುರಿತಾದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಕತ್ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಯುವಕನೋರ್ವನಿಗೆ ಚಪ್ಪಲಿ ಏಟು ಬೀಳುವುದನ್ನು ಗಮನಿಸಬಹುದಾಗಿದೆ. ಈ ಹೊಡೆತದಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಿರುವ ಯುವಕ ತನ್ನ ಮುಖವನ್ನೂ ಸಹ ಮುಚ್ಚಿಕೊಳ್ಳುತ್ತಿದ್ದಾನೆ. ಆದರೆ, ಮಹಿಳಾ ಕಾನ್ಸ್ಟ್ಟೇಬಲ್ ಕೋಪ ಇಷ್ಟಕ್ಕೆ ಶಮನಗೊಂಡಿಲ್ಲ. ಈ ಪ್ರಕ್ರಿಯೆಯಲ್ಲಿ ತನ್ನ ಕಾಲಿನಲ್ಲಿ ಧರಿಸಿದ ಶೂ ಕೈಗೆತ್ತಿಕೊಳ್ಳುವ ಅವಳು, ಯುವಕನನ್ನು ಥಳಿಸಲು ಆರಂಭಿಸುತ್ತಾಳೆ.

ಏನಿದು ಪ್ರಕರಣ?
ವೈರಲ್ ಆಗಿರುವ ಈ ವಿಡಿಯೋ ಕಾನ್ಪುರ್ ನಿಂದ ಹೊರಬಿದ್ದಿದೆ ಎನ್ನಲಾಗಿದೆ. ಇಲ್ಲಿ ಕಿಡಿಗೇಡಿಯೋರ್ವನಿಗೆ ಭಾರಿ ಪಾಠ ಹೇಳಿಕೊಟ್ಟ ಮಹಿಳಾ ಪೆದೆಯೋರ್ವರು ನಡುರಸ್ತೆಯಲ್ಲಿಯೇ ಆತನಿಗೆ ತನ್ನ ಬೂಟ್ ಗಳಿಂದ ಥಳಿಸಿದ್ದಾರೆ. ಪ್ರದೇಶದ ಬಿಥೂರ್ ಠಾಣಾ ವ್ಯಾಪ್ತಿಯಿಂದ ವರದಿಯಾಗಿದೆ. ಪ್ರತಿನಿತ್ಯದಂತೆ ಇಂದೂ ಸಹ ಅಲಿನ ಶನಿದೇವ ಸರ್ಕಲ್ ನಲ್ಲಿ ಆಂಟಿ-ರೋಮಿಯೋ ತಂಡ ಕಾರ್ಯನಿರತವಾಗಿತ್ತು. ಬೆಳಗ್ಗೆ ಶಾಲೆಗಳ ಹತ್ತಿರ ಈ ತಂಡ ಪ್ರತಿಯೋರ್ವ ದಾರಿಹೋಕರ ಮೇಲೆ ನಿಗಾವಹಿಸಿರುತ್ತದೆ. ಈ ವೇಳೆ ತಂಡದ ಮಹಿಳಾ ಪೆದೆಯೋರ್ವರ ದೃಷ್ಟಿ ಕಿಡಿಗೇಡಿಯೋರ್ವನ ಮೇಲೆ ಬಿದ್ದಿದ್ದು, ಮಹಿಳಾ ಪೇದೆ ತನ್ನ ಸಹವರ್ತಿಗಳ ಜೊತೆ ಸೇರಿ ಕಿಡಿಗೇಡಿಯನ್ನು ಥಲಿಸಿದ್ದಾರೆ. ಶಾಲೆಗೆ ಬರುವ ಮತ್ತು ಹೋಗುವ ವಿದ್ಯಾರ್ಥಿನಿಯರನ್ನು ಛೇಡಿಸಿದ ಆರೋಪ ಕಿಡಿಗೇಡಿ ಮೇಲಿದೆ.   

ಮೂಲಗಳ ಪ್ರಕಾರ ಕಿಡಿಗೇಡಿಯಿಂದ ಬೇಸತ್ತು ಹೋದ ಶಾಲಾ ಬಾಲಕಿಯರು ಆತನ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ ಎನ್ನಲಾಗಿದೆ. ದೂರು ದಾಖಲಿಸಿಕೊಂಡ ಆಂಟಿ-ರೋಮಿಯೋ ತಂಡದ ಮಹಿಳಾ ಪೇದೆ ಚಂಚಲ್ ಚೌರಾಸಿಯಾ ಕೂಡಲೇ ಕಾರ್ಯಪ್ರವೃತ್ತರಾಗಿದ್ದು, ಕಿಡಿಗೇಡಿಯನ್ನು ಬಂಧಿಸಿದ್ದಾರೆ. ಮೊದಲು ಕಿಡಿಗೇಡಿಯ ಕಪಾಳಮೋಕ್ಷ ಮಾಡಿದ ಪೇದೆ ನಂತರ ಪಬ್ಲಿಕ್ ನಲ್ಲಿಯೇ ಕಿಡಿಗೇಡಿಯನ್ನು ಥಲಿಸಿದ್ದಾಳೆ. ಆರೋಪಿಯ ಮೇಲೆ ಪ್ರಕರಣ ದಾಖಲಿಸಿರುವ ಪೊಲೀಸರು ಆತನನ್ನು ಜೈಲಿಗಟ್ಟಿದ್ದಾರೆ. ಪೊಲೀಸರು ನೀಡಿರುವ ಮಾಹಿತಿ ಪ್ರಕಾರ ಆರೋಪಿಯನ್ನು ನಯೀಮ್ ಖಾನ್ ಎಂದು ಗುರುತಿಸಲಾಗಿದ್ದು, ಆದ ಫತೇಪುರ್ ನಿವಾಸಿಯಾಗಿದ್ದಾನೆ.

 

ಯೋಗಿ ಸರ್ಕಾರದ ಕಟ್ಟುನಿಟ್ಟಿನ ಆದೇಶ
ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ಅತ್ಯಾಚಾರ ಹಾಗೂ ಮಹಿಳೆಯರನ್ನು ಚುಡಾಯಿಸುವ ಪ್ರಕರಣಗಳನ್ನು ಹತ್ತಿಕ್ಕಲು ಮುಂದಾಗಿರುವ ಅಲ್ಲಿನ ಯೋಗಿ ಸರ್ಕಾರ, ಪೊಲೀಸರಿಗೆ ಕಟ್ಟುನಿಟ್ಟಿನ ಆದೇಶಗಳನ್ನು ಜಾರಿಗೊಳಿಸಿದೆ. ಬಳಿಕ ಮಹಿಳೆಯರ ಸುರಕ್ಷತೆಗಾಗಿ ಸಾರ್ವಜನಿಕ ಸ್ಥಳಗಳು, ಶಾಲಾ-ಕಾಲೇಜುಗಳು ಹಾಗೂ ನಗರಗಳ ಪ್ರಮುಖ ವೃತ್ತಗಳಲ್ಲಿ ಪೊಲೀಸರ ಆಂಟಿ-ರೋಮಿಯೋ ತಂಡಗಳನ್ನು ನಿಯೋಜಿಸಲಾಗಿದೆ.

Trending News