ಲಡಾಖ್ ವಿವಾದ: ಚೀನಾವನ್ನು ಆರ್ಥಿಕವಾಗಿ ಸದೆಬಡೆಯಲು ಭಾರತದ ನಿರ್ಧಾರ

ಗಡಿ ವಿವಾದಕ್ಕೆ ಉತ್ತೇಜನ ನೀಡುವ ಮೂಲಕ ಚೀನಾ ತಾನೇ ಸಮಸ್ಯೆಗಳನ್ನು ಸೃಷ್ಟಿಸಿದೆ. ಲಡಾಖ್ ಘಟನೆಯ ನಂತರ ಬೀಜಿಂಗ್ ಅನ್ನು ಆರ್ಥಿಕವಾಗಿ ನೋಯಿಸಲು ಭಾರತ ಒಂದು ಹೆಜ್ಜೆ ಮುಂದಿದೆ.

Last Updated : Jun 18, 2020, 01:35 PM IST
ಲಡಾಖ್ ವಿವಾದ: ಚೀನಾವನ್ನು ಆರ್ಥಿಕವಾಗಿ ಸದೆಬಡೆಯಲು ಭಾರತದ ನಿರ್ಧಾರ title=

ನವದೆಹಲಿ: ಗಡಿ ವಿವಾದಕ್ಕೆ ಉತ್ತೇಜನ ನೀಡುವ ಮೂಲಕ ಚೀನಾ (China) ತಾನೇ ಸಮಸ್ಯೆಗಳನ್ನು ಸೃಷ್ಟಿಸಿದೆ. ಲಡಾಖ್ ಘಟನೆಯ ನಂತರ ಬೀಜಿಂಗ್ ಅನ್ನು ಆರ್ಥಿಕವಾಗಿ ಬಗ್ಗಿಸಲು ಭಾರತ ಒಂದು ಹೆಜ್ಜೆ ಮುಂದಿದೆ. ಹುವಾವೇ ಸೇರಿದಂತೆ ಚೀನಾದ ಕಂಪನಿಗಳಿಂದ ಅಪ್‌ಗ್ರೇಡ್ ಗೇರ್ ಪಡೆಯುವುದನ್ನು ಟೆಲಿಕಾಂ ಕಂಪನಿ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ಗೆ ಮೋದಿ ಸರ್ಕಾರ ನಿಷೇಧಿಸಿದೆ.

4 ಜಿ ತಂತ್ರಜ್ಞಾನ ಅಳವಡಿಕೆಗಾಗಿ ಬಿಎಸ್‌ಎನ್‌ಎಲ್ ಮತ್ತು ಮಹಾನಗರ ಟೆಲಿಫೋನ್ ನಿಗಮ್ ಲಿಮಿಟೆಡ್ (MTNL) ನೀಡಿರುವ ಟೆಂಡರ್ ಅನ್ನು ದೂರಸಂಪರ್ಕ ಇಲಾಖೆ ಶೀಘ್ರದಲ್ಲೇ ರದ್ದುಗೊಳಿಸಲಿದೆ ಮತ್ತು ಚೀನಾದ ಕಂಪನಿಗಳನ್ನು ಹೊರಗಿಡುವಂತೆ ನಿಯಮಗಳನ್ನು ಬದಲಾಯಿಸಲಾಗುವುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಚೀನಾದ ಕಂಪೆನಿಗಳಾದ ಹುವಾವೇ ಮತ್ತು ZTEಗೆ ಇದು ದೊಡ್ಡ ಹಿನ್ನಡೆಯಾಗಿದೆ. ಏಕೆಂದರೆ ಚೀನಾದ ಕಂಪನಿಗಳು ದೇಶದ 5 ಜಿ ನೆಟ್‌ವರ್ಕ್‌ಗೆ ಸಂಪರ್ಕ ಹೊಂದಿದ ಯೋಜನೆಗಳಿಂದ ದೂರವಿರುತ್ತವೆ ಎಂಬುದು ಸ್ಪಷ್ಟವಾಗುತ್ತದೆ.

ಎಚ್ಚರ! TikTok, Zoom ಸೇರಿದಂತೆ 50 ಚೈನೀಸ್ ಅಪ್ಲಿಕೇಶನ್‌ಗಳಿಂದ ದೇಶದ ಭದ್ರತೆಗೆ ಧಕ್ಕೆ

ಮಾಹಿತಿಯ ಪ್ರಕಾರ ಮೊಬೈಲ್ ವಲಯದಲ್ಲಿ ಚೀನೀ ಅವಲಂಬನೆಯನ್ನು ಕಡಿಮೆ ಮಾಡಲು ಸರ್ಕಾರ ಈಗ ಗಂಭೀರವಾಗಿ ಕಾರ್ಯನಿರ್ವಹಿಸುತ್ತಿದೆ. ಆದ್ದರಿಂದ ಬಿಎಸ್ಎನ್ಎಲ್ ಜೊತೆಗೆ ಖಾಸಗಿ ಕಂಪನಿಗಳು ಚೀನಾ ತಯಾರಿಸಿದ ಉತ್ಪನ್ನಗಳ ಬಳಕೆಯನ್ನು ಕಡಿಮೆ ಮಾಡಲು ಕೇಳಿಕೊಳ್ಳಲಾಗಿದೆ. 

ಚೀನಾಗೆ ಬಿಗ್ ಶಾಕ್: ಭಾರತದ ಪರವಾಗಿ ನಿಂತ ಆಸ್ಟ್ರೇಲಿಯ

ಒಂದು ಅಂದಾಜಿನ ಪ್ರಕಾರ ಭಾರತೀಯ ಟೆಲಿಕಾಂ ಉಪಕರಣಗಳ ವಾರ್ಷಿಕ ಮಾರುಕಟ್ಟೆ ಪ್ರಸ್ತುತ ಸುಮಾರು 12,000 ಕೋಟಿಗಳಷ್ಟಿದೆ, ಅದರಲ್ಲಿ ಚೀನಾದ ಕಂಪನಿಗಳು ಕಾಲು ಭಾಗದಷ್ಟು ಪಾಲನ್ನು ಹೊಂದಿವೆ. ಉಳಿದ ಮಾರುಕಟ್ಟೆಯು ಮುಖ್ಯವಾಗಿ ಸ್ವೀಡನ್‌ನ ಎರಿಕ್ಸನ್, ಫಿನ್‌ಲ್ಯಾಂಡ್‌ನ ನೋಕಿಯಾ ಮತ್ತು ಕೊರಿಯಾದ ಸ್ಯಾಮ್‌ಸಂಗ್ ಅನ್ನು ಒಳಗೊಂಡಿದೆ. ಭಾರತಿ ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ಯುರೋಪಿಯನ್ ಮಾರಾಟಗಾರರನ್ನು ಹೊರತುಪಡಿಸಿ ಹುವಾವೇ ಮತ್ತು ZTE ಜೊತೆ ಕೆಲಸ ಮಾಡುತ್ತದೆ ಮತ್ತು ರಿಲಯನ್ಸ್ ಜಿಯೋ ಸ್ಯಾಮ್‌ಸಂಗ್‌ನೊಂದಿಗೆ ಕೆಲಸ ಮಾಡುತ್ತದೆ.

ಗಡಿಯಲ್ಲಿ ವಾಯುಪಡೆ ಅಲರ್ಟ್: ಚೀನಾಕ್ಕೆ ಭಾರತದ ಖಡಕ್ ಸಂದೇಶ ರವಾನೆ

ನವೀಕರಣದಲ್ಲಿ ಚೀನಾದ ಉಪಕರಣಗಳನ್ನು ತಪ್ಪಿಸಲು ಟೆಲಿಕಾಂ ಸಚಿವಾಲಯವು ಬಿಎಸ್ಎನ್ಎಲ್, ಎಂಟಿಎನ್ಎಲ್ ಮತ್ತು ಇತರ ಅಂಗಸಂಸ್ಥೆಗಳನ್ನು ಕೇಳಿದೆ. ಇದಲ್ಲದೆ  ಭಾರತದಲ್ಲಿ ತಯಾರಾದ ಸರಕುಗಳ ಖರೀದಿಯನ್ನು ತಮ್ಮ ಆದ್ಯತೆಯನ್ನಾಗಿ ಮಾಡುವಂತೆ ಸಂಬಂಧಪಟ್ಟ ಎಲ್ಲಾ ಇಲಾಖೆಗಳಿಗೆ ಸಚಿವಾಲಯ ಸೂಚನೆ ನೀಡಿದ್ದು, ಇದರಿಂದ ಸ್ವಾವಲಂಬಿ ಭಾರತದ ದಿಕ್ಕಿನಲ್ಲಿ ಕ್ರಮಗಳನ್ನು ತೆಗೆದುಕೊಳ್ಳಬಹುದು. ಈ ರೀತಿಯಾಗಿ ಚೀನಾ ಕ್ರಮಗಳಿಗೆ ಭಾರತ ಪ್ರತಿಕ್ರಿಯಿಸಲು ಪ್ರಾರಂಭಿಸಿದೆ. ನಿಸ್ಸಂಶಯವಾಗಿ ಇಂತಹ ನಿರ್ಧಾರಗಳೊಂದಿಗೆ ಚೀನಾ ಮುಂದಿನ ದಿನಗಳಲ್ಲಿ ಭಾರಿ ಆರ್ಥಿಕ ನಷ್ಟವನ್ನು ಭರಿಸಬೇಕಾಗುತ್ತದೆ.

Trending News