ಕೊರೆಗಾಂವ್-ಭೀಮಾ ಹಿಂಸಾಚಾರ: ಇಂದು ಮಹಾರಾಷ್ಟ್ರ ಬಂದ್

ಬುಧವಾರ ಮಹಾರಾಷ್ಟ್ರದ ಉದ್ದಗಲಕ್ಕೂ ಬಂದ್ ಮಾಡಲು ದಲಿತ ನಾಯಕರು ಕರೆ ನೀಡಿದ್ದಾರೆ.

Last Updated : Jan 3, 2018, 08:48 AM IST
  • ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಮೊಮ್ಮಗ ಪ್ರಕಾಶ್ ಅಂಬೇಡ್ಕರ್ ಮಹಾರಾಷ್ಟ್ರ ಬಂದ್ಗೆ ಕರೆ ನೀಡಿದ್ದಾರೆ.
  • ರಾಜ್ಯದಲ್ಲಿ ಮರಾಠಿಗರು ಮತ್ತು ದಲಿತರ ನಡುವೆ ಯಾವುದೇ ಸಂಘರ್ಷವಿಲ್ಲ ಎಂಬುದನ್ನು ಪ್ರಕಾಶ್ ಅಂಬೇಡ್ಕರ್ ಸ್ಪಷ್ಟಪಡಿಸಿದ್ದಾರೆ.
  • ಹಿಂಸಾಚಾರದಲ್ಲಿ ಮೃತ ವ್ಯಕ್ತಿಯ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ ನೀಡಲಾಗುವುದು- ದೇವೇಂದ್ರ ಫಡ್ನವೀಸ್
ಕೊರೆಗಾಂವ್-ಭೀಮಾ ಹಿಂಸಾಚಾರ: ಇಂದು ಮಹಾರಾಷ್ಟ್ರ ಬಂದ್ title=

ಮುಂಬೈ: ಸೋಮವಾರ ಪುಣೆಯಲ್ಲಿ ನಡೆದ ಭೀಮಾ-ಕೊರೆಗಾಂವ್ ಯುದ್ಧದ 200 ನೇ ವಾರ್ಷಿಕೋತ್ಸವದ ಆಚರಣೆಯಲ್ಲಿ ನಡೆದ ಹಿಂಸಾಚಾರದ ವಿರುದ್ಧ ದಲಿತ ನಾಯಕರು ಬುಧವಾರ ಮಹಾರಾಷ್ಟ್ರಬಂದ್ ಗೆ ಕರೆ ನೀಡಿದ್ದಾರೆ.

ಪ್ರಕಾಶ್ ಅಂಬೇಡ್ಕರ್, ಬರೀಪಾ ಬಹುಜನ ಮಹಾಸಂಘದ ನಾಯಕ ಮತ್ತು ಬಿ.ಆರ್. ಅಂಬೇಡ್ಕರ್ ಅವರ ಮೊಮ್ಮಗ ಈ ಬಂದ್ಗೆ ಕರೆ ನೀಡಿದ್ದಾರೆ. ಹಿಂಸಾಚಾರವನ್ನು ತಡೆಗಟ್ಟುವಲ್ಲಿ ಸರ್ಕಾರದ "ವೈಫಲ್ಯ"ದ ವಿರುದ್ಧ ಪ್ರತಿಭಟಿಸಲು ಅವರು 'ಮಹಾರಾಷ್ಟ್ರ ಬಂದ್'ಗೆ ಕರೆ ನೀಡಿರುವುದಾಗಿ ತಿಳಿಸಿದ್ದಾರೆ.

ಪುಣೆನಲ್ಲಿ ಸೋಮವಾರ ನಡೆದ ಗಂಭೀರ ಹಿಂಸಾಚಾರದ ವಿರುದ್ಧ ದಲಿತ ಪ್ರತಿಭಟನೆಯ ರಾಜಧಾನಿ ಮುಂಬೈಗೆ ತಟ್ಟಿದೆ. ಚಳುವಳಿಗಾರರ ಆಕ್ರೋಶಕ್ಕೆ ಮುಂಬೈ ನಗರದ ಸಂಚಾರ ಅಸ್ತವ್ಯಸ್ತವಾಗಿದೆ.

ಇಂದಿನ ಮಹಾರಾಷ್ಟ್ರ ಬಂದ್ ಗೆ ಮಹಾರಾಷ್ಟ್ರ ಪ್ರಜಾಸತ್ತಾತ್ಮಕ ಒಕ್ಕೂಟ, ಎಡಪಂಥೀಯ ಸಂಘಟನೆಗಳು ಸೇರಿದಂತೆ ಹಲವು ಸಂಘ ಸಂಸ್ಥೆಗಳು ಸಾಥ್ ನೀಡಿವೆ. ಬಂದ್ ವೇಳೆ ಶಾಂತಿ ಕಾಪಾಡುವಂತೆ ಪ್ರಕಾಶ್ ಅಂಬೇಡ್ಕರ್ ಜನತೆಯಲ್ಲಿ ಮನವಿ ಮಾಡಿದ್ದಾರೆ. ಇದೇ ಸಂದರ್ಭದಲ್ಲಿ ರಾಜ್ಯದಲ್ಲಿ ಮರಾಠಿಗರು ಮತ್ತು ದಲಿತರ ನಡುವೆ ಯಾವುದೇ ಸಂಘರ್ಷವಿಲ್ಲ ಎಂಬುದನ್ನು ಅವರು ಸ್ಪಷ್ಟಪಡಿಸಿದ್ದಾರೆ.

ಪುಣೆ ಜಿಲ್ಲೆಯ ಭೀಮಾ-ಕೊರೆಗಾಂವ್ ಯುದ್ಧದ 200 ನೇ ವಾರ್ಷಿಕೋತ್ಸವದ ಆಚರಣೆಯಲ್ಲಿ ದಲಿತ ಗುಂಪುಗಳು ಮತ್ತು ಬಲಪಂಥೀಯ ಹಿಂದೂ ಸಂಘಟನೆಗಳ ಬೆಂಬಲಿಗರ ನಡುವಿನ ಘರ್ಷಣೆಗಳು ಒಬ್ಬ ಮನುಷ್ಯನನ್ನು ಬಲಿತೆಗೆದುಕೊಂಡಿತು.

ಪುಣೆ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಬಾಂಬೆ ಹೈಕೋರ್ಟ್ನ ನ್ಯಾಯಾಧೀಶರು ನ್ಯಾಯಾಂಗ ವಿಚಾರಣೆಯನ್ನು ಆದೇಶಿಸಿದ್ದಾರೆ. ಅಲ್ಲದೇ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್, ಅದೇ ಸಮಯದಲ್ಲಿ ಶಾಂತಿಗಾಗಿ ಮನವಿ ಮಾಡಿದ್ದಾರೆ. ಇದೇ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಫಡ್ನವೀಸ್ ಸೋಮವಾರ ಹಿಂಸಾಚಾರದ ಹಿಂದೆ ಪಿತೂರಿ ನಡೆದಿದೆ. ಆದರೆ ಅದನ್ನು ಖಚಿತಪಡಿಸಬೇಕಾಗಿದೆ ಎಂದು ಹೇಳಿದ್ದಾರೆ. ಮುಂದುವರೆದು ಮಾತನಾಡಿದ ಅವರು ಹಿಂಸಾಚಾರದಲ್ಲಿ ಮೃತ ಪಟ್ಟ ವ್ಯಕ್ತಿಯ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ ನೀಡಲಾಗುವುದು ಮತ್ತು ಅವರ ಸಾವಿನ ಬಗ್ಗೆ ಸಿಐಡಿ ತನಿಖೆ ನಡೆಸಲಿದೆ ಎಂದು ತಿಳಿಸಿದ್ದಾರೆ.

Trending News