6.20 ಕೋಟಿ ರೂ. ಬಾಕಿ ಪಾವತಿಸುವಂತೆ ರಜನಿಕಾಂತ್ ಪತ್ನಿಗೆ ಸುಪ್ರೀಂ ಆದೇಶ

ಕೊಚಡೈಯ್ಯನ್ ಚಿತ್ರದ ಹಕ್ಕು ಮಾರಾಟಕ್ಕೆ ಸಂಬಂಧಿಸಿದಂತೆ ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಅವರ ಪತ್ನಿ ಲತಾ ರಜನಿಕಾಂತ್ ಅವರಿಗೆ 6.20 ಕೋಟಿ ರೂ. ಪಾವತಿಸುವಂತೆ ಸುಪ್ರೀಂ ಆದೇಶಿಸಿದೆ. 

Last Updated : Feb 20, 2018, 07:02 PM IST
6.20 ಕೋಟಿ ರೂ. ಬಾಕಿ ಪಾವತಿಸುವಂತೆ ರಜನಿಕಾಂತ್ ಪತ್ನಿಗೆ ಸುಪ್ರೀಂ ಆದೇಶ title=
ಸಂಗ್ರಹ ಚಿತ್ರ

ನವ ದೆಹಲಿ : ಕೊಚಡೈಯ್ಯನ್ ಚಿತ್ರದ ಹಕ್ಕು ಮಾರಾಟಕ್ಕೆ ಸಂಬಂಧಿಸಿದಂತೆ ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಅವರ ಪತ್ನಿ ಲತಾ ರಜನಿಕಾಂತ್ ಅವರಿಗೆ 6.20 ಕೋಟಿ ರೂ. ಹಣವನ್ನು ಬಡ್ಡಿ ಸಮೇತ ಹನ್ನೆರಡು ವಾರಗಳೊಳಗೆ ಖಾಸಗಿ ಕಂಪನಿಯಾದ ಆಡ್ ಬ್ಯೂರೊ ಕಂಪನಿಗೆ ಪಾವತಿಸುವಂತೆ ಸುಪ್ರೀಂ ಕೋರ್ಟ್ ಮಂಗಳವಾರ ಆದೇಶಿಸಿದೆ.

ಕೊಚಡೈಯ್ಯನ್ ಚಿತ್ರದ ನಿರ್ಮಾಣ ನಂತರದ ಕೆಲಸಕ್ಕೆ ನೆರವಾಗಲು ಮತ್ತು ಚಲನಚಿತ್ರವನ್ನು ಪೂರ್ಣಗೊಳಿಸಲು 10 ಕೋಟಿ ರೂ. ಸಾಲ ನೀಡಿರುವುದಾಗಿ ಆರೋಪಿಸಿ 2016 ರಲ್ಲಿ ಆಡ್ ಬ್ಯೂರೊ ಕಂಪನಿ ಅರ್ಜಿ ಸಲ್ಲಿಸಿತ್ತು. ಆದಾಗ್ಯೂ, ಮಿಡಿಯಾ ಒನ್ ನಿರ್ದೇಶಕಿಯಾಗಿದ್ದ ಲತಾ ರಜನಿಕಾಂತ್ ಅವರು, ಆಡ್ ಬ್ಯೂರೋವನ್ನು ಸಂಪರ್ಕಿಸದೆ ಇರೋಸ್ ಇಂಟರ್ನ್ಯಾಷನಲ್ಗೆ ತಮಿಳುನಾಡು ವಿತರಣಾ ಹಕ್ಕುಗಳನ್ನು ಮಾರಾಟ ಮಾಡಿದ್ದರು. 

2014 ರಲ್ಲಿ ಬಿಡುಗಡೆಯಾದ ಐತಿಹಾಸಿಕ ಕಾಲ್ಪನಿಕ ಮಹಾಕಾವ್ಯದ ಹಕ್ಕುಗಳ ಮಾರಾಟದ ಸಂಬಂಧ ಆಡ್ ಬ್ಯೂರೊ ಅಡ್ವೆರ್ಟೈಸಿಂಗ್ ಪ್ರೈವೇಟ್ ಲಿಮಿಟೆಡ್ ಸಲ್ಲಿಸಿದ ರ್ಜಿಯನ್ನು ಆಲಿಸಿದ ಸುಪ್ರೀಂ ಕೋರ್ಟ್ ಜುಲೈ 16, 2016ರಂದು ಲತಾ ರಜನಿಕಾಂತ್ ಅವರಿಗೆ ನೋಟಿಸ್ ನೀಡಿತ್ತು. 

Trending News