ಲಕ್ನೋ: ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಸಮಾಜವಾದಿ ಪಕ್ಷ (Samajwadi Party) ಬಿಜೆಪಿಗೆ ಪ್ರಮುಖ ವಿರೋಧವಾಗಿದೆ ಎಂದು ಸೂಚಿಸಿರುವ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್(Yogi Adityanath) ವಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಇದನ್ನು ಮಹಾಭಾರತದ ‘ಕಲಿಯುಗ ಅವತಾರ’ವೆಂದು ಕರೆದಿರುವ ಅವರು ಹಿಂದಿನ ಅಖಿಲೇಶ್ ಯಾದವ್ ಸರ್ಕಾರದ ಅವಧಿಯಲ್ಲಿ ರಾಜ್ಯದ ಪ್ರತಿ ಜಿಲ್ಲೆಗಳಲ್ಲಿ ಗಲಭೆಗಳು ನಡೆದಿವೆ. ಅವರ ಆಡಳಿತದಲ್ಲಿ ಹಿಂದೂಗಳಿಗೆ ಕಿರುಕುಳ ನೀಡಲಾಗಿತ್ತು ಎಂದು ಆರೋಪಿಸಿದ್ದಾರೆ.
ಯುಪಿಯಲ್ಲಿ ವಿರೋಧ ಪಕ್ಷಗಳು ಭಗವಾನ್ ರಾಮನ ವಿರುದ್ಧವಾಗಿವೆ ಎಂದು ಆರೋಪಿಸಿರುವ ಆದಿತ್ಯನಾಥ್(Yogi Adityanath), ‘ಇಂತಹ ರಾಮದ್ರೋಹಿಗಳು ಕೇವಲ ನಂಬಿಕೆಗಷ್ಟೇ ಹಾನಿಯುಂಟುಮಾಡುವುದಲ್ಲದೆ, ಸಾಮಾಜಿಕ ಸಂರಚನೆಗೆ ಧಕ್ಕೆಯುಂಟು ಮಾಡುವುದರ ಜೊತೆಗೆ ಅಭಿವೃದ್ಧಿಗೂ ಅಡ್ಡಿಪಡಿಸುತ್ತಿದ್ದಾರೆ. ಇವರ ಆಳ್ವಿಕೆಯಲ್ಲಿ ರಾಜ್ಯವನ್ನು ಗಲಭೆಯ ಬೆಂಕಿಗೆ ತಳ್ಳಿದ್ದರು. ರಾಮನ ಹಿತೈಷಿಗಳಲ್ಲದವರು ಎಂದಿಗೂ ನಿಮ್ಮ ಹಿತೈಷಿಗಳಾಗುವುದಿಲ್ಲ’ ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ: Ration Card: ಪಡಿತರ ಚೀಟಿ ಹೊಂದಿದವರಿಗೆ ಉಚಿತ ಸಿಗಲಿದೆ ಪಡಿತರ! ಎಲ್ಲಿ, ಯಾವಾಗ ಮತ್ತು ಹೇಗೆ? ಇಲ್ಲಿದೆ ವಿವರ
ಬಿಜೆಪಿ(BJP) ಹಿಂದುಳಿದ ವರ್ಗಗಳ ಮೋರ್ಚಾ ಆಯೋಜಿಸಿದ್ದ ವಿಶ್ವಕರ್ಮ ಸಮಾಜಕ್ಕಾಗಿ ಸಮಾಜಿಕ ಪ್ರತಿನಿಧಿ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿರುವ ಆದಿತ್ಯನಾಥ್, ‘ಭಯೋತ್ಪಾದಕರನ್ನು ರಕ್ಷಿಸುವ, ಗಲಭೆಕೋರರನ್ನು ಅಪ್ಪಿಕೊಳ್ಳುವ ರಾಮ(Shri Ram) ದ್ರೋಹಿಗಳಿಂದ ಅಂತರ ಕಾಯ್ದುಕೊಳ್ಳುವುದು ಈಗಿನ ಹಾಗೂ ಮುಂದಿನ ಪೀಳಿಗೆಯ ಉತ್ತಮ ಭವಿಷ್ಯಕ್ಕೆ ಅತ್ಯಗತ್ಯ’ ಅಂತಾ ಹೇಳಿದ್ದಾರೆ.
ಎಸ್ಪಿ(Samajwadi Party) ನಾಯಕರನ್ನು ಹೆಸರಿಸದೆ ಪರೋಕ್ಷವಾಗಿ ವಾಗ್ದಾಳಿ ನಡೆಸಿರುವ ಆದಿತ್ಯನಾಥ್, ‘2012-17ರ ಅವಧಿಯಲ್ಲಿ ಇಡೀ ಕುಟುಂಬವೇ ಲೂಟಿಯಲ್ಲಿ ತೊಡಗಿತ್ತು ಎಂದು ಆರೋಪಿಸಿದ್ದಾರೆ. ಈ ಪಕ್ಷದವರು ಮಹಾಭಾರತದ ಎಲ್ಲಾ ಸಂಬಂಧಗಳನ್ನು ಹೊಂದಿದ್ದರು. ಅಪ್ಪ, ಚಿಕ್ಕಪ್ಪ, ಅಜ್ಜ, ಸೋದರಳಿಯರು ಹೀಗೆ ಎಲ್ಲರೂ ಮಹಾಭಾರತದಲ್ಲಿನ ಪಾತ್ರಗಳಿಗೆ ಸಂಬಂಧ ಹೊಂದಿದ್ದಾರೆ. ಜನರಿಗೆ ಸುಳ್ಳು ಹೇಳುವ ಮೂಲಕ ಲೂಟಿ ಹೊಡೆಯುವುದೇ ಇವರ ಉದ್ದೇಶವಾಗಿತ್ತು ಅಂತಾ ಟೀಕಿಸಿದ್ದಾರೆ.
ಹಿಂದಿನ ಆಡಳಿತಾವಧಿಯಲ್ಲಿ ಯುಪಿ(Uttar Pradesh)ಯ ಪ್ರತಿ ಜಿಲ್ಲೆಗಳಲ್ಲಿ ಗಲಭೆಗಳು ಸಂಭವಿಸಿದವು. ಹಿಂದೂಗಳಿಗೆ ಕಿರುಕುಳ ನೀಡಲಾಗಿತ್ತು. ಈ ಬಗ್ಗೆ ಹಿಂದೂಗಳು ದೂರು ನೀಡಲು ಹೋದರೆ, ಅವರ ವಿರುದ್ಧವೇ ಪ್ರಕರಣ ದಾಖಲಿಸಲಾಗಿತ್ತು. ಪ್ರಸ್ತುತ ನಮ್ಮ ಸರ್ಕಾರದಡಿ ಗಲಭೆಗಳನ್ನು ಮಾಡಲು ಯಾರಿಗೂ ಧೈರ್ಯವಿಲ್ಲವೆಂದು ಯೋಗಿ ವಿಪಕ್ಷಗಳ ವಿರುದ್ಧ ಕುಟುಕಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ