ಕಾರ್ಗಿಲ್ ವಿಜಯ್ ದಿವಸ್: ಹಸಿವಿನಿಂದಿದ್ದ ಸೈನಿಕರಿಗೆ ಐಸ್ ಕೂಡ ವಿಷವಾಗಿತ್ತು!

ಸೈನಿಕರು ತಮ್ಮ ಹಸಿವು ಮತ್ತು ಬಾಯಾರಿಕೆಯನ್ನು ನೀಗಿಸಿಕೊಳ್ಳಲು, ಐಸ್ ಮೇಲೆ ಕೈ ಹಾಕಿದಾಗ ಕೈಗಳು ಒಮ್ಮೆಗೆ ಸ್ಥಗಿತಗೊಂಡವು. ಇದಕ್ಕೆ ಕಾರಣವೆಂದರೆ ಮಂಜುಗಡ್ಡೆಯ ಮೇಲೆ ಹೆಪ್ಪುಗಟ್ಟಿದ್ದ ಬಂದೂಕು ಮತ್ತು ಮದ್ದುಗುಂಡುಗಳು.

Last Updated : Jul 26, 2018, 01:59 PM IST
ಕಾರ್ಗಿಲ್ ವಿಜಯ್ ದಿವಸ್: ಹಸಿವಿನಿಂದಿದ್ದ ಸೈನಿಕರಿಗೆ ಐಸ್ ಕೂಡ ವಿಷವಾಗಿತ್ತು! title=

ನವದೆಹಲಿ: ನಮ್ಮ ರಕ್ಷಣೆಗಾಗಿ ದೇಶದ ಗಡಿ ಭಾಗಗಳಲ್ಲಿ ಹಗಲು-ರಾತ್ರಿ ಎನ್ನದೆ ಶ್ರಮಿಸುತ್ತಿರುವ ಸೈನಿಕರ ಕಷ್ಟ ಹಾಗೂ ಯುದ್ಧದ ಸಮಯದಲ್ಲಿನ ಅಹಿತಕರ ಘಟನೆಗಳ ಬಗ್ಗೆ ಸಾಮಾನ್ಯವಾಗಿ ಯಾರೂ ಚಿಂತಿಸುವುದಿಲ್ಲ ಎನ್ನುವುದಕ್ಕೆ ಕಾರ್ಗಿಲ್ ಯುದ್ಧ ಒಂದು ನಿದರ್ಶನ. ಕಾರ್ಗಿಲ್ ವಿಜಯ್ ದಿನವಾದ ಇಂದು ಕಾರ್ಗಿಲ್ ಹೋರಾಟ ಕಥನದ ಬಗ್ಗೆ ನಾವಿಂದು ಹೇಳ ಹೊರಟಿದ್ದೇವೆ.

ಶತ್ರುಗಳ ವಿರುದ್ಧ ಸತತವಾಗಿ ಹೋರಾಡುತ್ತಿದ್ದ ರಜಪುತಾನ ರೈಫಲ್ಸ್ ಅಧಿಕಾರಿಗಳು ಮತ್ತು ಸೈನಿಕರಿಗೆ ಕಳೆದ ಮೂರು ದಿನಗಳಿಂದ ತಾವು ಏನು ತಿಂದಿಲ್ಲ ಎಂಬುದರ ಅರಿವೂ ಇರಲಿಲ್ಲ. ಪಾಕಿಸ್ತಾನಿ ಸೈನ್ಯವನ್ನು ಹಿಮ್ಮೆಟ್ಟಿಸಿ, ಟೋಲೋಲಿಂಗ್ ಶಿಖರಗಳ ಮೇಲೆ ಭಾರತದ ತ್ರಿವರ್ಣ ಧ್ವಜವನ್ನು  ಹಾರಿಸಿದಾಗ ಭಾರತೀಯ ಸೈನಿಕರ ಮುಖದಲ್ಲಿ ಮಂದಹಾಸ ಮೂಡಿತು.

ಕಾರ್ಗಿಲ್ ಯುದ್ಧದಲ್ಲಿ ರಜಪುತಾನ ರೈಫಲ್ಸ್ ನೊಂದಿಗೆ ಸೆಣಸಾಡುತ್ತಿದ್ದ ಸೈನಿಕರಿಗೆ ಕಠಿಣ ಪರೀಕ್ಷೆಯು ಮುಗಿದಿರಲಿಲ್ಲ. ಸೈನಿಕರು ತಮ್ಮ ಬಾಯಾರಿಕೆಯನ್ನು ನಿವಾರಿಸಿಕೊಳ್ಳಲು ಬ್ಯಾಗ್ ನಿಂದ ನೀರಿನ ಬಾಟಲ್ ಅನ್ನು ತೆಗೆದು ನೋಡಿದರೆ ಅದರಲ್ಲಿ ಒಂದು ಹನಿ ನೀರೂ ಇರಲಿಲ್ಲ. ಆಗ ಸೈನಿಕರಿಗೆ ತಮ್ಮ ಹಸಿವು ಮತ್ತು ಬಾಯಾರಿಕೆಯನ್ನು ನೀಗಿಸಲು ಉಳಿದಿದ್ದು ಒಂದೇ ದಾರಿ. ಅದು ಟೋಲೋಲಿಂಗ್ ಶಿಖರಗಳಲ್ಲಿ ಸಂಗ್ರಹವಾಗಿದ್ದ ಹಿಮ.

ಟೋಲೋಲಿಂಗ್ ವಿಜಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಜಬಾಂಜ್ ಕ್ಯಾಪ್ಟನ್ ಅಖಿಲೇಶ್ ಸಕ್ಸೇನಾ ಆ ಕ್ಷಣಗಳನ್ನು ಹಂಚಿಕೊಂಡಿದ್ದಾರೆ. ಸೈನಿಕರು ತಮ್ಮ ಹಸಿವು ಮತ್ತು ಬಾಯಾರಿಕೆಯನ್ನು ನೀಗಿಸಿಕೊಳ್ಳಲು, ಐಸ್ ಮೇಲೆ ಕೈ ಹಾಕಿದಾಗ ಕೈಗಳು ಒಮ್ಮೆಗೆ ಸ್ಥಗಿತಗೊಂಡವು. ಇದಕ್ಕೆ ಕಾರಣವೆಂದರೆ ಮಂಜುಗಡ್ಡೆಯ ಮೇಲೆ ಹೆಪ್ಪುಗಟ್ಟಿದ್ದ ಬಂದೂಕುಗಳು ಮತ್ತು ಮದ್ದುಗುಂಡುಗಳು. ವಾಸ್ತವ ಸಂಗತಿಯೇನೆಂದರೆ, ನಿರಂತರವಾಗಿ ನಡೆಯುತ್ತಿದ್ದ ಗುಂಡಿನ ದಾಳಿಯಿಂದಾಗಿ ಹಿಮದ ಮೇಲ್ಮೈ ಸುಮಾರು ಒಂದು ಅಡಿವರೆಗೂ ಬಂದೂಕು ಸಿಡಿಮದ್ದುಗಳಿಂದ ಆವರಿಸಿತ್ತು. 

ಈ ಸಂದರ್ಭದಲ್ಲಿ ಒಂದು ವೇಳೆ ಯಾವುದೇ ವ್ಯಕ್ತಿ ಈ ಹಿಮವನ್ನು ಸೇವಿಸಿದ್ದರೆ, ಮದ್ದು ಗುಂಡುಗಳ ವಿಷ ಅವನ ಜೀವನವನ್ನೇ ಕೊನೆಗೊಳಿಸುತ್ತಿತ್ತು. ಇದರ ಹೊರತಾಗಿಯೂ, ಇನ್ಫೋರ್ಸ್ಮೆಂಟ್ ತಲುಪುವವರೆಗೂ ಹಿಮವು ಸೈನಿಕರಿಗೆ ಬದುಕುಳಿಯುವ ಏಕೈಕ ಮಾರ್ಗವಾಗಿತ್ತು. ಸೈನಿಕರು ತಮ್ಮ ಹಸಿವು ಮತ್ತು ಬಾಯಾರಿಕೆಯನ್ನು ನೀಗಿಸಿಕೊಳ್ಳಲು ಹಿಮವನ್ನು ಅಗೆಯಲು ಪ್ರಾರಂಭಿಸಿದರು. ಹಿಮವನ್ನು ಸುಮಾರು ಎರಡು ಅಡಿಗಳಷ್ಟು ಅಗೆಯಬೇಕಾಯಿತು.

ಟೋಲೋಲಿಂಗ್ ನಲ್ಲಿದ್ದ ಸೈನ್ಯದ ಎಲ್ಲಾ ಅಧಿಕಾರಿಗಳು ಮತ್ತು ಸೈನಿಕರು ಆ ಮಂಜುಗೆಡ್ಡೆಯನ್ನು ಕರಗಿಸಿ ನೀರು ಕುಡಿಯುವ ಮೂಲಕ ತಮ್ಮ ಹಸಿವು ಮತ್ತು ಬಾಯಾರಿಕೆಯನ್ನು ನೀಗಿಸಿಕೊಂಡರು. ದೇಶದ ರಕ್ಷಣೆಗಾಗಿ ತಮ್ಮ ಜೀವವನ್ನೂ ಲೆಕ್ಕಿಸದೆ ಹೋರಾಡುವ ಸೈನಿಕರು ತಮ್ಮ ತ್ಯಾಗ ಮತ್ತು ಧೈರ್ಯದಿಂದಲೇ 'ಪ್ರಶಂಸೆ'ಗೆ ಪಾತ್ರರಾಗುತ್ತಾರೆ. 

Trending News