ಕಾನ್ಪುರ: ಕಾನ್ಪುರದಲ್ಲಿ ರೈಲ್ವೆ ಬೋಗಿ ಭಾಗಗಳನ್ನು ತಯಾರಿಸುವ ಕಾರ್ಖಾನೆಯಲ್ಲಿ ಸಂಭವಿಸಿದ ಸ್ಫೋಟದಲ್ಲಿ ಓರ್ವ ಕಾರ್ಮಿಕ ಸಾವನ್ನಪ್ಪಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಪೊಲೀಸರು ಮತ್ತು ಅಗ್ನಿಶಾಮಕ ದಳ ಸ್ಥಳಕ್ಕೆ ತಲುಪಿದ್ದಾರೆ.
Kanpur: 1 dead, 4 critically injured after a boiler at a factory in Panki exploded. Injured admitted to hospital. The factory deals with construction of parts of train pic.twitter.com/ofavmnByCo
— ANI UP (@ANINewsUP) August 13, 2019
ಕಾರ್ಖಾನೆಯಲ್ಲಿನ ಪ್ಲಾಂಟ್ ವೊಂದರ ಬಾಯ್ಲರ್ ಸ್ಫೋಟದಿಂದಾಗಿ ಅಥವಾ ಏಕಕಾಲದಲ್ಲಿ ಹಲವಾರು ಗ್ಯಾಸ್ ಸಿಲಿಂಡರ್‌ಗಳ ಸ್ಫೋಟದಿಂದಾಗಿ ಸ್ಫೋಟ ಸಂಭವಿಸಿದೆಯೇ ಎಂಬ ಬಗ್ಗೆ ಇನ್ನೂ ಸಂದೇಹವಿದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಅಪಘಾತದ ಬಗ್ಗೆ ಮಾಹಿತಿ ಪಡೆದ ಕೂಡಲೇ ಪೊಲೀಸರು ಮತ್ತು ಅಗ್ನಿಶಾಮಕ ದಳದವರು ಸ್ಥಳಕ್ಕೆ ತಲುಪಿ ಪರಿಹಾರ ಕಾರ್ಯಗಳನ್ನು ಪ್ರಾರಂಭಿಸಿದರು. ಪೊಲೀಸರು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ರೈಲ್ವೆ ಗುತ್ತಿಗೆ ಪಡೆದ ಖಾಸಗಿ ವಲಯದ ಕಾರ್ಖಾನೆಯಾದ ಕಾನ್ಪುರದ ಪಂಕಿ ಇಂಡಸ್ಟ್ರಿಯಲ್ ಎಸ್ಟೇಟ್ ನಲ್ಲಿ ಈ ಘಟನೆ ಸಂಭವಿಸಿದೆ.
ರೈಲ್ವೆ ಬೋಗಿಗಳ ಫ್ರೇಮ್ ಮತ್ತು ಇತರ ಭಾಗಗಳನ್ನು ಈ ಕಾರ್ಖಾನೆಯಲ್ಲಿ ತಯಾರಿಸಲಾಗುತ್ತದೆ. ಇದನ್ನು ವೆಡ್ ಸಾಸೊಮೆಕಾನಿಕಾ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಹೆಸರಿನಿಂದ ನಿರ್ವಹಿಸಲಾಗುತ್ತಿದೆ. ಗಾಯಗೊಂಡ ಎಲ್ಲರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರೆದಿದೆ.
ಅಪಘಾತದ ನಂತರ ಕಾರ್ಮಿಕರಲ್ಲಿ ಒಂದು ರೀತಿಯ ಭೀತಿ ಮನೆಮಾಡಿದೆ. ಘಟನೆಯ ಬಗ್ಗೆ ಕಾರ್ಖಾನೆಯ ಮಾಲೀಕರು ಮತ್ತು ಪೊಲೀಸರು ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.