ಮಹಾರಾಷ್ಟ್ರದ ಹಂಗಾಮಿ ಸ್ಪೀಕರ್ ಆಗಿ ಕಾಳಿದಾಸ್ ಕೋಲಾಂಬ್ಕರ್ ನೇಮಕ

ಮಹಾರಾಷ್ಟ್ರದ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯರಿ ಅವರು ಮಂಗಳವಾರ ಬಿಜೆಪಿ ಶಾಸಕ ಕಾಳಿದಾಸ್ ಕೋಲಾಂಬ್ಕರ್ ಅವರನ್ನು ವಿಧಾನಸಭೆಯ ಹಂಗಾಮಿ ಸ್ಪೀಕರ್ ಆಗಿ ನೇಮಕ ಮಾಡಿದ್ದಾರೆ.

Last Updated : Nov 26, 2019, 06:36 PM IST
ಮಹಾರಾಷ್ಟ್ರದ ಹಂಗಾಮಿ ಸ್ಪೀಕರ್ ಆಗಿ ಕಾಳಿದಾಸ್ ಕೋಲಾಂಬ್ಕರ್ ನೇಮಕ title=
Photo courtesy: ANI

ನವದೆಹಲಿ: ಮಹಾರಾಷ್ಟ್ರದ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯರಿ ಅವರು ಮಂಗಳವಾರ ಬಿಜೆಪಿ ಶಾಸಕ ಕಾಳಿದಾಸ್ ಕೋಲಾಂಬ್ಕರ್ ಅವರನ್ನು ವಿಧಾನಸಭೆಯ ಹಂಗಾಮಿ ಸ್ಪೀಕರ್ ಆಗಿ ನೇಮಕ ಮಾಡಿದ್ದಾರೆ.

'ವಿಧಾನಸಭೆಯ  ಹಂಗಾಮಿ ಸ್ಪೀಕರ್ ಆಗಿ ರಾಜ್ಯಪಾಲರು ಕೋಲಾಂಬ್ಕರ್ ಅವರಿಗೆ ಪ್ರಮಾಣ ವಚನ ಭೋದಿಸಿದ್ದಾರೆ. ನಾಳೆ ಬೆಳಗ್ಗೆ 8 ರಿಂದ ಆರಂಭವಾಗಲಿರುವ ವಿಧಾನಸಭೆ ಅಧಿವೇಶನದಲ್ಲಿ ಉಳಿದ 287 ಶಾಸಕರಿಗೆ ಕೋಲಾಂಬ್ಕರ್ ಪ್ರಮಾಣ ವಚನ ಭೋದಿಸಲಿದ್ದಾರೆ" ಎಂದು ರಾಜ್ ಭವನದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

ನಾಳೆ ದೇವೇಂದ್ರ ಫಡ್ನವಿಸ್ ಸರ್ಕಾರದ ವಿಶ್ವಾಸ ಮತ ಪರೀಕ್ಷೆಗೆ ಸುಪ್ರೀಂಕೋರ್ಟ್ ಆದೇಶಿಸಿತ್ತು, ಆದರೆ ನಂತರ ನಡೆದ ನಾಟಕೀಯ ಬೆಳವಣಿಗೆ ಹಿನ್ನಲೆಯಲ್ಲಿ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಇದಾದ ನಂತರ ಈಗ ರಾಜ್ಯಪಾಲರು ಹಂಗಾಮಿ ಸ್ಪೀಕರ್ನ್ನು ನೇಮಕ ಮಾಡಿದ್ದಾರೆ. 
 

Trending News