ಯೋಗಿ ಆದಿತ್ಯನಾಥ್ ವಿರುದ್ಧ ಆಕ್ಷೇಪಾರ್ಹ ಪೋಸ್ಟ್; ಪತ್ರಕರ್ತ ಅರೆಸ್ಟ್

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ಟ್ವಿಟ್ಟರ್ ನಲ್ಲಿ ಆಕ್ಷೇಪಾರ್ಹ ಪೋಸ್ಟ್ ಹಾಕಿದ್ದ ದೆಹಲಿ ಮೂಲದ ಪತ್ರಕರ್ತನನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ. 

Last Updated : Jun 9, 2019, 12:29 PM IST
ಯೋಗಿ ಆದಿತ್ಯನಾಥ್ ವಿರುದ್ಧ ಆಕ್ಷೇಪಾರ್ಹ ಪೋಸ್ಟ್; ಪತ್ರಕರ್ತ ಅರೆಸ್ಟ್ title=

ನವದೆಹಲಿ: ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ಟ್ವಿಟ್ಟರ್ ನಲ್ಲಿ ಆಕ್ಷೇಪಾರ್ಹ ಪೋಸ್ಟ್ ಹಾಕಿದ್ದ ದೆಹಲಿ ಮೂಲದ ಪತ್ರಕರ್ತನನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ. 

ಪ್ರಶಾಂತ್ ಕನೋಜಿಯಾ ಎಂಬಾತನೇ ಬಂಧಿತ ಆರೋಪಿಯಾಗಿದ್ದು, ಈತ ಹವ್ಯಾಸಿ ಪತ್ರಕರ್ತ ಎನ್ನಲಾಗಿದೆ. ಈತ ತನ್ನ ಟ್ವಿಟರ್​ ಹಾಗೂ ಫೇಸ್​ಬುಕ್​ನಲ್ಲಿ ಮಹಿಳೆಯೋರ್ವಳು ಹಲವು ಮಾಧ್ಯಮಗಳೊಂದಿಗೆ ಮಾತನಾಡುತ್ತ ತಾನು ಯೋಗಿ ಆದಿತ್ಯನಾಥ್​ ಅವರಿಗೆ ಮದುವೆ ಪ್ರಪೋಸಲ್​ ಕಳಿಸಿದ್ದಾಗಿ ಹೇಳುತ್ತಿರುವ ವೀಡಿಯೋವೊಂದನ್ನು ಶೇರ್ ಮಾಡಿದ್ದ ಹಿನ್ನೆಲೆಯಲ್ಲಿ ಲಕ್ನೌ ಪೊಲೀಸರು ಪ್ರಶಾಂತ್ ನನ್ನು ದೆಹಲಿಯ ನಿವಾಸದಿಂದಲೇ ಬಂಧಿಸಿ, ಲಕ್ನೌಗೆ ಕರೆದೊಯ್ದಿದ್ದಾರೆ.

ಘಟನೆ ಬಗ್ಗೆ ಹಜರತ್ ಗಂಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಿಚಾರಣೆ ಸಂದರ್ಭದಲ್ಲಿ ಆತ ತಪ್ಪನ್ನು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. 
 

Trending News