ತನ್ನ ಪ್ಲಾನ್ ಗಳಲ್ಲಿ ಭಾರಿ ಬದಲಾವಣೆ ಮಾಡಿದ Jio Fiber ನಿಂದ 30 ದಿನಗಳ ಉಚಿತ ಟ್ರಯಲ್ ಕೊಡುಗೆ

ರಿಲಯನ್ಸ್ ಮಾಲೀಕತ್ವದ ಜಿಯೋ ತನ್ನ ಜಿಯೋ ಫೈಬರ್ ಟ್ಯಾರಿಫ್ ಪ್ಲಾನ್ ಗಳಲ್ಲಿ ಭಾರಿ ಬದಲಾವಣೆ ಮಾಡಿದೆ

Last Updated : Sep 1, 2020, 12:15 PM IST
ತನ್ನ ಪ್ಲಾನ್ ಗಳಲ್ಲಿ ಭಾರಿ ಬದಲಾವಣೆ ಮಾಡಿದ Jio Fiber ನಿಂದ 30 ದಿನಗಳ ಉಚಿತ ಟ್ರಯಲ್ ಕೊಡುಗೆ title=

ವದೆಹಲಿ: ರಿಲಯನ್ಸ್ ಜಿಯೋ ತನ್ನ ಜಿಯೋ ಫೈಬರ್‌ ಸೇವೆಯ ಟ್ಯಾರಿಫ್ ಪ್ಲಾನ್ ಗಳಲ್ಲಿ ಭಾರಿ  ಬದಲಾವಣೆ ಮಾಡಿದೆ. ಅನಿಯಮಿತ ಇಂಟರ್ನೆಟ್, 399 ರೂಗಳಿಂದ ಪ್ರಾರಂಭವಾಗುವ ಹೊಸ ಯೋಜನೆಗಳು, ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ 12 ಟಾಪ್ ಒಟಿಟಿ ಅಪ್ಲಿಕೇಶನ್‌ಗಳ ಚಂದಾದಾರಿಕೆ ಇದರಲ್ಲಿ ಶಾಮೀಲಾಗಿವೆ. ಇದಲ್ಲದೆ, ಜಿಯೋ ಸಹ 30 ದಿನಗಳವರೆಗೆ ಉಚಿತ ಟ್ರಯಲ್ ಕೂಡ ನೀಡುತ್ತಿದೆ. ಜಿಯೋ ಹೊಸ ಯೋಜನೆಗಳಲ್ಲಿ ರೂ 399, 699 ರೂ, 999 ಮತ್ತು 1499 ರೂ. ಶಾಮೀಲಾಗಿವೆ.

ಉಚಿತ ಟ್ರಯಲ್ ನ ಲಾಭ
ಜಿಯೋ ಫೈಬರ್‌ನಲ್ಲಿ 30 ದಿನಗಳ ಉಚಿತ ಟ್ರಯಲ್ ನೀಡುತ್ತಿದ್ದು, ಈ ಉಚಿತ ಟ್ರಯಲ್ ನಲ್ಲಿ 150 ಎಮ್‌ಬಿಪಿಎಸ್ ಅನಿಯಮಿತ ಇಂಟರ್ನೆಟ್ ಸಹ ಲಭ್ಯವಿರುತ್ತದೆ. ಈ ಅವಧಿಯಲ್ಲಿ 4 ಕೆ ಸೆಟಪ್ ಬಾಕ್ಸ್‌ ಟಾಪ್ 10 ಪೇಡ್ ಒಟಿಟಿ ಅಪ್ಲಿಕೇಶನ್‌ ಗಳೊಂದಿಗೆ ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ ಲಭಿಸಲಿದೆ. ಇದರೊಂದಿಗೆ ಉಚಿತ ಧ್ವನಿ ಕರೆ ಮಾಡುವ ಸೌಲಭ್ಯವೂ ಇದೆ. ಒಂದು ವೇಳೆ ಗ್ರಾಹಕರಿಗೆ ಸೇವೆ ಇಷ್ಟವಾಗದೆ ಹೋದಲ್ಲಿ ಕಂಪನಿಯು ಯಾವುದೇ ಚಕಾರ್ ಎತ್ತದೆ ಸೇವೆಯನ್ನು ಹಿಂಪಡೆಯುವುದಾಗಿ ಹೇಳಿದೆ. ಈ ಉಚಿತ ಟ್ರಯಲ್ ಎಲ್ಲಾ ಹೊಸ ಗ್ರಾಹಕರಿಗೆ 30 ದಿನಗಳ ಅವಧಿಗೆ ಸಿಗಲಿದೆ.

ಇದಕ್ಕೆ ಸಂಬಂಧಿಸಿದಂತೆ ಮಾಧ್ಯಮ ಪ್ರಕಟಣೆ ಹೊರಡಿಸಿರುವ ಕಂಪನಿ, ಹೊಸದಾಗಿ ಜಿಯೋ ಫೈಬರ್ ಸೇವೆಗೆ ನೋಂದಣಿ ಮಾಡಿಕೊಳ್ಳುವ ಗ್ರಾಹಕರು ಸೆಪ್ಟೆಂಬರ್ 1 ರಿಂದ ಸೇವೆ ಸಕ್ರೀಯಗೊಳಿಸಿದ ಬಳಿಕ  30 ದಿನಗಳ ಉಚಿತ ಟ್ರಯಲ್ ಪಡೆಯಲಿದ್ದಾರೆ ಎಂದು ಹೇಳಿದೆ. ಕಂಪನಿಯು ತನ್ನ ಅಸ್ತಿತ್ವದಲ್ಲಿರುವ ಗ್ರಾಹಕರಿಗೆ ಕೆಲವು ವಿಶೇಷ ಪ್ರಯೋಜನಗಳನ್ನು ಸಹ ನೀಡುತ್ತಿದೆ. ಇದರ ಅಡಿಯಲ್ಲಿ, ಅಸ್ತಿತ್ವದಲ್ಲಿರುವ ಎಲ್ಲಾ ಜಿಯೋ ಫೈಬರ್ ಗ್ರಾಹಕರ ಯೋಜನೆಗಳನ್ನು ನೂತನ ಟ್ಯಾರಿಫ್ ಪ್ಲಾನ್ ಗಳಿಗೆ ಅನುಗುಣವಾಗಿ ನವೀಕರಿಸಲಾಗುವುದು ಎಂದು ಕಂಪನಿ ಹೇಳಿದೆ. ಇದಲ್ಲದೆ , ಆಗಸ್ಟ್ 15 ಮತ್ತು ಆಗಸ್ಟ್ 31 ರ ನಡುವೆ ಜಿಯೋ ಫೈಬರ್ ಸೇವೆ ಪಡೆದ  ಯಾವುದೇ ಹೊಸ ಜಿಯೋ ಫೈಬರ್ ಗ್ರಾಹಕರು ಮೈಜಿಯೊದಲ್ಲಿ ವೌಚರ್ ರೂಪದಲ್ಲಿ 30 ದಿನಗಳ ಉಚಿತ ಟ್ರಯಲ್ ಪ್ರಯೋಜನವನ್ನು ಪಡೆಯಲಿದ್ದಾರೆ.

ಹೊಸ ಪ್ಲಾನ್ ಗಳ ವಿವರ ಇಂತಿದೆ
ಜಿಯೋ ಫೈಬರ್‌ನ 399 ರೂಗಳ ಹೊಸ ಯೋಜನೆಯಲ್ಲಿ, ನೀವು 30 ಎಮ್‌ಬಿಪಿಎಸ್ ವೇಗದಲ್ಲಿ ಅನಿಯಮಿತ ಇಂಟರ್ನೆಟ್, ಅನಿಯಮಿತ ಧ್ವನಿ ಕರೆ ಪ್ರಯೋಜನವನ್ನು ಪಡೆಯಬಹುದಾಗಿದೆ. ಇದೆ ವೇಳೆ 699 ರೂಗಳ ಜಿಯೋ ಫೈಬರ್ ಯೋಜನೆಯು 100 ಎಂಬಿಪಿಎಸ್ ವೇಗದೊಂದಿಗೆ ಅನಿಯಮಿತ ಇಂಟರ್ನೆಟ್ ಮತ್ತು ಅನಿಯಮಿತ ಧ್ವನಿ ಕರೆಗಳ ಪ್ರಯೋಜನನೀಡುತ್ತದೆ.

999 ರೂ ಯೋಜನೆಯು ಅನಿಯಮಿತ ಇಂಟರ್ನೆಟ್ ಅನ್ನು 150 ಎಮ್‌ಬಿಪಿಎಸ್ ವೇಗ, ಅನಿಯಮಿತ ಧ್ವನಿ ಕರೆಗಳ ಪ್ರಯೋಜನ ನೀಡಲಿದೆ. 1000 ರೂ 11 ಒಟಿಟಿ ಅಪ್ಲಿಕೇಶನ್‌ಗಳಿಗೆ ಚಂದಾದಾರಿಕೆ ಪ್ರಯೋಜನಗಳನ್ನು ನೀಡುತ್ತದೆ. ಇದಲ್ಲದೆ, 1499 ರೂಗಳ ಯೋಜನೆಯಲ್ಲಿ, ಗ್ರಾಹಕರು 300 ಎಮ್‌ಬಿಪಿಎಸ್ ವೇಗ, ಅನಿಯಮಿತ ಧ್ವನಿ ಕರೆಗಳು ಮತ್ತು 1500 ರೂಗಳ 12 ಒಟಿಟಿ ಅಪ್ಲಿಕೇಶನ್‌ಗಳ ಚಂದಾದಾರಿಕೆ ಪ್ರಯೋಜನಗಳನ್ನು ಹೊಂದಿರುವ ಅನಿಯಮಿತ ಇಂಟರ್ನೆಟ್ ವೇಗವನ್ನು ಪಡೆಯುತ್ತಿದ್ದಾರೆ.

Trending News