ಜಿಯೋ ಬಳಕೆದಾರರಿಗೆ ಸಂತಸದ ಸುದ್ದಿ; ಅತಿ ಕಡಿಮೆ ಬೆಲೆಯಲ್ಲಿ ಜಿಯೋ ಫೋನ್ 2, ಜಿಯೋ ಫೈಬರ್ ಬ್ರಾಡ್ ಬ್ಯಾಂಡ್ ಸೇವೆ ಆರಂಭ

ಟೆಲಿಕಾಂ ಸೇವೆಯಲ್ಲಿ ಸಾಕಷ್ಟು ಹೆಸರು ಮಾಡಿರುವ ರಿಲಯನ್ಸ್ ಜಿಯೋ ಇದೀಗ ಗ್ರಾಹಕರಿಗೆ ಕೈಗೆಟಕುವ ದರದಲ್ಲಿ ಫೈಬರ್ ಬ್ರಾಡ್ ಬ್ಯಾಂಡ್ ಸೇವೆ ಮತ್ತು ಜಿಯೋ ಫೋನ್2 ಒದಗಿಸಲು ಮುಂದಾಗಿದೆ. 

Last Updated : Jul 5, 2018, 03:24 PM IST
ಜಿಯೋ ಬಳಕೆದಾರರಿಗೆ ಸಂತಸದ ಸುದ್ದಿ; ಅತಿ ಕಡಿಮೆ ಬೆಲೆಯಲ್ಲಿ ಜಿಯೋ ಫೋನ್ 2, ಜಿಯೋ ಫೈಬರ್ ಬ್ರಾಡ್ ಬ್ಯಾಂಡ್ ಸೇವೆ ಆರಂಭ title=

ನವದೆಹಲಿ: ಟೆಲಿಕಾಂ ಸೇವೆಯಲ್ಲಿ ಸಾಕಷ್ಟು ಹೆಸರು ಮಾಡಿರುವ ರಿಲಯನ್ಸ್ ಜಿಯೋ ಇದೀಗ ಗ್ರಾಹಕರಿಗೆ ಕೈಗೆಟಕುವ ದರದಲ್ಲಿ ಫೈಬರ್ ಬ್ರಾಡ್ ಬ್ಯಾಂಡ್ ಸೇವೆ ಮತ್ತು ಜಿಯೋ ಫೋನ್2 ಒದಗಿಸಲು ಮುಂದಾಗಿದೆ. 

ಇಂದು ನಡೆದ ರಿಲಯನ್ಸ್ ಇಂಡಸ್ಟ್ರೀಸ್ 41 ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಕಂಪೆನಿಯ ಅಧ್ಯಕ್ಷ ಮುಖೇಶ್ ಅಂಬಾನಿ ಈ ನೂತನ ಯೋಜನೆಗಳನ್ನು ಘೋಷಿಸಿದ್ದಾರೆ. ರಿಲಯನ್ಸ್ ಜಿಯೋ ಇದೀಗ ಫೈಬರ್ ಕನೆಕ್ಟಿವಿಟಿ ಸೇವೆಯಲ್ಲಿ ಬ್ರಾಡ್ಬ್ಯಾಂಡ್ ಸೇವೆಯನ್ನು ಕೈಗೆಟುಕುವ ದರದಲ್ಲಿ ಗ್ರಾಹಕರಿಗೆ ಒದಗಿಸುವ ಉದ್ದೇಶದಿಂದ 2.5 ಲಕ್ಷ ಕೋಟಿ ರೂ. ಹೂಡಿಕೆ ಮಾಡಿದೆ. ಈ ಹೊಸ ಸೇವೆ ಮುಂದಿನ ತಿಂಗಳು ನಿಮ್ಮ ಮನೆಗೆ ತಲುಪುತ್ತದೆ. 'ಜಿಯೋಗಿಗಾಫೈಬರ್' (JioGigaFiber) ಹೆಸರಿನಲ್ಲಿ ಈ ಸೇವೆಯನ್ನು ಜಿಯೋ ಲಾಂಚ್ ಮಾಡಿದ್ದು, ಜಿಯೋ ಸ್ಥಿರ ರೇಖೆ ಬ್ರಾಡ್ಬ್ಯಾಂಡ್ನಲ್ಲಿ ಟಾಪ್ 5 ಸ್ಥಾನ ತಲುಪುವ ಗುರಿ ಹೊಂದಿದೆ ಎಂದು ಮುಖೇಶ್ ಅಂಬಾನಿ ತಿಳಿಸಿದ್ದಾರೆ.

ಅತೀ ಕಡಿಮೆ ಬೆಲೆಯಲ್ಲಿ JioPhone-2 ಘೋಷಣೆ
ರಿಲಯನ್ಸ್ ಕಂಪನಿಯು ತನ್ನ ನೂತನ್ ಫೋನ್ ಜಿಯೋಫೋನ್-2 ಅನ್ನು ಲಾಂಚ್ ಮಾಡುವ ಯೋಜನೆ ಹೊಂದಿದ್ದು, ಇದರ ಬೆಲೆ ಕೇವಲ 2,999 ರೂ. ಈ ಫೋನಿನಲ್ಲಿ ವಾಟ್ಸ್ ಆಪ್, ಫೇಸ್ಬುಕ್, ಯೂಟ್ಯೂಬ್, ಜಿಯೋಫೋನ್'ನ ಧ್ವನಿ ಆಜ್ಞೆ(ವಾಯ್ಸ್ ಕಮ್ಯಾಂಡ್) ವೈಶಿಷ್ಟ್ಯವನ್ನು ಹೊಂದಿರುತ್ತದೆ. Jiophone2 ಆಗಸ್ಟ್ 15 ರಿಂದ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ. 

ಅಲ್ಲದೆ, ಜುಲೈ 21ರಿಂದ ಜಿಯೋ ಮಾನ್ಸೂನ್ ಹಂಗಾಮ ಆಫರ್ ಚಾಲನೆಗೆ ಬರಲಿದೆ. ಈ ಮಾನ್ಸೂನ್ ಆಫರ್'ನಲ್ಲಿ ಹಳೆಯ ಜಿಯೋ ಫೀಚರ್ ಫೋನ್ ಅನ್ನು ಹೊಸ ಜಿಯೋಫೋನ್2 ಗೆ ಎಕ್ಸ್'ಚೇಂಜ್ ಮಾಡಿಕೊಳ್ಳಬಹುದು. ಹಳೆಯ ಫೀಚರ್ ಫೋನ್ ಜೊತೆ ರೂ.501 ಪಾವತಿಸಿ ಹೊಸ ಜಿಯೋಫೋನ್2 ಖರೀದಿಸಬಹುದು.

JioGigaFiber ಸೇವೆ ಆರಂಭ
ಜಿಯೋ ತನ್ನ ನೂತನ ಫೈಬರ್ ಬ್ರಾಡ್ಬ್ಯಾಂಡ್ ಸೇವೆಯನ್ನು JioGigaFiber ಹೆಸರಿನಲ್ಲಿ ಆರಂಭಿಸಿದೆ. ಜತೆಗೆ  ಜಿಯೋ ಗೀಗಾ ಟಿವಿಯನ್ನೂ ಲಾಂಚ್ ಮಾಡಲಾಗಿದ್ದು, ಜಿಯೋ ರೂಟರ್ ಅನ್ನೂ ಸಹ ಇಂದು ಬಿಡುಗಡೆಗೊಳಿಸಿದೆ. ಜಿಯೋ ಗಿಗಾ ಟಿವಿಯಲ್ಲಿ ಟಿವಿ ಚಾನೆಲ್ಗಳನ್ನು ಧ್ವನಿ ಕಮಾಂಡ್ನಲ್ಲಿ ಕೂಡ ಬದಲಾಯಿಸಬಹುದು. ಜಿಯೋ ಗಿಗಾಫೈಬರ್ ಸೇವೆ ದೇಶದ 1100 ನಗರಗಳಲ್ಲಿ ಏಕಕಾಲದಲ್ಲಿ ಪ್ರಾರಂಭವಾಗಲಿದ್ದು, ಈ ಸೇವೆ ಪಡೆಯಲು ಆಗಸ್ಟ್ 15 ರಿಂದ ನೋಂದಣಿ ಕಾರ್ಯ ಆರಂಭವಾಗಲಿದೆ. ಯಾವ ನಗರದಲ್ಲಿ ಹೆಚ್ಚು ನೋಂದಣಿ ಆಗುತ್ತದೆಯೂ ಆ ನಗರ ಮೊದಲ ಸೌಲಭ್ಯ ಪಡೆಯಲಿದೆ. Jio GIGA TVಯಲ್ಲಿ ಧ್ವನಿ ಆಜ್ಞೆ ವೈಶಿಷ್ಟ್ಯ ಲಭ್ಯವಿದ್ದು, ಇದು ವರ್ಚುವಲ್ ರಿಯಾಲಿಟಿ ಆಗಿರುತ್ತದೆ. ಅಲ್ಲದೆ, ಮನೆಯ ಸುರಕ್ಷತೆಗಾಗಿ ಜಿಯೋ ಕ್ಯಾಮೆರಾಗಳು, ಭದ್ರತಾ ಸಾಧನಗಳೂ ದೊರೆಯಲಿದ್ದು, ಜಿಯೋ ಗಿಗಾ ಬುಕಿಂಗ್ ಮಾಡಿದ ಒಂದು ಗಂಟೆಯಲ್ಲೇ ನಿಮ್ಮ ಮನೆ ತಲುಪಲಿದೆ. 

ಭಾರತದಲ್ಲಿ ಟಿವಿ ವೀಕ್ಷಣೆಯಲ್ಲಿ ಬದಲಾವಣೆ
ಜಿಯೋನ 41ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಜಿಯೋಗಿಗಾ ಟಿವಿ ಸೆಟ್ ಅನ್ನೂ ಸಹ ಬಿಡುಗಡೆ ಮಾಡಲಾಗಿದೆ. ಧ್ವನಿ ಕಮಾಂಡ್ ವೈಶಿಷ್ಟ್ಯವನ್ನು ಈ ಟಿವಿ ಒಳಗೊಂಡಿದ್ದು, ಇದು ಭಾರತದಲ್ಲಿ ಟಿವಿ ವೀಕ್ಷಣೆಯ ತರೀಖೆಯನ್ನು ಬದಲಾಯಿಸಲಿದೆ ಎಂದು ಮುಖೇಶ್ ಅಂಬಾನಿ ಹೇಳಿದ್ದಾರೆ. ಜಿಯೋ ಬ್ರಾಡ್ಬ್ಯಾಂಡ್ ಮೂಲಕ ದೇಶದಲ್ಲಿ ಅಗ್ಗದ ದರದಲ್ಲಿ ಬ್ರಾಡ್ಬ್ಯಾಂಡ್ ಸೌಲಭ್ಯವನ್ನು ಒದಗಿಸಲಾಗುವುದು. ಸ್ಥಿರ ರೇಖೆ ಬ್ರಾಡ್ಬ್ಯಾಂಡ್ನಲ್ಲಿ ಕಂಪನಿಯು ಟಾಪ್ 5 ನಲ್ಲಿ ಸೇರ್ಪಡೆಗೊಳ್ಳುವುದು ಆರ್ಐಎಲ್ ಉದ್ದೇಶವಾಗಿದೆ ಎಂದು ಅವರು ಹೇಳಿದರು.

Trending News