ವಿಮಾನದಲ್ಲಿ ಪ್ರಯಾಣಿಸುವ ವೇಳೆ ಹೃದಯಾಘಾತಕ್ಕೆ ಒಳಗಾದ ವ್ಯಕ್ತಿಯ ಜೀವ ಉಳಿಸಿದ ಜೆಟ್ ಏರ್ವೇಸ್ ಸಿಬ್ಬಂದಿ

ಈ ಅಪಘಾತವನ್ನು ಉಲ್ಲೇಖಿಸಿ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಮತ್ತೊಬ್ಬ ಪ್ರಯಾಣಿಕ ರಕ್ಷಣಾ ಸಿಬ್ಬಂದಿಗಳನ್ನು ಹೊಗಳಿ ಜೆಟ್ ಏರ್ವೇಸ್ ಅಧ್ಯಕ್ಷ ನರೇಶ್ ಗೋಯಲ್ ರಿಗೆ ಪತ್ರ ಬರೆದಿದ್ದಾರೆ.  

Last Updated : Jun 5, 2018, 09:11 AM IST
ವಿಮಾನದಲ್ಲಿ ಪ್ರಯಾಣಿಸುವ ವೇಳೆ ಹೃದಯಾಘಾತಕ್ಕೆ ಒಳಗಾದ ವ್ಯಕ್ತಿಯ ಜೀವ ಉಳಿಸಿದ ಜೆಟ್ ಏರ್ವೇಸ್ ಸಿಬ್ಬಂದಿ title=

ನವದೆಹಲಿ: ಜೆಟ್ ಏರ್ವೇಸ್ ನ ರಕ್ಷಣಾ ಸಿಬ್ಬಂದಿಗಳ ಸಹಾಯದಿಂದ ಪ್ರಯಾನಿಕರೊಬ್ಬರ ಜೀವ ಉಳಿಸಿದ ಪ್ರಕರಣ ಬೆಳಕಿಗೆ ಬಂದಿದೆ. ಈ ಘಟನೆಗೆ ಸಂಬಂಧಿಸಿದಂತೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಮತ್ತೊಬ್ಬ ಪ್ರಯಾಣಿಕ ರಕ್ಷಣಾ ಸಿಬ್ಬಂದಿಗಳನ್ನು ಹೊಗಳಿ ಜೆಟ್ ಏರ್ವೇಸ್ ಅಧ್ಯಕ್ಷ ನರೇಶ್ ಗೋಯಲ್ ರಿಗೆ ಪತ್ರ ಬರೆದಿದ್ದಾರೆ. ಈ ಪತ್ರದಲ್ಲಿ ಅವರು ಈ ಇಡೀ ಘಟನೆಯನ್ನು ಉಲ್ಲೇಖಿಸಿದ್ದಾರೆ.

ಈ ಘಟನೆ ಮೇ 22 ರಂದು ನಡೆಯಿತು. ಈ ಎಲ್ಲಾ ಘಟನೆಗಳು ಮುಂಬೈ ನಿಂದ ಕೋಲ್ಕತ್ತಾಗೆ ಪ್ರಯಾಣಿಸುತಿದ್ದ ವೇಳೆ ನಡೆದಿದೆ. ಆ ಸಮಯದಲ್ಲಿ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಶ್ರೀ ಡಾಲ್ಮಿಯ ಎಂಬುವರು ಹೃದಯಾಘಾತದಿಂದ ಬಳಲುತ್ತಿದ್ದರು ಮತ್ತು ಅವರು ಕೆಳಗುರುಳಿದರು. ಆ ಸಮಯದಲ್ಲಿ ಜೆಟ್ ಏರ್ವೇಸ್ ತಂಡದ ಸದಸ್ಯರು ಸಂಪೂರ್ಣ ಪರಿಸ್ಥಿತಿಯನ್ನು ನಿಭಾಯಿಸಿದರು ಮತ್ತು Chemco Group ಅಧ್ಯಕ್ಷ ರಾಮ್ ಸರ್ವಾಗಿ ಅವರು ಡಾಲ್ಮಿಯ ಅವರು ಕುಳಿತಿದ್ದ  ಹಿಂದಿನ ಸಾಲಿನಲ್ಲಿ ಕುಳಿತಿದ್ದರು. ಅವರು ಈ ಪತ್ರವನ್ನು ಬರೆದಿದ್ದಾರೆ.

"ನನ್ನ ಹೆಂಡತಿ ಮತ್ತು ನಾನು ಮುಂಬೈನಿಂದ ಮೇ 22 ರಂದು ಜೆಟ್ ಏರ್ವೇಸ್ ವಿಮಾನ ಸಂಖ್ಯೆ 9W625 ರವರು ಕೊಲ್ಕತ್ತಾಗೆ ಹೋಗುತ್ತಿದ್ದೆವು. ನಮ್ಮ ವಿಮಾನ ಹಾರಾಟ ಪ್ರಾರಂಭವಾದ ಒಂದು ಗಂಟೆಯ ನಂತರ, ನನ್ನ ಸೀಟಿನ ಮುಂದಿನ ಸೀಟಿನಲ್ಲಿ ಕುಳಿತಿದ್ದ ಶ್ರೀ ಡಾಲ್ಮಿಯಾ ಅವರು ಇದ್ದಕ್ಕಿದ್ದಂತೆ ಹೃದಯಾಘಾತಕ್ಕೀಡಾದರು, ತಕ್ಷಣ ಅವರು ಸೀಟಿನಿಂದ ಕೆಳಗುರುಳಿದರು. ಈ ಮಾಹಿತಿ ತಿಳಿಯುತ್ತಿದ್ದಂತೆ ವಿಮಾನ ಸಿಬ್ಬಂದಿ ತಕ್ಷಣವೇ ಅವರಿಗೆ ಪ್ರಥಮ ಚಿಕಿತ್ಸೆ ನೀಡಿ ಅವರ ಸ್ಥಿತಿಯನ್ನು ನಿಭಾಯಿಸಿದರು. ಈ ಘಟನೆಯ ಗಂಭೀರತೆಯನ್ನು ತಕ್ಷಣವೇ ಪರಿಗಣಿಸಿ, ರೋಗಿಗೆ ಅಗತ್ಯವಿರುವ ವೈದ್ಯಕೀಯ ಆರೈಕೆ ನೀಡುವ ಸಲುವಾಗಿ ವಿಮಾನವನ್ನು ವಾಪಸ್ ಮುಂಬೈಗೆ ಕಡೆಗೆ ತೆರಳಲು ನಿರ್ಧರಿಸಿದರು" ಎಂದು ಸರ್ವಾಗಿ ಅವರು ತಮ್ಮ ಪತ್ರದಲ್ಲಿ ಬರೆದಿದ್ದಾರೆ.

ಅವರು ಪತ್ರದಲ್ಲಿ ಮತ್ತಷ್ಟು ಬರೆಯುತ್ತಾ, "ವಿಮಾನವು ಮುಂಬೈಗೆ ಆಗಮಿಸಿದ ತಕ್ಷಣ, ವೈದ್ಯರು ತಕ್ಷಣವೇ ತಮ್ಮ ತಂಡದೊಂದಿಗೆ ವಿಮಾನವನ್ನು ತಲುಪಿದರು ಮತ್ತು ರೋಗಿಗೆ ತುರ್ತು ವೈದ್ಯಕೀಯ ಚಿಕಿತ್ಸೆ ನೀಡುವ ಮೂಲಕ ಅವರ ಜೀವವನ್ನು ಉಳಿಸಿದರು. ಇದರ ನಂತರ ಕೋಲ್ಕತ್ತಾಗೆ ಹಾರಾಟ ಮುಂದುವರೆಯಿತು. ತಮ್ಮ ಪ್ರಯಾಣಿಕರಲ್ಲಿ ಒಬ್ಬನನ್ನು ಉಳಿಸಲು ಜೆಟ್ ಏರ್ವೇಸ್ನ ಸಂಪೂರ್ಣ ಸಿಬ್ಬಂದಿಗಳು ಕ್ರಮ ಕೈಗೊಳ್ಳುವ ರೀತಿಯಲ್ಲಿ ತ್ವರಿತ ನಿರ್ಧಾರಗಳನ್ನು ತೆಗೆದುಕೊಳ್ಳುವ ರೀತಿಯಲ್ಲಿ ಅದು ಪ್ರಶಂಸನೀಯವಾಗಿದೆ. ಫ್ಲೈಟ್ ಕ್ಯಾಬಿನ್ ಅಧಿಕಾರಿ ಕೆವಿನ್ ಬ್ಯಾರೆಟೊ ಮತ್ತು ಕ್ಯಾಬಿನ್ ಸಿಬ್ಬಂದಿಗೆ ತ್ಯಾಗಕ್ಕೆ ವಿಶೇಷ ಧನ್ಯವಾದಗಳು" ಎಂದು ಅವರು ತಿಳಿಸಿದ್ದಾರೆ.

Chemco Group ನ ಅಧ್ಯಕ್ಷ ರಾಮ್ ಸರ್ವಾಗಿ, ಜೆಟ್ ಏರ್ವೇಸ್ ನ ಅಧ್ಯಕ್ಷ ನರೇಶ ಗೋಯಲ್ ಮತ್ತು ಅವರ ಸಿಬ್ಬಂದಿಯನ್ನು ಪ್ರಶಂಸಿಸುತ್ತಾ, "ಈ ಘಟನೆ ಆ ಸಮಯದಲ್ಲಿ ಜೊತೆಗೆ ಪ್ರಯಾಣಿಸುತ್ತಿದ್ದ ಪ್ರತಿ ವ್ಯಕ್ತಿಗೂ ತೀವ್ರ ಆಘಾತ ಉಂಟುಮಾಡಿತು. ಆದರೆ, ಅಂತಹ ಬಿಕ್ಕಟ್ಟಿನ ಸಮಯದಲ್ಲಿ ಜೆಟ್ ಏರ್ವೇಸ್ ನ ಸಿಬ್ಬಂದಿ ಪರಿಸ್ಥಿತಿಯನ್ನು ಜಾಗರೂಕತೆಯಿಂದ ನಿಭಾಯಿಸಿದ ರೀತಿಯಿಂದಾಗಿ, ಅವರು ನಮ್ಮ ಮನಸ್ಸಿನಲ್ಲಿ ನಿಮ್ಮ ಕಂಪನಿ ಮತ್ತು ಅದರ ಉದ್ಯೋಗಿಗಳು ನಮಗೆ ಮಹಾನ್ ಸಂಸ್ಕೃತಿಯ ಒಂದು ನೋಟವನ್ನು ನೀಡಿದ್ದಾರೆ" ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

Trending News