3 ವರ್ಷಗಳಲ್ಲಿ 30 ಕೋಟಿ ಕುಟುಂಬಗಳಿಗೆ 'ಜನ-ಧನ್' ಖಾತೆ: ಅರುಣ್ ಜೇಟ್ಲಿ

ಜನ-ಧನ್ ಯೋಜನೆಗೂ ಮೊದಲು ಸುಮಾರು 42 ಪ್ರತಿಶತದಷ್ಟು ಕುಟುಂಬಗಳು ಬ್ಯಾಂಕಿಂಗ್ ಸೌಲಭ್ಯ ಹೊಂದಿರಲಿಲ್ಲ. ಎಲ್ಲಾ ವಾಣಿಜ್ಯ ಬ್ಯಾಂಕ್ಗಳಲ್ಲಿ ಶೂನ್ಯ ಹಣಕಾಸಿನ ಖಾತೆ ತೆರೆಯುವ ಅವಕಾಶವನ್ನು ಸರ್ಕಾರ ಕಲ್ಪಿಸಿತ್ತು. ಪ್ರತಿ ಕುಟುಂಬವೂ ಬ್ಯಾಂಕಿಂಗ್ ಸೌಲಭ್ಯಗಳನ್ನೂ ಪಡೆಯಬೇಕೆಂಬುದು ಇದರ ಮುಖ್ಯ ಉದ್ದೇಶವಾಗಿತ್ತು - ಅರುಣ್ ಜೇಟ್ಲಿ.

Last Updated : Sep 13, 2017, 12:45 PM IST
3 ವರ್ಷಗಳಲ್ಲಿ 30 ಕೋಟಿ ಕುಟುಂಬಗಳಿಗೆ 'ಜನ-ಧನ್' ಖಾತೆ: ಅರುಣ್ ಜೇಟ್ಲಿ title=

ನವ ದೆಹಲಿ: ಭಾರತದಲ್ಲಿ ಎಲ್ಲಾ ಕುಟುಂಬಗಳು ಬ್ಯಾಂಕ್ ವ್ಯವಹಾರಕ್ಕೆ ತೆರೆದುಕೊಳ್ಳುವ ಉದ್ದೇಶದಿಂದ ಮೂರು ವರ್ಷಗಳ ಹಿಂದೆ 'ಜನ-ಧನ್' ಖಾತೆ ಎಂಬ ಭಾರತದ ಅತಿದೊಡ್ಡ ಬ್ಯಾಂಕ್ ಖಾತೆಗೆ ಚಾಲನೆ ನೀಡಲಾಗಿತ್ತು. ಇದರಿಂದಾಗಿ 30 ಕೋಟಿ ಕುಟುಂಬಗಳು ಬ್ಯಾಂಕ್ ಖಾತೆಯನ್ನು ತೆರೆದಿವೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಬುಧವಾರ ತಿಳಿಸಿದ್ದಾರೆ. 

ಜನ-ಧನ್ ಯೋಜನೆಗೂ ಮೊದಲು ಸುಮಾರು 42 ಪ್ರತಿಶತದಷ್ಟು ಕುಟುಂಬಗಳು ಬ್ಯಾಂಕಿಂಗ್ ಸೌಲಭ್ಯ ಹೊಂದಿರಲಿಲ್ಲ. ಎಲ್ಲಾ ವಾಣಿಜ್ಯ ಬ್ಯಾಂಕ್ಗಳಲ್ಲಿ ಶೂನ್ಯ ಹಣಕಾಸಿನ ಖಾತೆ ತೆರೆಯುವ ಅವಕಾಶವನ್ನು ಸರ್ಕಾರ ಕಲ್ಪಿಸಿತ್ತು. ಪ್ರತಿ ಕುಟುಂಬವೂ ಬ್ಯಾಂಕಿಂಗ್ ಸೌಲಭ್ಯಗಳನ್ನೂ ಪಡೆಯಬೇಕೆಂಬುದು ಇದರ ಮುಖ್ಯ ಉದ್ದೇಶವಾಗಿತ್ತು ಎಂದು ಜೇಟ್ಲಿ ತಿಳಿಸಿದರು.

ಹಣಕಾಸಿನ ಸೇರ್ಪಡೆಯ ಕುರಿತು ಸಮಾವೇಶವೊಂದರಲ್ಲಿ ಮಾತನಾಡಿದ ಅವರು, ಶೂನ್ಯ-ಸಮತೋಲನ ಖಾತೆಗಳ ಸಂಖ್ಯೆ ಶೇಕಡಾ 77 ರಿಂದ ಶೇಕಡಾ 20 ಕ್ಕೆ ಇಳಿದಿದೆ ಮತ್ತು ನೇರ ಪ್ರಯೋಜನ ವರ್ಗಾವಣೆ ವಿಸ್ತರಿಸಿದಾಗ ಅವುಗಳು ಸಹ ಕಾರ್ಯನಿರ್ವಹಿಸುತ್ತವೆ ಎಂದು ತಿಳಿಸಿದರು.

ಸೆಪ್ಟೆಂಬರ್ 2014 ರಲ್ಲಿ, ಯೋಜನೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, 76.81 ಪ್ರತಿಶತದಷ್ಟು ಖಾತೆಗಳು ಶೂನ್ಯ ಸಮತೋಲನವನ್ನು ಹೊಂದಿದ್ದವು. ಶೂನ್ಯ-ಸಮತೋಲನ ಖಾತೆಗಳ ಸಂಖ್ಯೆ ಈಗ ಒಟ್ಟು ಶೇಕಡ 20 ರಷ್ಟಿದೆ ಎಂದು ಅವರು ಹೇಳಿದರು.

ಶೇಕಡಾ 99.99  ಕುಟುಂಬಗಳು ಈಗ ಕನಿಷ್ಠ ಒಂದು ಬ್ಯಾಂಕ್ ಖಾತೆಯನ್ನು ಹೊಂದಿದ್ದು, ಇದು ಜನ-ಧನ್ ಯೋಜನೆಯ ಫಲ ಎಂದು ಯೋಜನೆಗೆ ಜೇಟ್ಲಿ ತಮ್ಮ ಧನ್ಯವಾದ ವ್ಯಕ್ತಪಡಿಸಿದರು.

ಇದೇ ಸಮಾವೇಶದಲ್ಲಿ ಆಧಾರ್ ಬಗ್ಗೆ ಮಾತನಾಡಿದ ಹಣಕಾಸು ಸಚಿವರು ಬಿಜೆಪಿ ಆಳ್ವಿಕೆಯ ಅವಧಿಯಲ್ಲಿ ಜಾರಿಗೆ ಬಂದ ಆಧಾರ್ ಶಾಸನವು ಅನನ್ಯ ಗುರುತು ಸಂಖ್ಯೆಯನ್ನು ಬಳಸಿ ಸರ್ಕಾರದ ಪ್ರಯೋಜನವನ್ನು ನೀಡುವ  ಸಾಂವಿಧಾನಿಕತೆಯ ಪರೀಕ್ಷೆಯನ್ನು ಹೊಂದಿದೆ.  ಹಿಂದಿನ ಯುಪಿಎ ಆಡಳಿತದ ಅಡಿಯಲ್ಲಿ ವಿಕಸನಗೊಂಡ ಬಯೋಮೆಟ್ರಿಕ್ ಗುರುತಿನ ಸಂಖ್ಯೆ ಆಧಾರ್ ಶಾಸನಬದ್ಧ ಬೆಂಬಲವನ್ನು ಹೊಂದಿಲ್ಲ ಹೇಳಿದರು.

Trending News