ಜಮ್ಮು-ಕಾಶ್ಮೀರ: ಕಾಲ್ನಡಿಗೆಯಲ್ಲಿ 4 ಕಿ.ಮೀ. ನಡೆದು ಗ್ರಾಮ ತಲುಪಿದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ

ಗುಡ್ಡಗಾಡು ಗ್ರಾಮವಾಗಿದ್ದರಿಂದ ವಾಹನ ಗ್ರಾಮವನ್ನು ತಲುಪಲು ಸಾಧ್ಯವಾಗಲಿಲ್ಲ ಮತ್ತು ಇದರ ನಂತರ ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ 4 ಕಿಲೋಮೀಟರ್ ಪ್ರಯಾಣಿಸಿ ಶೋಪಿಯಾ ಎನ್‌ಕೌಂಟರ್‌ನಲ್ಲಿ ಮೃತಪಟ್ಟ ಯುವಕರ ಕುಟುಂಬವನ್ನು ಭೇಟಿಯಾಗಿ ನ್ಯಾಯ ಒದಗಿಸುವ ಭರವಸೆ ನೀಡಿದರು.

Last Updated : Oct 9, 2020, 10:08 AM IST
  • ಕಾಲ್ನಡಿಗೆಯಲ್ಲಿ 4 ಕಿ.ಮೀ. ಸಾಗಿದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ
  • ಅವರು ಶೋಪಿಯಾನ್‌ನಲ್ಲಿ ಮೃತ ಯುವಕರ ಕುಟುಂಬಗಳನ್ನು ಭೇಟಿಯಾದರು.
  • ಮನೋಜ್ ಸಿನ್ಹಾ ಕುಟುಂಬಕ್ಕೆ ನ್ಯಾಯದ ಭರವಸೆ ನೀಡಿದರು.
ಜಮ್ಮು-ಕಾಶ್ಮೀರ: ಕಾಲ್ನಡಿಗೆಯಲ್ಲಿ 4 ಕಿ.ಮೀ. ನಡೆದು ಗ್ರಾಮ ತಲುಪಿದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ  title=
Image courtesy: ANI

ರಾಜೌರಿ: ಕಾಶ್ಮೀರ ಕಣಿವೆಯ ಶೋಪಿಯಾನ್ ಎನ್‌ಕೌಂಟರ್‌ನಲ್ಲಿ ಭದ್ರತಾ ಪಡೆಗಳಿಂದ ಕೊಲ್ಲಲ್ಪಟ್ಟ ಮೂವರು ಯುವಕರ ಕುಟುಂಬಗಳನ್ನು ಜಮ್ಮು ಮತ್ತು ಕಾಶ್ಮೀರ (Jammu and Kashmir) ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಗುರುವಾರ ಭೇಟಿಯಾದರು. ಗುಡ್ಡಗಾಡು ಗ್ರಾಮವಾಗಿದ್ದರಿಂದ ವಾಹನ ಗ್ರಾಮವನ್ನು ತಲುಪಲು ಸಾಧ್ಯವಾಗಲಿಲ್ಲ, ನಂತರ ಮನೋಜ್ ಸಿನ್ಹಾ 4 ಕಿಲೋಮೀಟರ್ ಕಾಲ್ನಡಿಗೆಯಲ್ಲಿ ಪ್ರಯಾಣಿಸಿ ಮೃತಪಟ್ಟ ಯುವಕರ ಕುಟುಂಬವನ್ನು ಭೇಟಿಯಾಗಿ ನ್ಯಾಯ ಒದಗಿಸುವ ಭರವಸೆ ನೀಡಿದರು.

ಕುಟುಂಬ ಸದಸ್ಯರನ್ನು ಭೇಟಿಯಾದ ನಂತರ ಮಾತನಾಡಿರುವ  ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ (Manoj Sinha)  ಮೃತರ ಕುಟುಂಬಸ್ಥರನ್ನು ಭೇಟಿಯಾಗಿ ನಾನು ಸಂತಾಪ ವ್ಯಕ್ತಪಡಿಸಿದ್ದೇನೆ ಮತ್ತು ಮೃತರ ಕುಟುಂಬಗಳಿಗೆ ನ್ಯಾಯ ಒದಗಿಸಲಾಗುವುದು ಎಂಬ ಪ್ರಧಾನಿ ನರೇಂದ್ರ ಮೋದಿಯವರಿಗೆ ಸಂದೇಶವನ್ನು ಅವರಿಗೆ ರವಾನಿಸಿದ್ದೇನೆ. ಪ್ರಕರಣದ ತನಿಖೆ ನಡೆಯುತ್ತಿದ್ದು, ಸತ್ಯ ಹೊರಬರಲಿದೆ. ಸಂತ್ರಸ್ತರಿಗೆ ನ್ಯಾಯ ದೊರೆಯಲಿದೆ ಎಂದು ಅವರು ತಿಳಿಸಿದರು.

ಕಾಶ್ಮೀರದ ಗಡಿ ನಿಯಂತ್ರಣ ರೇಖೆಯಾದ್ಯಂತ ಪಾಕ್ ನಿಂದ ದಾಳಿ

ಮಾಹಿತಿಯ ಪ್ರಕಾರ ಮನೋಜ್ ಸಿನ್ಹಾ ಅವರು ಒಂದು ಕಾರ್ಯಕ್ರಮದ ನಿಮಿತ್ತ ರಾಜೌರಿಗೆ ಆಗಮಿಸಿದರು ಮತ್ತು ನಂತರ ಅವರು ಶೋಪಿಯಾ ಎನ್‌ಕೌಂಟರ್ (Encounter)‌ನಲ್ಲಿ ಮೃತಪಟ್ಟ ಮೂವರು ಯುವಕರ ಕುಟುಂಬಗಳನ್ನು ಭೇಟಿ ಮಾಡಲು ನಿರ್ಧರಿಸಿದರು. ವೇಳಾಪಟ್ಟಿಯ ಪ್ರಕಾರ ತರ್ಕಸ್ಸಿಗೆ ಹೋಗಲು ಯಾವುದೇ ಯೋಜನೆ ಇರಲಿಲ್ಲ, ಅಧಿಕಾರಿಗಳೂ ಸಹ ಇದರಿಂದ ಆಶ್ಚರ್ಯಚಕಿತರಾದರು. ನಂತರ ಅವರು ತಮ್ಮ ಕಾರಿನ ಮೂಲಕ ತರ್ಕಸ್ಸಿ ಗ್ರಾಮವನ್ನು ತಲುಪಿದರು, ಆದರೆ ಗುಡ್ಡಗಾಡು ಪ್ರದೇಶದಿಂದಾಗಿ ವಾಹನ ಹಳ್ಳಿಯೊಳಗೆ ಹೋಗಲು ಸಾಧ್ಯವಾಗಲಿಲ್ಲ. ಇದಾದ ನಂತರ ಮನೋಜ್ ಸಿನ್ಹಾ ಕಾರಿನಿಂದ ಇಳಿದು ಕಾಲ್ನಡಿಗೆಯಲ್ಲಿ ಗ್ರಾಮವನ್ನು ತಲುಪಿದರು.

ಕುಟುಂಬದಿಂದ ಇಡೀ ವಿಷಯದ ಬಗ್ಗೆ ಮಾಹಿತಿ :-
ಲೆಫ್ಟಿನೆಂಟ್ ಗವರ್ನರ್ ತರ್ಕಸ್ಸಿ ಗ್ರಾಮದಲ್ಲಿರುವ ಮೊಹಮ್ಮದ್ ಯೂಸುಫ್ ಅವರ ಮನೆಗೆ ತಲುಪಿದರು. ಮೃತ ಮೂವರು ಯುವಕರಲ್ಲಿ ಯೂಸುಫ್ ಮಗ ಕೂಡ ಒಬ್ಬರು. ಇತರ ಇಬ್ಬರು ಯುವಕರ ಕುಟುಂಬ ಅಲ್ಲಿ ಭೇಟಿಯಾಯಿತು. ಲೆಫ್ಟಿನೆಂಟ್ ಗವರ್ನರ್ ಕುಟುಂಬದಿಂದ ಇಡೀ ವಿಷಯದ ಬಗ್ಗೆ ಮಾಹಿತಿಯನ್ನು ತೆಗೆದುಕೊಂಡು ಅವರಿಗೆ ನ್ಯಾಯ ಒದಗಿಸುವ ಭರವಸೆ ನೀಡಿದರು.

ಜಮ್ಮು-ಕಾಶ್ಮೀರ, ಪಿಒಕೆಯಲ್ಲಿ ಐಎಸ್‌ಐ ಜೊತೆಗೂಡಿ ಚೀನಾ ಪಿತೂರಿ

ಜುಲೈ 18 ರಂದು ನಡೆದ ಎನ್‌ಕೌಂಟರ್‌:-
ಜುಲೈ 18 ರಂದು ಶೋಪಿಯಾದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಮೂವರು ಯುವಕರು ಕೊಲ್ಲಲ್ಪಟ್ಟರು. ಎಲ್ಲರೂ ಶೋಪಿಯಾದಲ್ಲಿ ಕೆಲಸಕ್ಕೆ ಹೋಗಿದ್ದರು ಎಂದು ಅವರ ಕುಟುಂಬ ತಿಳಿಸಿದೆ. ಕುಟುಂಬ ಸದಸ್ಯರು ಈ ವಿಷಯಕ್ಕೆ ಸಂಬಂಧಿಸಿದಂತೆ ದನಿ ಎತ್ತಿದ ನಂತರ ಘಟನೆ ಕುರಿತು ತನಿಖೆ ಪ್ರಾರಂಭವಾಯಿತು.

Trending News