ಸೂರ್ಯನ ಸಂಪೂರ್ಣ ಫೋಟೋ ಕ್ಲಿಕ್ಕಿಸಿದ ಆದಿತ್ಯ L1: ಹತ್ತಿರದಿಂದ ನೋಡಿ ‘ನೇಸರ’ನ ಅಂದ-ಚಂದವ…

ISRO Spacecraft Aditya L1 Captures Sun First Pictures: ಇಸ್ರೋದ ಬಾಹ್ಯಾಕಾಶ ನೌಕೆ ಆದಿತ್ಯ-ಎಲ್1 ನೇರಳಾತೀತ ತರಂಗಾಂತರದಲ್ಲಿ ಸೂರ್ಯನ ಪೂರ್ಣ-ಡಿಸ್ಕ್ ಚಿತ್ರಗಳನ್ನು ಸೆರೆಹಿಡಿದಿದೆ.

Written by - Bhavishya Shetty | Last Updated : Dec 9, 2023, 12:09 AM IST
    • ಆದಿತ್ಯ-ಎಲ್1 ಬಾಹ್ಯಾಕಾಶದಿಂದ ಸೂರ್ಯನ ಅನೇಕ ಚಿತ್ರಗಳನ್ನು ಹಂಚಿಕೊಂಡಿದೆ.
    • ಸೌರ ನೇರಳಾತೀತ ಇಮೇಜಿಂಗ್ ಟೆಲಿಸ್ಕೋಪ್ ಉಪಕರಣದಿಂದ ಸೆರೆಹಿಡಿಯಲಾಗಿದೆ
    • SUIT ತೆಗೆದ ಚಿತ್ರಗಳನ್ನು X ನಲ್ಲಿ ಪೋಸ್ಟ್ ಮಾಡಿದ ಸಂಸ್ಥೆ
ಸೂರ್ಯನ ಸಂಪೂರ್ಣ ಫೋಟೋ ಕ್ಲಿಕ್ಕಿಸಿದ ಆದಿತ್ಯ L1: ಹತ್ತಿರದಿಂದ ನೋಡಿ ‘ನೇಸರ’ನ ಅಂದ-ಚಂದವ… title=
ISRO Aditya L1 Spacecraft

ISRO Spacecraft Aditya L1 Captures Sun First Pictures: ಬಾಹ್ಯಾಕಾಶದಲ್ಲಿ ಭಾರತದ ಪರಾಕ್ರಮವನ್ನು ನಿರಂತರವಾಗಿ ನೋಡಲಾಗುತ್ತಿದೆ. ಇಸ್ರೋದ ಈ ಮಹಾ ಸಾಧನೆಯಿಂದ ಇದೀಗ ಸೂರ್ಯನಿಂದ ಲಕ್ಷಾಂತರ ಕಿಲೋಮೀಟರ್ ದೂರದಲ್ಲಿ ಕುಳಿತು, ಸೂರ್ಯನ ಹತ್ತಿರದ ಚಿತ್ರಗಳನ್ನು ನೋಡಲು ಸಾಧ್ಯವಾಗಿದೆ. ಆದಿತ್ಯ-ಎಲ್1 ಬಾಹ್ಯಾಕಾಶದಿಂದ ಸೂರ್ಯನ ಅನೇಕ ಚಿತ್ರಗಳನ್ನು ಹಂಚಿಕೊಂಡಿದೆ.

ಇದನ್ನೂ ಓದಿ:  “ಮೈದಾನ ಮಾತ್ರವಲ್ಲ, ಹೆಂಡ್ತಿ ಜೊತೆನೂ ಸಖತ್ ಮ್ಯಾಚ್ ಆಡ್ತೀನಿ”- ಟೀಂ ಇಂಡಿಯಾದ ಸ್ಟಾರ್ ವೇಗಿ

ಇಸ್ರೋದ ಬಾಹ್ಯಾಕಾಶ ನೌಕೆ ಆದಿತ್ಯ-ಎಲ್1 ನೇರಳಾತೀತ ತರಂಗಾಂತರದಲ್ಲಿ ಸೂರ್ಯನ ಪೂರ್ಣ-ಡಿಸ್ಕ್ ಚಿತ್ರಗಳನ್ನು ಸೆರೆಹಿಡಿದಿದೆ. ಸೂರ್ಯನ ಈ ಚಿತ್ರಗಳನ್ನು ಆದಿತ್ಯ-L1 ಬಾಹ್ಯಾಕಾಶ ನೌಕೆಯಲ್ಲಿ ಅಳವಡಿಸಲಾಗಿರುವ ಸೌರ ನೇರಳಾತೀತ ಇಮೇಜಿಂಗ್ ಟೆಲಿಸ್ಕೋಪ್ (SUIT) ಉಪಕರಣದಿಂದ ಸೆರೆಹಿಡಿಯಲಾಗಿದೆ.

 

“ಆದಿತ್ಯ-ಎಲ್ 1 ನಲ್ಲಿರುವ ಸೌರ ನೇರಳಾತೀತ ಇಮೇಜಿಂಗ್ ಟೆಲಿಸ್ಕೋಪ್ (ಎಸ್‌ಯುಐಟಿ) ಉಪಕರಣವು 200-400 ಎನ್‌ಎಂ ತರಂಗಾಂತರ ವ್ಯಾಪ್ತಿಯಲ್ಲಿ ಸೂರ್ಯನ ಮೊದಲ ಪೂರ್ಣ-ಡಿಸ್ಕ್ ಚಿತ್ರಗಳನ್ನು ಯಶಸ್ವಿಯಾಗಿ ಸೆರೆಹಿಡಿದಿದೆ” ಎಂದು ಇಸ್ರೋ ತಿಳಿಸಿದೆ.

ಇದನ್ನೂ ಓದಿ: ಎಂಎಸ್ ಧೋನಿ ಮಗಳು ಝಿವಾ ಓದುತ್ತಿರುವ ಸ್ಕೂಲ್ ಫೀಸ್ ಎಷ್ಟು ಲಕ್ಷ ಗೊತ್ತಾ?

ISRO SUIT ತೆಗೆದ ಚಿತ್ರಗಳನ್ನು X ನಲ್ಲಿ ಪೋಸ್ಟ್ ಮಾಡಿದ್ದು, “SUIT ಪೇಲೋಡ್ ಸೂರ್ಯನ ಪೂರ್ಣ-ಡಿಸ್ಕ್ ಚಿತ್ರಗಳನ್ನು ನೇರಳಾತೀತ ತರಂಗಾಂತರಗಳಲ್ಲಿ ಸೆರೆಹಿಡಿದಿದೆ” ಎಂದು ಹೇಳಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News