Must Read For Government Employees: ಸರ್ಕಾರಿ ನೌಕರರಿಗೊಂದು ಮಹತ್ವದ ಮಾಹಿತಿ, ರಿಟೈರ್ಮೆಂಟ್ ಬಳಿಕ ಸ್ವಇಚ್ಛೆಯಿಂದ ಈ ಕೆಲಸ ಮಾಡುವಂತಿಲ್ಲ

Must Read For Government Employees: ಇಂಟೆಲಿಜೆನ್ಸ್ ಅಥವಾ ರಕ್ಷಣಾ ವಿಭಾಗಕ್ಕೆ ಸಂಬಂಧಿಸಿದ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುವ ಯಾವುದೇ ಸರ್ಕಾರಿ ನೌಕರರು  ಸ್ವಇಚ್ಛೆಯಿಂದ ತಮ್ಮ ಲೇಖನ ಅಥವಾ ತಮ್ಮ ಪುಸ್ತಕವನ್ನು ಪ್ರಕಾಶಿತಗೊಳಿಸುವಂತಿಲ್ಲ (Book Publications) ಎಂದು ಕೇಂದ್ರ ಸರ್ಕಾರ (Central Government) ನಿರ್ಧರಿಸಿದೆ.

Written by - Nitin Tabib | Last Updated : Jun 2, 2021, 02:29 PM IST
  • ಈ ಸಂಸ್ಥೆಗಳಲ್ಲಿ ಕಾರ್ಯನಿರತ ನೌಕರರು ನಿವೃತ್ತಿಯ ಬಳಿಕ ಈ ಕೆಲಸ ಮಾಡುವಂತಿಲ್ಲ
  • ಲೇಖನ ಹಾಗೂ ಪುಸ್ತಕ ಪ್ರಕಾಶಿತಗೊಳಿಸಲು ಪೂರ್ವಾನುಮತಿ ಪಡೆಯಬೇಕು
  • ನಿಯಮಗಳ ಉಲ್ಲಂಘನೆ ಪಿಂಚಣಿ ನಿಂತುಹೋಗಲು ಕಾರಣವಾಗಲಿದೆ.
Must Read For Government Employees: ಸರ್ಕಾರಿ ನೌಕರರಿಗೊಂದು ಮಹತ್ವದ ಮಾಹಿತಿ, ರಿಟೈರ್ಮೆಂಟ್ ಬಳಿಕ ಸ್ವಇಚ್ಛೆಯಿಂದ ಈ ಕೆಲಸ ಮಾಡುವಂತಿಲ್ಲ title=
Central Civil Services (Pension) Amendment Rule 2020 (File Photo)

Must Read For Government Employees: ಇಂಟೆಲಿಜೆನ್ಸ್ ಅಥವಾ ರಕ್ಷಣಾ ವಿಭಾಗಕ್ಕೆ ಸಂಬಂಧಿಸಿದ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುವ ಯಾವುದೇ ಸರ್ಕಾರಿ ನೌಕರರು  ಸ್ವಇಚ್ಛೆಯಿಂದ ತಮ್ಮ ಲೇಖನ ಅಥವಾ ತಮ್ಮ ಪುಸ್ತಕವನ್ನು ಪ್ರಕಾಶಿತಗೊಳಿಸುವಂತಿಲ್ಲ (Book Publications) ಎಂದು ಕೇಂದ್ರ ಸರ್ಕಾರ (Central Government) ನಿರ್ಧರಿಸಿದೆ.

ನಿವೃತ್ತಿಯ (Retirement) ಬಳಿಕ ತಮ್ಮ ಅನುಭವಗಳ ಕುರಿತು ಪುಸ್ತಕ ಬರೆಯುವುದು ಅಥವಾ ಲೇಖನ ಬರೆಯುವುದು ಹಲವು ಬಾರಿ ವಿವಾದಕ್ಕೆ ಕಾರಣವಾಗುತ್ತದೆ. ಅದರಲ್ಲೂ ವಿಶೇಷವಾಗಿ ಒಂದು ವೇಳೆ ವ್ಯಕ್ತಿ ಇಂಟೆಲಿಜೆನ್ಸ್ ಅಥವಾ ರಕ್ಷಣಾ ವಿಭಾಗಕ್ಕೆ ಸಂಬಂಧಿಸಿದ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದಾರೆ. ಇದೀಗ ಇಂತಹ ಸ್ಥಿತಿಯಿಂದ ಪಾರಾಗಲು ಕೇಂದ್ರ ಸರ್ಕಾರ ಒಂದು ನಿಯಮದ ಅಡಿ ಇಂಟೆಲಿಜೆನ್ಸ್ (Intelligence Department) ಅಥವಾ ರಕ್ಷಣಾ ವಿಭಾಗಗಳಂತಹ (Security Related Organization) ಮಹತ್ವದ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಿ ನಿವೃತ್ತರಾಗಿರುವ ಯಾವುದೇ ಓರ್ವ ಸರ್ಕಾರಿ ನೌಕರ ತಮ್ಮ ಸ್ವಇಚ್ಛೆಯಿಂದ ಲೇಖನ ಅಥವಾ ಪುಸ್ತಕವನ್ನು ಪ್ರಕಾಶಿತಗೊಳಿಸುವಂತಿಲ್ಲ ಎಂದಿದೆ. ಈ ರೀತಿ ಮಾಡಲು ಅವರು ಮೊದಲು ತಾವು ಸೇವೆ ಸಲ್ಲಿಸಿ ರಿಟೈರ್ ಆದ ಸಂಸ್ಥೆಯಿಂದ ಪೂರ್ವಾನುಮತಿ ಪಡೆದುಕೊಳ್ಳಬೇಕು ಎಂದಿದೆ. ಈ ಕುರಿತಾದ ಅಧಿಸೂಚನೆಯನ್ನು ಸಾರ್ವಜನಿಕ ಕುಂದುಕೊರತೆ ಮತ್ತು ಪಿಂಚಣಿ ಸಚಿವಾಲಯದ (Ministry Of Personnel, Public Grievances And Pensions) ಅಡಿಯಲ್ಲಿ ಸಿಬ್ಬಂದಿ ಮತ್ತು ತರಬೇತಿ ಇಲಾಖೆ ನೀಡಿದೆ. ಅಧಿಸೂಚನೆಯ ಪ್ರಕಾರ ಈ ನಿರ್ಧಾರವನ್ನು ಸಂವಿಧಾನದ (Constitution Of India) ಪರಿಚ್ಛೇದ 148ರ ಕ್ಲಾಸ್ 5 ಹಾಗೂ ಪರಿಚ್ಛೇದ 309 ಅಡಿ ನೀಡಲಾಗಿರುವ ಅಧಿಕಾರ ಹಾಗೂ CAG ಅವರೊಂದಿಗಿನ ಸುದೀರ್ಘ ಸಮಾಲೋಚನೆಯ ಬಳಿಕ ತೆಗೆದುಕೊಳ್ಳಲಾಗಿದೆ  ಎನ್ನಲಾಗಿದೆ. ಇದಕ್ಕಾಗಿ ಸೆಂಟ್ರಲ್ ಸಿವಿಲ್ ಸರ್ವಿಸೆಸ್ (ಪೆನ್ಷನ್) ರೂಲ್ಸ್ 1972ಕ್ಕೆ (Central Civil Services (Pension) Rule 1972) ತಿದ್ದುಪಡಿ ತರಲಾಗಿದೆ.

ಇದನ್ನೂ ಓದಿ-'ಸರ್ ಫೆಯರ್ ವೆಲ್ ಆದ್ರು ಮಾಡ್ಸಿ, 12ನೇ B ತರಗತಿಯ ನೇಹಾಳನ್ನು ಸೀರೆಯಲ್ಲಿ ನೋಡ್ಬೇಕ್ಕಿತ್ತು'

ಇದನ್ನೂ ಓದಿ- ನೌಕರರ ಡಬ್ಬಲ್ ಧಮಾಕ.! ವೇತನ ಏರಿಕೆಗೆ ಕೂಡಿ ಬಂತು ಕಾಲ.! 30 ರೊಳಗೆ ಈ ಕೆಲಸ ಮುಗಿಸಿ..!

ಈ ತಿದ್ದುಪಡಿಯ ಹೈಲೈಟ್ಸ್ 
>> ಈ ನಿಯಮಗಳನ್ನು ಸೆಂಟ್ರಲ್ ಸಿವಿಲ್ ಸರ್ವಿಸೆಸ್ (ಪೆನ್ಷನ್) ಅಮೆಂಡಮೆಂಟ್ 2020 (Central Civil Services (Pension) Amendment Rule 2020) ಎಂದು ಕರೆಯಬಹುದು.

>> ಮಾಹಿತಿ ಹಕ್ಕು ಕಾಯಿದೆಯ ಎರಡನೇ ಶೆಡ್ಯೂಲ್ ನಲ್ಲಿ ಬರುವ ಯಾವುದೇ ಇಂಟೆಲಿಜೆನ್ಸ್ ಅಥವಾ ರಕ್ಷಣೆಗೆ ಸಂಬಂಧಿಸಿದ ಸಂಸ್ಥೆಗಳಲ್ಲಿ ಕಾರ್ಯನಿರತ ನೌಕರರು ತಮ್ಮ ನಿವೃತ್ತಿಯಬಳಿಕ ಕೆಲ ವಿಶೇಷ ಪ್ರಕರಣಗಳಲ್ಲಿ ಯಾವುದೇ ಲೇಖನ ಅಥವಾ ಪುಸ್ತಕ ಪ್ರಕಾಶಿತಗೊಳಿಸುವ (Publication After Retirement) ಮುನ್ನ ತಾವು ನಿವೃತ್ತರಾಗುತ್ತಿರುವ ವಿಭಾಗ ಅಥವಾ ಸಂಸ್ಥೆಯಿಂದ ಅನುಮತಿ ಪಡೆಯಬೇಕು, ಇದರ ಅಡಿಯಲ್ಲಿ ಇದರ ಅಡಿಯಲ್ಲಿ, ವ್ಯಕ್ತಿಯ ಡೊಮೇನ್ ಅಥವಾ ಅವರ ಸಂದರ್ಭದ ಬಗ್ಗೆ ಮಾಹಿತಿ ಮತ್ತು ಸಂಸ್ಥೆಯಲ್ಲಿ ಕೆಲಸ ಮಾಡುವಾಗ ಗಳಿಸಿದ ಅವರ ವೃತ್ತಿ ಮತ್ತು ಪರಿಣತಿಯಂತಹ ಸಂಸ್ಥೆಯ ಡೊಮೇನ್ ಬಗ್ಗೆ ಪ್ರಕಟಣೆಗೆ ಅನುಮೋದನೆ ಪಡೆಯಬೇಕಾಗಿದೆ. ಇದಲ್ಲದೆ, ದೇಶದ ಏಕತೆ ಮತ್ತು ಸಮಗ್ರತೆಯ ಮೇಲೆ ಪರಿಣಾಮ ಬೀರುವ ಅಥವಾ ವಿದೇಶಿ ಸಂಬಂಧಗಳ ಮೇಲೆ ಪರಿಣಾಮ ಬೀರುವ ಅಥವಾ ದೇಶದ ಕಾರ್ಯತಂತ್ರದ, ವೈಜ್ಞಾನಿಕ ಅಥವಾ ಆರ್ಥಿಕ ಹಿತಾಸಕ್ತಿಗಳ ಮೇಲೆ ಪರಿಣಾಮ ಬೀರುವ ಯಾವುದೇ ಸೂಕ್ಷ್ಮ ಮಾಹಿತಿಯನ್ನು ತಮ್ಮ ಲೇಖನದಲ್ಲಿ ಪ್ರಕಟಿಸಲು ಪೂರ್ವ ಅನುಮೋದನೆ ಪಡೆಯಬೇಕಾಗುತ್ತದೆ (Clearance From Head Of Organization).

>> ಯಾವುದೇ ಲೇಖನ ಅಥವಾ ಪುಸ್ತಕ ಸೂಕ್ಷ್ಮ ಮಾಹಿತಿ ಒಳಗೊಂಡಿದೆಯೇ  ಅಥವಾ ಇಲ್ಲವೇ ಎಂಬುದನ್ನು ನಿರ್ಧರಿಸುವ ಹಕ್ಕನ್ನು ಸಂಸ್ಥೆಯ ಮುಖ್ಯಸ್ಥರು ಹೊಂದಿರುತ್ತಾರೆ.

>> ಇದಕ್ಕಾಗಿ ಅಂಡರ್ ಟೇಕಿಂಗ್ ರೂಪದಲ್ಲಿ ನೌಕರರು ಫಾರ್ಮ್ 26 ಸಲ್ಲಿಸಬೇಕು. ಈ ಫಾರ್ಮ್ ಪ್ರಕಾರ, ನಿವೃತ್ತಿಯ ಬಳಿಕ ಒಂದು ವೇಳೆ ನೌಕರರು ಅಂಡರ್ ಟೇಕಿಂಗ್ ಷರತ್ತುಗಳನ್ನು ಉಲ್ಲಂಘಿಸಿದರೆ ಅವರ ಪಿಂಚಣಿ ನಿಲ್ಲಿಸಬಹುದಾಗಿದೆ ಎಂದು ಬರೆದಿದೆ.

ಇದನ್ನೂ ಓದಿ-ಭಾರತದಲ್ಲಿ ದೊರೆತೆ Covid-19 ರೂಪಾಂತರಿಗಳಿಗೆ ನಾಮಕರಣ ಮಾಡಿದ WHO

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News