ಬಾಂಬ್ ಬೆದರಿಕೆ ಕರೆ: ಮುಂಬೈ-ಲಕ್ನೊ ಇಂಡಿಗೋ ವಿಮಾನ ತುರ್ತು ಭೂಸ್ಪರ್ಶ

ಬೆಳಗ್ಗೆ  6.05 ಕ್ಕೆ ನಿರ್ಗಮಿಸಬೇಕಾಗಿತ್ತು. ಆದರೆ ವಿಮಾನದಲ್ಲಿ ಎಷ್ಟು ಮಂದಿ ಪ್ರಯಾಣಕರಿದ್ದರು ಎಂದು ತಿಳಿದು ಬಂದಿಲ್ಲ.  

Last Updated : Dec 15, 2018, 04:06 PM IST
ಬಾಂಬ್ ಬೆದರಿಕೆ ಕರೆ: ಮುಂಬೈ-ಲಕ್ನೊ ಇಂಡಿಗೋ ವಿಮಾನ ತುರ್ತು ಭೂಸ್ಪರ್ಶ title=

ಮುಂಬಯಿ: ಬಾಂಬ್‌ ಬೆದರಿಕೆ ಕರೆ ಬಂದ ಹಿನ್ನಲೆಯಲ್ಲಿ ಮುಂಬೈನಿಂದ ಲಕ್ನೋಗೆ ಪ್ರಯಾಣ ಬೆಳೆಸಿದ್ದ ಇಂಡಿಗೋ ವಿಮಾನವನ್ನು ಕೆಳಗಿಳಿಸಿ ತಪಾಸಣೆ ನಡೆಸಿದ ಘಟನೆ ಶನಿವಾರ ನಡೆದಿದೆ. 

ವಿಮಾನವು ತುರ್ತು ಭೂಸ್ಪರ್ಶ ಮಾಡಿದ ಬಳಿಕ ಪ್ರತ್ಯೇಕವಾಗಿ ಇರಿಸಿ ತಪಾಸಣಾ ಸಮಿತಿಯ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ನಂತರ ವಿಮಾನದಲ್ಲಿ ಯಾವುದೇ ಬಾಂಬ್‌ ಪತ್ತೆಯಾಗದ ಹಿನ್ನಲೆಯಲ್ಲಿ ವಿಮಾನ ಸುರಕ್ಷಿತವಾಗಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಬೆಳಗ್ಗೆ  6.05 ಕ್ಕೆ ನಿರ್ಗಮಿಸಬೇಕಾಗಿತ್ತು. ಆದರೆ ವಿಮಾನದಲ್ಲಿ ಎಷ್ಟು ಮಂದಿ ಪ್ರಯಾಣಕರಿದ್ದರು ಎಂದು ತಿಳಿದು ಬಂದಿಲ್ಲ.

Go Air ವಿಮಾನ G8 329ನಲ್ಲಿ ದೆಹಲಿಗೆ ಪ್ರಯಾಣಿಸಬೇಕಿದ್ದ ಮಹಿಳಾ ಪ್ರಯಾಣಿಕರೊಬ್ಬರು ಇಂಡಿಗೋ ಚೆಕ್-ಇನ್ ಕೌಂಟರ್ ಬಳಿ ಬಂದು ಬಾಂಬ್‌ ಇರುವ ಬಗ್ಗೆ ಮಾತನಾಡಿದ್ದು, ಫೋಟೋವೊಂದನ್ನು ತೋರಿಸಿ ಇವರು ದೇಶದ ಭದ್ರತೆಗೆ ಆತಂಕ ಎಂದಿರುವುದಾಗಿ ವರದಿಯಾಗಿದೆ. ಮಹಿಳೆಯನ್ನು ಸಿಐಎಸ್‌ಎಫ್ ಅಧಿಕಾರಿಗಳು ಕರೆದೊಯ್ದು ವಿಚಾರಣೆ ನಡೆಸುತ್ತಿದ್ದಾರೆ.
 

Trending News