ನವದೆಹಲಿ:ಫೆಬ್ರವರಿ 25ರಂದು ದೇಶದ ಮೊಟ್ಟಮೊದಲ 5G ಸ್ಮಾರ್ಟ್ ಫೋನ್ iQOO3 ಬಿಡುಗಡೆಯಾಗಲಿದೆ. ಈ ಸ್ಮಾರ್ಟ್ ಫೋನ್ ನಲ್ಲಿ ಇದುವರೆಗಿನ ಅತ್ಯಂತ ಶಕ್ತಿಶಾಲಿ qualcomm snapdragon 865 ಪ್ರೊಸೆಸರ್ ಇರಲಿದೆ. ಸದ್ಯ ಈ ಫೋನ್ ಕುರಿತು ಸತತ ಅಪ್ಡೇಟ್ ಬಿಡುಗಡೆಯಾಗುತ್ತಲೇ ಇವೆ. ಫ್ಲಿಪ್ ಕಾರ್ಟ್ ನಲ್ಲಿ ಈ ಫೋನ್ ಮಾರಾಟಕ್ಕೆ ಲಭ್ಯ ಇರಲಿದ್ದು, ಇದಕ್ಕಾಗಿ ಒಂದು ವಿಶೇಷ ಪುಟ ಕೂಡ ಸಿದ್ಧಪಡಿಸಲಾಗಿದೆ.
ಮಾಹಿತಿಗಳ ಪ್ರಕಾರ iQOO3 ಕಂಪನಿ ಚೀನಾದ ಖ್ಯಾತ ಸ್ಮಾರ್ಟ್ ಫೋನ್ ತಯಾರಕ ಕಂಪನಿಯಾಗಿರುವ VIVO ಸ್ಮಾರ್ಟ್ ಫೋನ್ ನ ಸಬ್ ಬ್ರಾಂಡ್ ಆಗಿದೆ. ಇದೀಗ ತನ್ನ ಮೂಲ ಕಂಪನಿಯಿಂದ ಬೇರ್ಪತ್ತಿರುವ ಈ ಕಂಪನಿ ತನ್ನ ನೂತನ ಸ್ಮಾರ್ಟ್ ಫೋನ್ ಮೂಲಕ ಭಾರತಕ್ಕೆ ಲಗ್ಗೆ ಇಡಲಿದೆ. iQOO3 ಈ ಸ್ಮಾರ್ಟ್ ಫೋನ್ ಅನ್ನು GREEKBENCH ನಲ್ಲಿ ಮೊದಲ ಬಾರಿಗೆ ನೋಡಲಾಗಿದೆ. ಲಿಸ್ಟಿಂಗ್ ನಲ್ಲಿ ಈ ಫೋನ್ ಗೆ 'KONA' ಎಂದು ಹೆಸರಿಸಲಾಗಿದೆ.
ಈ ಫೋನ್ ನಲ್ಲಿ 8GB RAM ಸಿಗುವ ಸಾಧ್ಯತೆ ಇದ್ದು, ಅಂಡ್ರಾಯಿಡ್ 10 OS ಆಧರಿಸಿ ಕಾರ್ಯ ನಿರ್ವಹಿಸಲಿದೆ. ಮಾಧ್ಯಮಗಳ ವರದಿಗಳ ಪ್ರಕಾರ GreekBench ನಲ್ಲಿ ಈ ಫೋನ್ ಗೆ 914 ಸಿಂಗಲ್ ಕೋರ್ ಸ್ಕೋರ್ ಹಾಗೂ 3217 ಮಲ್ಟಿ ಕೋರ್ ಸ್ಕೋರ್ ನೀಡಲಾಗಿದೆ. ಇತರೆ ಮಾಧ್ಯಮಗಳ ವರದಿ ಪ್ರಕಾರ iQOO3 ಸ್ಮಾರ್ಟ್ ಫೋನ್ ನಲ್ಲಿ 6.4 ಇಂಚಿನ ಫುಲ್ HD+AMOLED ಡಿಸ್ಪ್ಲೇ ಪರದೆ ಇರಲಿದ್ದು, ಇದು 1080 x 2400 ಪಿಕ್ಸಲ್ ಸ್ಕ್ರೀನ್ ರೆಸೊಲ್ಯೂಶನ್ ಹೊಂದಿರಲಿದೆ.
ಈ ಫೋನ್ ನ ಒಟ್ಟು ಮೂರು ಆವೃತ್ತಿಗಳು ಬಿಡುಗಡೆಯಾಗುವ ಸಾಧ್ಯತೆ ಇದೆ, ಇದರಲ್ಲಿ 6GB, 8GB ಹಾಗೂ 12GB RAM ಗಳ ಮೂರು ಆವೃತ್ತಿಗಳು ಇರಲಿದ್ದು, ಇದು 128GB ಹಾಗೂ 256GB ಆಂತರಿಕ ಶೇಖರಣಾ ಸಾಮರ್ಥ್ಯದೊಂದಿಗೆ ಬಿಡುಗಡೆಯಾಗಲಿವೆ ಎನ್ನಲಾಗಿದೆ. ಫೋಟೋಗಳನ್ನು ಕ್ಲಿಕ್ಕಿಸಲು ಈ ಫೋನ್ ನಲ್ಲಿ ಕ್ವಾಡ್ ರಿಯರ್ ಕ್ಯಾಮೆರಾ ಇರಲಿದ್ದು, ಸೇಲ್ಫಿಗಾಗಿ 16MP ಮುಂಭಾಗದ ಕ್ಯಾಮೆರಾ ನೀಡುವ ಸಾಧ್ಯತೆ ಇದೆ.
ಸುಮಾರು 4,370ಎಂಎಹೆಚ್ ಬ್ಯಾಟರಿ ಸಾಮರ್ಥ್ಯ ಹೊಂದಿರುವ ಈ ಫೋನ್ ಫೋಟೋಗ್ರಾಫಿ ಹವ್ಯಾಸ ಇರುವ ಗ್ರಾಹಕರನ್ನು ಆಕರ್ಷಿಸಲಿದೆ ಎನ್ನಲಾಗಿದೆ. ಆದರೆ, ಇದುವರೆಗೆ ಈ ಫೋನ್ ನ ಅಧಿಕೃತ ಮಾರುಕಟ್ಟೆ ಬೆಲೆ ತಿಳಿದು ಬಂದಿಲ್ಲ. ಸತತವಾಗಿ ಈ ಫೋನ್ ಗಳ ಕುರಿತು ಮುಂಬರುತ್ತಿರುವ ಮಾಹಿತಿಗಳ ಪ್ರಕಾರ ಇದೊಂದು ಪವರ್ ಫುಲ್ ಸ್ಮಾರ್ಟ್ ಫೋನ್ ಸಾಬೀತಾಗುವ ಸಾಧ್ಯತೆ ಇದೆ. ಕಂಪನಿ ಈ ಸ್ಮಾರ್ಟ್ ಫೋನ್ ಬೆಲೆ ಎಷ್ಟು ನಿಗದಿಪಡಿಸಲಿದೆ ಎಂಬುದನ್ನು ಕಾದು ನೋಡಬೇಕು